

ಮೇಷ: ಕುಟುಂಬದಲ್ಲಿ ಸಮನ್ವಯ ಇರಲಿ. ಮಗಳ ಮದುವೆ ಮಾತುಕತೆಗಳು ಮುಂದುವರಿಯುತ್ತವೆ. ಉದ್ಯೋಗದಲ್ಲಿ ಹೊಸ ಅವಕಾಶ. ಶುಭಸಂಖ್ಯೆ:5
ವೃಷಭ: ವೃತ್ತಿಯಲ್ಲಿ ಕೆಲಸದ ಒತ್ತಡ. ಉನ್ನತ ಶಿಕ್ಷಣದಲ್ಲಿ ಗಮನ ಹೆಚ್ಚಿಸುವುದು ಅನಿವಾರ್ಯ. ಕಲಾಕ್ಷೇತ್ರದಲ್ಲಿ ಸಾರ್ವಜನಿಕವಾಗಿ ಮೆಚ್ಚುಗೆ. ಶುಭಸಂಖ್ಯೆ:1
ಮಿಥುನ: ಅವಿವಾಹಿತರಿಗೆ ಮದುವೆ ಯೋಗವಿದೆ. ಉದ್ಯೋಗದಲ್ಲಿ ಪದೋನ್ನತಿ ಸೂಚನೆ. ಲೋಹ ವ್ಯಾಪಾರದಲ್ಲಿ ಲಾಭದಾಯಕ ದಿನ. ಶುಭಸಂಖ್ಯೆ:9
ಕಟಕ:ಕುಟುಂಬದಲ್ಲಿ ಜಾಗ್ರತೆ ತೀರಾ ಅಗತ್ಯ. ವೃತ್ತಿಯಲ್ಲಿ ಪಟ್ಟ ಪರಿಶ್ರಮ ಸೂಕ್ತ ಫಲ ನೀಡುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಹೊಸ ಅವಕಾಶ. ಶುಭಸಂಖ್ಯೆ:9
ಸಿಂಹ: ಮನೆಯಲ್ಲಿ ಹರ್ಷ. ಸರ್ಕಾರಿ ಉದ್ಯೋಗದಲ್ಲಿ ಪ್ರಗತಿ. ಲೋಹ ವ್ಯಾಪಾರದಲ್ಲಿ ಲಾಭ. ರಿಯಲ್ ಎಸ್ಟೇಟ್ನಲ್ಲಿ ಉತ್ತಮ ಪ್ರಗತಿ. ಶುಭಸಂಖ್ಯೆ:3
ಕನ್ಯಾ: ಮದುವೆ ವಿಷಯದಲ್ಲಿ ಸಕಾರಾತ್ಮಕ ಬೆಳವಣಿಗೆ. ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಯಲ್ಲಿ ಯಶಸ್ಸು. ನಾಟ್ಯದಲ್ಲಿ ಉತ್ತಮ ಅವಕಾಶ. ಶುಭಸಂಖ್ಯೆ: 1
ತುಲಾ: ಮನೆಯಲ್ಲಿ ನೆಮ್ಮದಿಯ ವಾತಾವರಣ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ. ಶುಭಸಂಖ್ಯೆ: 8
ವೃಶ್ಚಿಕ: ಸಣ್ಣ ಸಮಸ್ಯೆ ಬಂದೀತು. ಐಟಿ ವೃತ್ತಿಯಲ್ಲಿ ಏರುಪೇರು. ಅಡಿಕೆ ಬೆಳೆಗಾರರಿಗೆ ಪರಿಶ್ರಮ ಅಗತ್ಯ. ಕಲೆಯಲ್ಲಿ ಹೊಸ ಅವಕಾಶ. ಶುಭಸಂಖ್ಯೆ:8
ಧನುಸ್ಸು: ಉದ್ಯೋಗ ಸ್ಥಳದಲ್ಲಿ ಸಂತಸದ ಕ್ಷಚ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಗತಿ. ಸಗಟು ವ್ಯಾಪಾರದಲ್ಲಿ ಲಾಭ. ರಿಯಲ್ ಎಸ್ಟೇಟ್ನಲ್ಲಿ ಗಳಿಕೆ. ಶುಭಸಂಖ್ಯೆ: 3
ಮಕರ: ಜವಾಬ್ದಾರಿಗಳು ಹೆಚ್ಚಾಗುತ್ತವೆ. ವೃತ್ತಿಯಲ್ಲಿ ಸ್ಥಿರತೆ. ಶಿಕ್ಷಣದಲ್ಲಿ ಉತ್ತಮ ಫಲಿತಾಂಶ. ಜೇನು ಮತ್ತು ರೇಷ್ಮೆ ಕೃಷಿಕರಿಗೆ ಶುಭದಿನ. ಶುಭಸಂಖ್ಯೆ:4
ಕುಂಭ: ಆಸ್ತಿ ವಿಚಾರದಲ್ಲಿ ಕುಟುಂಬದಲ್ಲಿ ಒಗ್ಗಟ್ಟು. ಉದ್ಯೋಗದಲ್ಲಿ ಹೊಸ ಅವಕಾಶ. ಕೃಷಿ ಉಪಕರಣ ವ್ಯಾಪಾರದಲ್ಲಿ ಉತ್ತಮ ಲಾಭ. ಶುಭಸಂಖ್ಯೆ:2
ಮೀನ: ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಅನುಕೂಲಕರ ಬೆಳವಣಿಗೆ. ಶಿಕ್ಷಣದಲ್ಲಿ ಯಶಸ್ಸು. ಕಲಾ ಕ್ಷೇತ್ರದಲ್ಲಿ ಹೆಸರು ಮಾಡುವ ಅವಕಾಶ. ಶುಭಸಂಖ್ಯೆ: 3