

ಮೇಷ: ಕೃಷಿಯಿಂದ ಹೆಚ್ಚು ಆದಾಯ. ಆತ್ಮವಿಶ್ವಾಸದ ಕೊರತೆಯಿಂದ ವಿಫಲರಾಗುವಿರಿ. ಕೆಲಸಗಳನ್ನು ರಹಸ್ಯವಾಗಿಡಲು ಪ್ರಯತ್ನಿಸಿ. ಶುಭಸಂಖ್ಯೆ: 9
ವೃಷಭ: ನಾಯಕತ್ವಕ್ಕೆ ಸಮಾನವಾದ ಸ್ಥಾನಮಾನ ಪಡೆಯುವಿರಿ. ಸಮಾಜ ಸೇವೆಯಲ್ಲಿ ತೊಡಗುವಿರಿ. ಅನಿರೀಕ್ಷಿತ ಧನ ಲಾಭವಾಗಲಿದೆ. ಶುಭಸಂಖ್ಯೆ: 1
ಮಿಥುನ: ಜವಾಬ್ದಾರಿಗಳನ್ನು ಜಾಣ್ಮೆಯಿಂದ ನಿರ್ವಹಿಸುವಿರಿ. ಮುದ್ರಣ ಕ್ಷೇತ್ರದವರಿಗೆ ಲಾಭದಲ್ಲಿ ಕುಸಿತ. ಮಕ್ಕಳ ಬಗ್ಗೆ ಗಮನಹರಿಸಿ. ಶುಭಸಂಖ್ಯೆ: 5
ಕಟಕ: ಸಾಹಿತ್ಯ, ಸಂಗೀತಶಾಸ್ತ್ರಜ್ಞರಿಗೆ ಗೌರವ. ಸರ್ಕಾರಿ ನೌಕರಸ್ಥರಿಗೆ ಒತ್ತಡ. ಹಿತಶತ್ರುಗಳ ಕಾಟ ತಪ್ಪಲು ಕುಲದೇವರನ್ನು ಆರಾಧಿಸಿ. ಶುಭಸಂಖ್ಯೆ: 3
ಸಿಂಹ: ಸಾಮಾಜಿಕ ಜನಪ್ರಿಯತೆ ಹೆಚ್ಚಾಗಲಿದೆ. ನಿರೀಕ್ಷಿತ ಬದಲಾವಣೆಗಳು ಕಂಡು ಬರುತವೆ. ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ. ಶುಭಸಂಖ್ಯೆ:8
ಕನ್ಯಾ: ಕೃಷಿಕರಿಗೆ ಖರೀದಿಯಲ್ಲಿ ಮೋಸವಾಗುವ ಸಾಧ್ಯತೆ. ದ್ರವರೂಪದ ಉತ್ಪನ್ನ ವ್ಯಾಪಾರದಲ್ಲಿ ಲಾಭ. ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆ. ಶುಭಸಂಖ್ಯೆ: 7
ತುಲಾ: ವಿದ್ಯಾರ್ಥಿಗಳಿಗೆ ಶುಭದಾಯಕ ದಿನವಲ್ಲ. ವೃತ್ತಿಯಲ್ಲಿ ಬದಲಾವಣೆ ಸಾಧ್ಯತೆ ಇದೆ. ಕೌಟುಂಬಿಕ ವಿಚಾರದಲ್ಲಿ ಎಚ್ಚರವಿರಲಿ. ಶುಭಸಂಖ್ಯೆ: 7
ವೃಶ್ಚಿಕ: ಉಪನ್ಯಾಸಕರಿಗೆ ಖರ್ಚಿನಲ್ಲಿ ಹಿಡಿತವಿರಲಿ. ಅಧಿಕಾರಿಗಳಿಂದ ಪೋ›ತ್ಸಾಹ ದೊರೆಯಲಿದೆ. ಆರೋಗ್ಯದ ವಿಷಯದಲ್ಲಿ ನೆಮ್ಮದಿ. ಶುಭಸಂಖ್ಯೆ: 8
ಧನಸ್ಸು: ಲೆಕ್ಕ ಪರಿಶೋಧಕರಿಗೆ ಲಾಭ. ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ. ಸಹೋದ್ಯೋಗಿಗಳೊಂದಿಗೆ ಬಾಂಧವ್ಯ ವೃದ್ಧಿ. ಅಶುಭ ಸುದ್ದಿ. ಶುಭಸಂಖ್ಯೆ: 9
ಮಕರ: ಅವಿವಾಹಿತರಿಗೆ ವಿವಾಹ ಯೋಗ. ಹಣದ ನಿರ್ವಹಣೆಯಲ್ಲಿ ವೈಫಲ್ಯ ಉಂಟಾಗಬಹುದು. ಒಡಹುಟ್ಟಿದವರಿಗೆ ಸಹಾಯ ಮಾಡುವಿರಿ. ಶುಭಸಂಖ್ಯೆ 2
ಕುಂಭ: ಐಟಿ ಉದ್ಯೋಗದಲ್ಲಿರುವವರು ಎಚ್ಚರದಿಂದಿರಿ. ದಿನಸಿ ವ್ಯಾಪಾರಿಗಳಿಗೆ ಖರ್ಚು ವೆಚ್ಚ ಅಧಿಕ. ಭೂ ಖರೀದಿ ವಿಚಾರದಲ್ಲಿ ಎಚ್ಚರ. ಶುಭಸಂಖ್ಯೆ: 7
ಮೀನ: ಸಗಟು ವ್ಯವಹಾರಗಳಲ್ಲಿ ಹೆಚ್ಚು ಲಾಭ ಬರದು. ಧಾರ್ವಿುಕ ವಿಷಯಗಳಲ್ಲಿ ಒಲವು. ರಾಜಕೀಯ ವ್ಯಕ್ತಿಗಳಿಗೆ ಅಶುಭ ಫಲ. ಶುಭಸಂಖ್ಯೆ: 8