

ಮೇಷ: ಶಿಕ್ಷಕರಿಗೆ ಹೆಚ್ಚಿನ ಒತ್ತಡ. ಹಣಕಾಸು ಸಂಸ್ಥೆಯ ಉದ್ಯೋಗಸ್ಥರಿಗೆ ಅಷ್ಟೊಂದು ಒಳ್ಳೆಯ ದಿನವಲ್ಲ. ಕಲಾವಿದರಿಗೆ ಮಾನಸಿಕ ಒತ್ತಡ. ಶುಭಸಂಖ್ಯೆ: 3
ವೃಷಭ: ಆರ್ಥಿಕ ಪರಿಸ್ಥಿತಿ ನಿರೀಕ್ಷೆಗಿಂತ ಉತ್ತಮವಾಗಿರುತ್ತದೆ. ಆಸ್ತಿ ಕಲಹಗಳು ಅಂತ್ಯವಾಗಿ ಸಮಾಧಾನ. ರಕ್ತದೊತ್ತಡ ಕಡಿಮೆ ಆಗಲಿದೆ. ಶುಭಸಂಖ್ಯೆ: 9
ಮಿಥುನ: ಲೇವಾದೇವಿ, ಆಹಾರ ಸಂಸ್ಕರಣೆ ಕ್ಷೇತ್ರದ ವ್ಯಾಪಾರ ದಲ್ಲಿ ಲಾಭ. ಕಟ್ಟಡ ವ್ಯವಹಾರಸ್ಥರಿಗೆ ಆದಾಯ. ಒಟ್ಟಾರೆ ಶುಭದಾಯಕ ದಿನ. ಶುಭಸಂಖ್ಯೆ: 6
ಕಟಕ: ಧಾರ್ವಿುಕ ಕೆಲಸಗಳಲ್ಲಿ ಉತ್ಸಾಹ. ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಿಕೊಳ್ಳುವಿರಿ. ಖರ್ಚುಗಳಲ್ಲಿ ಮಿತವ್ಯಯ ಸಾಧಿಸಿ. ಶುಭಸಂಖ್ಯೆ:1
ಸಿಂಹ: ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆ. ಉದ್ಯೋಗದಲ್ಲಿ ಬಡ್ತಿ ದೊರೆಯುವುದು. ಕಂಪ್ಯೂಟರ್ ವಿದ್ಯಾರ್ಥಿಗಳಿಗೆ ಶ್ರಮದ ಅಗತ್ಯವಿದೆ. ಶುಭಸಂಖ್ಯೆ: 7
ಕನ್ಯಾ: ಗರ್ಭಿಣಿಯರು ಎಚ್ಚರದಿಂದಿರಿ. ಅತಿ ಆತ್ಮವಿಶ್ವಾಸದಿಂದ ಸೋಲು ಉಂಟಾದೀತು. ಗಣ್ಯ ವ್ಯಕ್ತಿಗಳ ಸಹಾಯ ಸಿಗುವುದು. ಶುಭಸಂಖ್ಯೆ:4
ತುಲಾ: ಮಹಿಳೆಯರಿಗೆ ಉದ್ಯೋಗದಲ್ಲಿ ಆದ್ಯತೆ. ಅಧಿಕಾರಿಗಳಿಗೆ ಉತ್ತಮ ಪ್ರಗತಿ. ಅನಿವಾರ್ಯವಾಗಿ ನೌಕರಿಯಲ್ಲಿ ಬದಲಾವಣೆ. ಶುಭಸಂಖ್ಯೆ: 2
ವೃಶ್ಚಿಕ: ವ್ಯಾಪಾರ ವ್ಯವಹಾರಗಳಲ್ಲಿ ಚೇತರಿಕೆಯಾಗುವುದು. ಕೃಷಿ ವಿಸ್ತರಣೆಗೆ ಯೋಜನೆ. ಇಂದು ನಿಮಗೆ ಅದೃಷ್ಟದ ದಿನವಾಗಿರುತ್ತದೆ. ಶುಭಸಂಖ್ಯೆ: 9
ಧನಸ್ಸು: ಕುಟುಂಬದಲ್ಲಿ ಸಾಮರಸ್ಯ. ಹಣಕ್ಕೆ ತೊಂದರೆ ಆಗುವುದಿಲ್ಲ. ಮನೆ ಕಟ್ಟಿಕೊಳ್ಳುವ ಬಹುದಿನದ ಆಸೆ ಕಾರ್ಯಗತವಾಗಲಿದೆ. ಶುಭಸಂಖ್ಯೆ: 6
ಮಕರ: ರಾಜಕಾರಣಿಗಳಿಗೆ ಉತ್ತಮ ಸಮಯ. ಆಂತರಿಕ ಶತ್ರುಗಳ ಉಲ್ಬಣ ಸಾಧ್ಯತೆ. ಮನೆಯ ನವೀಕರಣದ ರೂಪುರೇಷೆ ಹಾಕುವಿರಿ. ಶುಭಸಂಖ್ಯೆ: 3
ಕುಂಭ: ಖಾಸಗಿ ಉದ್ಯೋಗದಲ್ಲಿ ಇರುವವರು ಎಚ್ಚರದಿಂದಿರಿ. ಅವಕಾಶದ ಸದುಪಯೋಗ ಮಾಡಿಕೊಳ್ಳಿ. ದೈವದ ಮೇಲೆ ವಿಶ್ವಾಸವಿಡಿ. ಶುಭಸಂಖ್ಯೆ:5
ಮೀನ: ಹಣಕಾಸಿನ ವಿಷಯದಲ್ಲಿ ಗಣನೀಯ ಅಭಿವೃದ್ಧಿ. ಕೈಗೊಂಡ ತೀರ್ವನಗಳನ್ನು ಬದಲಿಸಬೇಡಿ, ಅನವಶ್ಯಕ ಖರ್ಚು ಬೇಡ. ಶುಭಸಂಖ್ಯೆ: 7