ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಹಣಕಾಸಿನ ಸಂಸ್ಥೆಯಿಂದ ಧನ ಸಹಾಯ

Nitya Bhavisya Vijayavani
Published on

ಮೇಷ: ಹಣಕಾಸಿನ ಸಂಸ್ಥೆಯಿಂದ ಧನ ಸಹಾಯ. ಉದ್ಯೋಗಸ್ಥ ಮಹಿಳೆಯರಿಗೆ ಶುಭ. ಧಾನ್ಯ ಸಂಗ್ರಹಣೆ ಮಾಡುವವರಿಗೆ ಶುಭ. ಶುಭಸಂಖ್ಯೆ: 8

ವೃಷಭ: ಸರ್ಕಾರಿ ಕೆಲಸಗಳಲ್ಲಿ ಯಶಸ್ಸು ದೊರೆತು ಮಾನಸಿಕ ನೆಮ್ಮದಿ. ಗೃಹ ನಿರ್ವಣದ ಯೋಗವಿದೆ. ಬಾಕಿ ಹಣ ಕೈ ಸೇರುವುದು. ಶುಭಸಂಖ್ಯೆ: 1

ಮಿಥುನ: ಹಿರಿಯರ ಆರೋಗ್ಯದಲ್ಲಿ ಏರುಪೇರು ಆಗಬಹುದು. ಕೆಲಸದಲ್ಲಿ ಶ್ರಮಕ್ಕೆ ತಕ್ಕ ಫಲವಿದೆ. ತಾಂತ್ರಿಕ ವಿದ್ಯಾರ್ಥಿಗಳಿಗೆ ದೇಹಾಲಸ್ಯ, ಶುಭಸಂಖ್ಯೆ:9

ಕಟಕ: ಮಾನಸಿಕವಾಗಿ ಉಲ್ಲಸಿತರಾಗಿರುತ್ತೀರಿ. ವ್ಯಾಪಾರಿಗಳಿಗೆ ಅಭಿವೃದ್ಧಿಯಿದೆ. ಮನೆ ನಿರ್ವಣದ ಸಮಸ್ಯೆ ಬಗೆಹರಿಯುವುದು. ಶುಭಸಂಖ್ಯೆ: 4

ಸಿಂಹ: ಕಂಪ್ಯೂಟರ್ ವ್ಯಾಪಾರದಲ್ಲಿ ಲಾಭವಿದೆ. ದಿನ ಬಳಕೆ ವಸ್ತು ವ್ಯಾಪಾರದಲ್ಲಿ ನಿರೀಕ್ಷಿತ ಆದಾಯ. ಬಂಧುಗಳಿಂದ ಅಶುಭ ವಾರ್ತೆ. ಶುಭಸಂಖ್ಯೆ:5

ಕನ್ಯಾ: ಮಕ್ಕಳಿಂದ ಸಂತೋಷದ ಸುದ್ದಿ ಸಿಗುವುದು. ಮನಸ್ಸು ದುರ್ಬಲವಾಗಿರುತ್ತದೆ. ವ್ಯಾಪಾರಸ್ಥರ ಮಾನಸಿಕ ದ್ವಂದ್ವದಿಂದ ನಷ್ಟ. ಶುಭಸಂಖ್ಯೆ: 8

ತುಲಾ: ಹಿರಿಯರ ಕೆಲಸಗಳಲ್ಲಿ ಒತ್ತಡ. ಅಡಕೆ ಮತ್ತು ಭತ್ತದ ಕೃಷಿಯವರಿಗೆ ಆಕಸ್ಮಿಕ ಧನ ಲಾಭ. ಉದ್ಯೋಗಾಕಾಂಕ್ಷಿಗಳಿಗೆ ಶುಭ. ಶುಭಸಂಖ್ಯೆ:1

ವೃಶ್ಚಿಕ: ಹಿರಿಯರೊಂದಿಗೆ ಮನಸ್ತಾಪ ಒಳ್ಳೆಯದಲ್ಲ. ಭೂಮಿಯ ವ್ಯವಹಾರದಲ್ಲಿ ನಷ್ಟ ಸಾಧ್ಯತೆ. ಸಂಗಾತಿಗೆ ರಕ್ತದೊತ್ತಡ ಕಾಡೀತು. ಶುಭಸಂಖ್ಯೆ: 4

ಧನಸ್ಸು: ಹೈನುಗಾರಿಕೆಯಲ್ಲಿ ಹೆಚ್ಚಿನ ಆದಾಯ. ಮಂಗಳ ಕಾರ್ಯಕ್ಕೆ ಸಿದ್ಧತೆ. ಆರೋಗ್ಯದಲ್ಲಿ ಚೇತರಿಕೆಯಾಗಿ ಮಾನಸಿಕ ಸಮಾಧಾನ. ಶುಭಸಂಖ್ಯೆ: 6

ಮಕರ: ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ. ವಿವಾಹ ಕಾರ್ಯದಲ್ಲಿ ಮುನ್ನಡೆ. ಸ್ತ್ರೀಯರು ಇಷ್ಟವಾದ ಉಡುಗೊರೆಯನ್ನು ಪಡೆಯಲಿದ್ದೀರಿ. ಶುಭಸಂಖ್ಯೆ: 9

ಕುಂಭ: ಕೆಲಸಗಳಲ್ಲಿ ನಿರೀಕ್ಷೆಗಿಂತ ಹೆಚ್ಚು ಲಾಭ ಬಂದು ಸಂತಸ. ಗುತ್ತಿಗೆದಾರರಿಗೆ ಒಳ್ಳೆಯ ದಿನ. ಮಿತ್ರರಿಂದ ವಂಚನೆಯಾಗಬಹುದು. ಶುಭಸಂಖ್ಯೆ:2

ಮೀನ: ಮಹಿಳೆಯರಿಗೆ ಉದ್ಯೋಗದಲ್ಲಿ ಒತ್ತಡ. ಆಮದು ವ್ಯವಹಾರ ಮಾಡುವವರಿಗೆ ನೆಮ್ಮದಿ. ಸ್ಟೇಷನರಿ ವ್ಯಾಪಾರಸ್ಥರಿಗೆ ಶುಭದಿನ. ಶುಭಸಂಖ್ಯೆ:1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net