ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಹಣಕಾಸಿನ ಮುಗ್ಗಟ್ಟು ಕಾಡುವುದು

Nitya Bhavisya Vijayavani
Published on

ಮೇಷ: ಆರೋಗ್ಯದ ಕಡೆ ಗಮನವಿರಲಿ. ಉದ್ಯೋಗ ಕಳೆದುಕೊಳ್ಳುವ ಭೀತಿ. ಧಾರ್ವಿುಕ ಕಾರ್ಯಕ್ರಮ ದಿಂದ ಮನಸ್ಸಿಗೆ ಸಮಾಧಾನ. ಶುಭಸಂಖ್ಯೆ: 9

ವೃಷಭ: ಆಸ್ತಿ ಮಾತುಕತೆ. ಪದವಿ ಪ್ರಾಪ್ತಿಯಲ್ಲಿ ಹಿತಶತ್ರು ಕಾಟ. ಎಲೆಕ್ಟ್ರಾನಿಕ್ಸ್ ಮಾಧ್ಯಮಗಳ ಉದ್ಯೋಗಿಗಳಿಗೆ ಅನಿರೀಕ್ಷಿತ ಧನ ಲಾಭ. ಶುಭಸಂಖ್ಯೆ: 8

ಮಿಥುನ: ಹಿರಿಯರ ಆರೋಗ್ಯದಲ್ಲಿ ತೊಂದರೆಯಾದೀತು. ಆತ್ಮೀಯರ ಆಗಮನ. ಲಾಭದಾಯಕ ಉದ್ಯೋಗಕ್ಕೆ ರಾಜೀನಾಮೆ ಯೋಚನೆ. ಶುಭಸಂಖ್ಯೆ: 5

ಕಟಕ: ವ್ಯರ್ಥ ಕಾಲಹರಣ ಮಾಡುವುದು ತರವಲ್ಲ. ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದಲ್ಲಿ ಜಯ ದೊರೆಯುವುದು. ಶುಭಸಂಖ್ಯೆ: 9

ಸಿಂಹ: ಸರ್ಕಾರಿ ಉದ್ಯೋಗದಲ್ಲಿ ಬದಲಾವಣೆಯಾಗಲಿದೆ. ಹೊಸ ಉದ್ಯೋಗದ ಸಾಧ್ಯತೆಯಿದೆ. ದಂಪತಿಗಳ ಮಧ್ಯೆ ಕೌಟುಂಬಿಕ ಕಲಹ. ಶುಭಸಂಖ್ಯೆ: 1

ಕನ್ಯಾ: ಅಧ್ಯಾಪಕ ವೃತ್ತಿಯವರಿಗೆ ಶುಭ ದಿನ. ನೀರಿನಿಂದ ಅಪಾಯ. ಪ್ರಯಾಣದಲ್ಲಿ ಜಾಗರೂಕತೆಯಿಂದಿರಿ. ಗ್ರಾಹಕರಿಂದ ತೊಂದರೆ. ಶುಭಸಂಖ್ಯೆ: 3

ತುಲಾ: ಜೇನು ಕೃಷಿಕರಿಗೆ ದುಪ್ಪಟ್ಟು ಲಾಭ. ಹಣಕಾಸಿನ ಮುಗ್ಗಟ್ಟು ಕಾಡುವುದು. ಸ್ನೇಹಿತರ ಮಧ್ಯೆ ಕಲಹ. ಮನೆಯಲ್ಲಿ ಹಬ್ಬದ ಸಂಭ್ರಮ. ಶುಭಸಂಖ್ಯೆ: 8

ವೃಶ್ಚಿಕ: ಲೇವಾದೇವಿ ವ್ಯವಹಾರಸ್ಥರಿಗೆ ಲಾಭ. ಮಕ್ಕಳಿಂದ ಸುವಾರ್ತೆಯನ್ನು ಕೇಳುವಿರಿ. ಪುಸ್ತಕ ವ್ಯಾಪಾರಸ್ಥರಿಗೆ ಶುಭದಾಯಕ ದಿನ. ಶುಭಸಂಖ್ಯೆ: 4

ಧನಸ್ಸು: ಮಾನಸಿಕ ಒತ್ತಡ. ಧ್ಯಾನ-ಪ್ರಾಣಾಯಾಮದಿಂದ ಸಮಾಧಾನ. ಸಾಕುಪ್ರಾಣಿಗಳಿಂದ ತೊಂದರೆ. ದೂರ ಪ್ರಯಾಣದ ಯೋಗ. ಶುಭಸಂಖ್ಯೆ: 3

ಮಕರ: ಕಲಾವಿದರಿಗೆ ಪ್ರಗತಿದಾಯಕ ದಿನ. ವ್ಯವಹಾರದಲ್ಲಿ ನಷ್ಟ ಉಂಟಾಗುವ ಸಾಧ್ಯತೆ, ಜಾಗರೂಕರಾಗಿರಿ. ಹಿತ ಶತ್ರುಗಳ ಬಗ್ಗೆ ಎಚ್ಚರ. ಶುಭಸಂಖ್ಯೆ: 7

ಕುಂಭ: ಆಕಸ್ಮಿಕ ಧನಾಗಮನ, ಸಂತೋಷ. ಮನೆಗೆ ಬಂಧುಮಿತ್ರರ ಆಗಮನ. ಆಹ್ಲಾದಕರ ಹರಟೆಯಿಂದ ಖುಷಿ. ಕೃಷಿಕರಿಗೆ ಶುಭಫಲ. ಶುಭಸಂಖ್ಯೆ: 2

ಮೀನ: ಉದ್ಯೋಗಸ್ಥ ಮಹಿಳೆಯರಿಗೆ ವರ್ಗಾವಣೆ. ಪಶು ಸಂಗೋಪನೆಯಿಂದ ಲಾಭ ಬರಲಿದೆ. ಉದ್ಯೋಗ ಹುಡುಕಾಟದ ಯತ್ನ ವಿಫಲ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net