ನಿತ್ಯ ಭವಿಷ್ಯ: ಈ ರಾಶಿಯ ವಿವಾಹಾಕಾಂಕ್ಷಿಗಳಿಗೆ ಶುಭ ಸುದ್ದಿ

Nitya Bhavisya Vijayavani
Published on

ಮೇಷ: ಹಿರಿಯ ಅಧಿಕಾರಿಗಳಿಂದ ಒತ್ತಡ. ಪಾಲುದಾರಿಕೆಯಲ್ಲಿ ಹುಷಾರಾಗಿರಿ. ಕುಟುಂಬದಲ್ಲಿ ಶುಭ ಕಾರ್ಯದ ಸಂಭ್ರಮ. ಶುಭಸಂಖ್ಯೆ: 9

ವೃಷಭ: ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಆಸ್ತಿ ಕಲಹಕ್ಕೆ ರ್ತಾಕ ಅಂತ್ಯ ದೊರೆತು ಸಮಾಧಾನ. ನಿಮ್ಮ ಪಾಲಿಗೆ ಉತ್ತಮ ದಿನ. ಶುಭಸಂಖ್ಯೆ: 1

ಮಿಥುನ: ಕಾನೂನು ವಿದ್ಯಾರ್ಥಿಗಳಿಗೆ ಉತ್ತಮ ಸಮಯ. ಮಹಿಳೆಯರು ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇದ್ದರೆ ಮಾನಸಿಕ ಶಾಂತಿ. ಶುಭಸಂಖ್ಯೆ: 5

ಕಟಕ: ವಿವಾಹಾಕಾಂಕ್ಷಿಗಳಿಗೆ ಶುಭ ಸುದ್ದಿ. ರಿಯಲ್ ಎಸ್ಟೇಟ್ ವ್ಯವಹಾರದ ಹೂಡಿಕೆಗೆ ಸುಸಮಯ. ತೀರ್ಥಯಾತ್ರೆಯ ಬಗ್ಗೆ ಯೋಜನೆ. ಶುಭಸಂಖ್ಯೆ: 3

ಸಿಂಹ: ವಿನಾಕಾರಣ ಹೆದರಿಕೆ. ಏನೂ ಆಗದು ಭಯಬೇಡ. ಕಲಾವಿದರಿಗೆ ವಿಶೇಷ ವೇದಿಕೆ ಲಭ್ಯ. ವೈದ್ಯಕಿಯ ವಿದ್ಯಾರ್ಥಿಗಳಿಗೆ ಯಶಸ್ಸು. ಶುಭಸಂಖ್ಯೆ: 7

ಕನ್ಯಾ: ಆಸ್ತಿ ನೋಂದಣಿ ಪ್ರಕ್ರಿಯೆ ಆರಂಭ. ಪೆಟ್ರೋಲ್ ಬಂಕ್ ನೌಕರರಿಗೆ ಭಡ್ತಿ. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ. ಶುಭಸಂಖ್ಯೆ: 7

ತುಲಾ: ಆಹಾರದಲ್ಲಿ ವ್ಯತ್ಯಾಸವಾಗಿ ಅನಾರೋಗ್ಯ. ಹೋಟೆಲ್ ವ್ಯವಹಾರದಲ್ಲಿ ಹಣಕಾಸಿನ ತೊಡಕು ನಿವಾರಣೆ. ವೃತ್ತಿಯಲ್ಲಿ ಪ್ರಗತಿ. ಶುಭಸಂಖ್ಯೆ: 4

ವೃಶ್ಚಿಕ: ಶಿಕ್ಷಣ ಇಲಾಖೆಯ ಕೆಲಸಗಾರರಿಗೆ ಅನುಕೂಲ. ಕುಟುಂಬದೊಡನೆ ದೇವತಾ ದರ್ಶನ. ಮಗಳ ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 9

ಧನಸ್ಸು: ಕ್ಯಾಂಟೀನ್ ವ್ಯಾಪಾರ ಉತ್ತಮ. ಪುಸ್ತಕದ ಅಂಗಡಿ ವ್ಯಾಪಾರಸ್ಥರಿಗೆ ಅನಿರೀಕ್ಷಿತ ಆದಾಯ. ಲೇವಾದೇವಿ ವ್ಯವಹಾರಗಳು ತೃಪ್ತಿಕರ. ಶುಭಸಂಖ್ಯೆ: 1

ಮಕರ: ಗಾಯಕರಿಗೆ, ಕವಿಗಳಿಗೆ ಸನ್ಮಾನ. ಬರವಣಿಗೆಯಿಂದ ಹಣ ಬರಲಿದೆ. ಐಟಿ ಉದ್ಯೋಗಿಗಳಿಗೆ ಉತ್ತಮ ಪ್ರಗತಿದಾಯಕ ದಿನ. ಶುಭಸಂಖ್ಯೆ: 6

ಕುಂಭ: ಹೊಸ ಜನರ ಭೇಟಿ. ಸರ್ಕಾರಿ ಕೆಲಸಗಳಲ್ಲಿ ಮುನ್ನಡೆ. ಕೃಷಿಕರ ಆದಾಯದಲ್ಲಿ ಹೆಚ್ಚಳ. ಅಂದುಕೊಂಡ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ: 3

ಮೀನ: ಪೀಠೋಪಕರಣಗಳ ವ್ಯಾಪಾರದಲ್ಲಿ ಅಧಿಕ ಶ್ರಮ. ಕಟ್ಟಡ ವ್ಯಾಪಾರಸ್ಥರಿಗೆ ಅಲ್ಪ ಆದಾಯ. ಷೇರು ವ್ಯವಹಾರದಲ್ಲಿ ಅನುಕೂಲ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net