ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಹೂಡಿಕೆಯಲ್ಲಿ ವಿಶೇಷ ಲಾಭ ಬರಲಿದೆ

Nitya Bhavisya Vijayavani
Published on


ಮೇಷ: ಅಡಕೆ ಮಾರಾಟಸ್ಥರಿಗೆ ಶುಭ. ದುಡುಕಿ ಮಾತನಾಡಬೇಡಿ. ಯಾವುದೇ ಕಾರಣಕ್ಕೂ ಕೋಪದ ಕೈಯಲ್ಲಿ ಬುದ್ಧಿ ಕೊಡಬೇಡಿ. ಶುಭಸಂಖ್ಯೆ: 5

ವೃಷಭ: ಕೋರ್ಟ್ ವಿಷಯಗಳಲ್ಲಿ ಗೆಲುವು ನಿಮ್ಮದಾಗಿ ಮನಸ್ಸು ನಿರಾಳ. ವೈದ್ಯರಿಗೆ ಒತ್ತಡದ ದಿನ. ಜ್ವರದ ಸಮಸ್ಯೆ ಕಾಡಬಹುದು. ಶುಭಸಂಖ್ಯೆ: 9

ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ಗೌರವ ದೊರೆತು ಸಂತಸ. ಮಕ್ಕಳಿಂದ ನಿಮ್ಮ ಪ್ರತಿಷ್ಠೆ ಹೆಚ್ಚುವುದು. ಮಿತ್ರರಿಂದ ಮಾರ್ಗದರ್ಶನ ಸಿಗಲಿದೆ. ಶುಭಸಂಖ್ಯೆ:3

ಕಟಕ: ವಿವಾಹಾಕಾಂಕ್ಷಿಗಳಿಗೆ ಶುಭದಾಯಕ ದಿನ. ಹೂಡಿಕೆಗೆ ಇದು ಸುಸಮಯ. ತೀರ್ಥಯಾತ್ರೆಯ ಬಗ್ಗೆ ಯೋಜನೆ ಹಾಕಿಕೊಳ್ಳುವಿರಿ. ಶುಭಸಂಖ್ಯೆ:7

ಸಿಂಹ: ಸಹೋದರರಿಂದ ಸಹಕಾರ. ಒಪ್ಪಂದಗಳಲ್ಲಿ ಎಚ್ಚರವಹಿಸುವುದು ಅಪೇಕ್ಷಣೀಯ. ರಾಸಾಯನಿಕ ವಸ್ತು ಮಾರಾಟಸ್ಥರಿಗೆ ಶುಭ. ಶುಭಸಂಖ್ಯೆ: 3

ಕನ್ಯಾ: ವ್ಯಾಪಾರದಲ್ಲಿ ಮೋಸವಾಗುವ ಸಾಧ್ಯತೆ ಇದೆ. ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ ಶುಭವಾಗಲಿದೆ. ಮನೆಗೆ ಬಂಧುಮಿತ್ರರ ಆಗಮನ. ಶುಭಸಂಖ್ಯೆ: 4

ತುಲಾ: ಮೆಕ್ಯಾನಿಕ್​ಗಳಿಗೆ ನಿರೀಕ್ಷಿತ ಆದಾಯದಲ್ಲಿ ಮೋಸವಿಲ್ಲ. ಆಹಾರದಲ್ಲಿ ವ್ಯತ್ಯಾಸವಾಗಿ ತೊಂದರೆ. ಗೃಹ ಕೈಗಾರಿಕೆಯಲ್ಲಿ ಲಾಭ. ಶುಭಸಂಖ್ಯೆ: 1

ವೃಶ್ಚಿಕ: ಹೂಡಿಕೆಯಲ್ಲಿ ವಿಶೇಷ ಲಾಭ ಬರಲಿದೆ. ಅಧಿಕಾರಿಗಳಿಗೆ ಕೆಲಸದ ಒತ್ತಡ. ರಾಜಕಾರಣಿಗಳಿಗೆ ವಿವಾದಗಳು ಸುತ್ತಿಕೊಳ್ಳಲಿವೆ. ಶುಭಸಂಖ್ಯೆ: 7

ಧನಸ್ಸು: ಕ್ಯಾಂಟೀನ್ ವ್ಯಾಪಾರದಲ್ಲಿ ಲಾಭ. ಪುಸ್ತಕದ ವ್ಯಾಪಾರಸ್ಥರಿಗೆ ಉತ್ತಮ ಆದಾಯ. ಲೇವಾದೇವಿ ವ್ಯವಹಾರದಲ್ಲಿ ವಿವಾದ. ಶುಭಸಂಖ್ಯೆ: 7

ಮಕರ: ಪತ್ರಕರ್ತರು, ಜನಸಾಮಾನ್ಯರು ಕಾರ್ಯಗಳಲ್ಲಿ ಜಯಗಳಿಸುವರು. ರಾಜಕೀಯ ಪ್ರವೇಶಕ್ಕೆ ಸುಸಮಯ. ಆತ್ಮವಿಶ್ವಾಸ ಹೆಚ್ಚುತ್ತದೆ. ಶುಭಸಂಖ್ಯೆ: 3

ಕುಂಭ: ಹೊಸ ಜನರ ಭೇಟಿಯಾಗಲಿದೆ. ಸರ್ಕಾರಿ ಕೆಲಸಗಳಲ್ಲಿ ಮುನ್ನಡೆ. ಕೃಷಿಕರ ಆದಾಯದಲ್ಲಿ ಹೆಚ್ಚಳ. ಇಷ್ಟ ದೇವರ ಸ್ಮರಣೆ ಮಾಡಿ. ಶುಭಸಂಖ್ಯೆ: 8

ಮೀನ: ದುಡುಕದೆ ನಿರ್ಣಯ ತೆಗೆದುಕೊಳ್ಳಿ. ಮಗನ ವಿವಾಹದ ವಿಷಯದಲ್ಲಿ ತೊಂದರೆಯಿದೆ. ಆಡಳಿತ ವರ್ಗದವರಿಗೆ ಒಳ್ಳೆಯ ದಿನ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net