ಮೇಷ: ಭವಿಷ್ಯದ ಆರ್ಥಿಕ ಯೋಜನೆ ಇಂದು ಕಾರ್ಯಗತವಾಗಲಿದೆ. ಹಳೆಯ ಸ್ನೇಹಿತರ ಭೇಟಿ. ಸಂಗಾತಿಯೊಂದಿಗೆ ತಾಳ್ಮೆಯಿಂದಿರಿ. ಶುಭಸಂಖ್ಯೆ: 7.ವೃಷಭ: ರೆಸ್ಟೋರೆಂಟ್ ವ್ಯವಹಾರದಲ್ಲಿ ಕೀರ್ತಿ. ಗೃಹ ಕೈಗಾರಿಕೆಯ ಮಾಲೀಕರಿಗೆ ಧನಲಾಭ. ಐಟಿ ಕ್ಷೇತ್ರದ ಅತಂತ್ರತೆ ಪರಿಣಾಮ ಬೀರಲಿದೆ. ಶುಭಸಂಖ್ಯೆ: 5.ಮಿಥುನ: ಕೇಂದ್ರ ಸರ್ಕಾರಿ ಹುದ್ದೆಗೆ ಆಯ್ಕೆ. ಖಾಸಗಿ ವಾಹನ ಮಾಲೀಕರಿಗೆ ಕೆಲಸಗಾರರ ಅಭಾವ. ರೇಷ್ಮೆ ವಸ್ತ್ರ ಮಾರಾಟದಲ್ಲಿ ಲಾಭ ಗಳಿಕೆ. ಶುಭಸಂಖ್ಯೆ: 7.ಕಟಕ: ಕಾರ್ಖಾನೆ ನೌಕರರು ಎಚ್ಚರದಿಂದಿರಿ. ಜ್ಯುವೆಲ್ಲರಿ ಖರೀದಿಗೆ ಕೂಡಿಟ್ಟ ಹಣವ್ಯಯ. ತಾಯಿಯ ಆರೋಗ್ಯದ ಬಗ್ಗೆ ಗಮನ ಇರಲಿ. ಶುಭಸಂಖ್ಯೆ: 4.ಸಿಂಃಹ: ಸಾರ್ವಜನಿಕ ಕ್ಷೇತ್ರದ ನೇತಾರರಿಗೆ ಶುಭದಿನ. ಶಿಕ್ಷಣ ಇಲಾಖೆಯ ನೌಕರರಿಗೆ ವರ್ಗಾವಣೆ. ಧರ್ಮಗುರುಗಳ ಮಾರ್ಗದರ್ಶನ. ಶುಭಸಂಖ್ಯೆ: 7.ಕನ್ಯಾ: ಆಸ್ತಿ ವಿವಾದದ ಗೊಂದಲ ಮುಂದುವರಿಯಲಿದೆ. ಸಾಂಪ್ರದಾಯಿಕ ವಸ್ತ್ರ ಮಾರಾಟದಲ್ಲಿ ಲಾಭ. ಛಾಯಾಗ್ರಾಹಕರಿಗೆ ಶುಭದಿನ. ಶುಭಸಂಖ್ಯೆ: 2.ತುಲಾ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅಭಿವೃದ್ಧಿ. ದೇವಾಲಯ ನಿರ್ವಣಕ್ಕೆ ಕುಟುಂಬದ ಸಹಕಾರ. ವೈಮಾನಿಕ ಕ್ಷೇತ್ರದಲ್ಲಿ ಕೆಲಸ. ಶುಭಸಂಖ್ಯೆ: 9.ವೃಶ್ಚಿಕ: ವಾಣಿಜ್ಯ ಮತ್ತು ಕಾನೂನು ವಿದ್ಯಾರ್ಥಿಗಳಿಗೆ ಪ್ರಗತಿ. ಆತ್ಮೀಯರ ವಿಯೋಗದಿಂದ ದುಃಖ. ಕನಸಿನ ನಿವೇಶನ ಖರೀದಿಗೆ ನಿರ್ಧಾರ. ಶುಭಸಂಖ್ಯೆ: 7.ಧನುಸ್ಸು: ಸಿಎ ವಿದ್ಯಾರ್ಥಿಗಳಿಗೆ ಯಶಸ್ಸು. ವೈದ್ಯ ವೃತ್ತಿಯಲ್ಲಿ ಹೊಸ ಅನುಭವವಾಗಲಿದೆ. ಮಗಳ ಮದುವೆಗೆ ಸಂಬಂಧ ಕೂಡಿ ಬರಲಿದೆ. ಶುಭಸಂಖ್ಯೆ: 1.ಮಕರ: ಹಿರಿಯ ಅಧಿಕಾರಿಗಳಿಂದ ಬೆಂಬಲ ಸಿಗಲಿದೆ. ಸ್ಟೇಷನರಿ ವ್ಯಾಪಾರದಲ್ಲಿ ಲಾಭ. ಔಷಧಗಳ ತಯಾರಿಕೆಯಲ್ಲಿ ಲಾಭ ಗಳಿಸುವಿರಿ. ಶುಭಸಂಖ್ಯೆ: 4.ಕುಂಭ: ಮಹಿಳಾ ಉದ್ಯಮಿಗಳಿಗೆ ಒತ್ತಡ ಕಡಿಮೆಯಾಗಲಿದೆ. ಪೆಟ್ರೋಲ್ ಬಂಕ್ ಮಾಲೀಕರಿಗೆ ಶುಭ. ವೀಸಾ ಸಮಸ್ಯೆ ಬಗೆಹರಿಯಲಿದೆ.ಶುಭಸಂಖ್ಯೆ: 8.ಮೀನ: ಆಸ್ತಿ ವಿವಾದ ನ್ಯಾಯಾಲಯದ ಮೆಟ್ಟಿಲೇರಲಿದೆ. ವಿಚ್ಛೇದಿತರಿಗೆ ವಿವಾಹ ಯೋಗ. ಬ್ಯಾಂಕ್ ಅಧಿಕಾರಿಗಳಿಗೆ ವರ್ಗಾವಣೆ ಸಾಧ್ಯತೆ. ಶುಭಸಂಖ್ಯೆ: 6