ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಷೇರು ವ್ಯವಹಾರದಲ್ಲಿ ಉತ್ತಮ ಆದಾಯ ಬರುವುದು

Nitya Bhavisya Vijayavani
Published on

ಮೇಷ: ಸಾಲ ಮರುಪಾವತಿ ಮಾಡಿದ ಸಮಾಧಾನ. ಸಣ್ಣ ಪ್ರವಾಸ ಕೈಗೊಳ್ಳುವಿರಿ. ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಶುಭಸಂಖ್ಯೆ: 8

ವೃಷಭ: ಇಷ್ಟ ವಸ್ತುಗಳ ಖರೀದಿ ಮಾಡುವಿರಿ. ಕ್ರೀಡಾಸಕ್ತರಿಗೆ ಶುಭ. ಪುಣ್ಯಕ್ಷೇತ್ರಗಳ ಭೇಟಿ. ಸ್ವಗ್ರಾಮಕ್ಕೆ ಮನೆ ಬದಲಾಯಿಸುವ ಯೋಚನೆ. ಶುಭಸಂಖ್ಯೆ: 2

ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ಗೌರವ. ಮಕ್ಕಳಿಂದ ನಿಮ್ಮ ಪ್ರತಿಷ್ಠೆ ಹೆಚ್ಚುವುದು. ಮಿತ್ರರಿಂದ ಮನೆ ಖರೀದಿಗೆ ಮಾರ್ಗದರ್ಶನ ಸಿಗಲಿದೆ. ಶುಭಸಂಖ್ಯೆ: 9

ಕಟಕ: ದಿನಸಿ ವ್ಯಾಪಾರದಲ್ಲಿ ಲಾಭ. ಪುಸ್ತಕ ವ್ಯಾಪಾರದಲ್ಲಿ ಮಧ್ಯಮ ಆದಾಯ. ಷೇರು ವ್ಯವಹಾರದಲ್ಲಿ ಉತ್ತಮ ಆದಾಯ ಬರುವುದು. ಶುಭಸಂಖ್ಯೆ: 1

ಸಿಂಹ: ದಾಂಪತ್ಯದಲ್ಲಿ ಅನ್ಯೋನ್ಯತೆ ಮುಂದುವರಿಯಲಿದೆ. ಕೋರ್ಟ್ ವಿಷಯದಲ್ಲಿ ಜಯ ನಿಮ್ಮ ಕಡೆಗೆ. ಕಣ್ಣಿನ ಸಮಸ್ಯೆ ಸಾಧ್ಯತೆ. ಶುಭಸಂಖ್ಯೆ: 7

ಕನ್ಯಾ: ಶಿಕ್ಷಕ ವೃತ್ತಿಯವರಿಗೆ ಶುಭ ಸುದ್ದಿ. ಅನಿರೀಕ್ಷಿತ ಧನ ಲಾಭವಾಗುವುದು. ವಾಣಿಜ್ಯ ಇಲಾಖೆಯಲ್ಲಿ ಇರುವವರಿಗೆ ಉತ್ತಮ ದಿನ. ಶುಭಸಂಖ್ಯೆ: 3

ತುಲಾ: ಮಾತಿನಲ್ಲಿ ಹಿಡಿತವಿರಲಿ. ಹಿರಿಯರನ್ನು ಗೌರವದಿಂದ ನಡೆಸಿಕೊಳ್ಳಿ. ಹಿರಿಯ ಅಧಿಕಾರಿಗಳಿಂದ ತೊಂದರೆ ಉಂಟಾಗಬಹುದು. ಶುಭಸಂಖ್ಯೆ:4

ವೃಶ್ಚಿಕ: ಸನ್ಮಾನ ಸಮಾರಂಭಕ್ಕಾಗಿ ಪ್ರಯಾಣ. ಉದರ ಸಂಬಂಧಿ ಆರೋಗ್ಯದಲ್ಲಿ ವ್ಯತ್ಯಾಸ. ಕಿರುತೆರೆ ಕ್ಷೇತ್ರದ ಕಲಾವಿದರಿಗೆ ಶುಭ ಫಲ. ಶುಭಸಂಖ್ಯೆ: 2

ಧನಸ್ಸು: ನೃತ್ಯ ತರಬೇತಿದಾರರು ಗೌರವಕ್ಕೆ ಪಾತ್ರರಾಗುತ್ತಾರೆ. ಸಂಗೀತಗಾರರಿಗೆ ಸನ್ಮಾನ. ಪಾಲುದಾರರೊಂದಿಗೆ ಸೌಹಾರ್ದಕ್ಕೆ ಪ್ರಯತ್ನಿಸಿ. ಶುಭಸಂಖ್ಯೆ: 5

ಮಕರ: ದಾಂಪತ್ಯದಲ್ಲಿ ಸಾಮರಸ್ಯ ಸಾಧಿಸಿ. ಹಣಕಾಸಿನ ವ್ಯವಹಾರದಲ್ಲಿ ಸಾಧಾರಣ ಸ್ಥಿತಿ. ವಾಹನಗಳ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 6

ಕುಂಭ: ಕೋರ್ಟ್ ಕಾರ್ಯದಲ್ಲಿ ಯಶಸ್ವಿ. ಗೃಹೋಪಯೋಗಿ ವಸ್ತು ವ್ಯಾಪಾರದಲ್ಲಿ ಆದಾಯ. ವಾಣಿಜ್ಯ ಶಾಸ್ತ್ರದ ವಿದ್ಯಾರ್ಥಿಗಳಿಗೆ ಶುಭ. ಶುಭಸಂಖ್ಯೆ: 1

ಮೀನ: ಆಭರಣ ತಯಾರಿಕರಿಗೆ ಹೆಚ್ಚು ಬೇಡಿಕೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರ ವಹಿಸಿ. ಸ್ನೇಹಿತ ವರ್ಗದಿಂದ ಧನ ಸಹಾಯ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net