ಈ ರಾಶಿಯವರಿಂದು ಮಹಿಳೆಯರು ಅಪವಾದದಿಂದ ಪಾರಾಗುವಿರಿ: ನಿತ್ಯಭವಿಷ್ಯ

Nitya Bhavisya Vijayavani
Published on

ಮೇಷ: ಧಾರ್ವಿುಕ ಕ್ಷೇತ್ರದಲ್ಲಿ ಲಾಭದಿಂದ ಸಮೃದ್ಧಿಯಾಗ ಲಿದೆ. ಸಿಎ ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ, ವಾಹನ ಅಪಘಾತ ಸಂಭವ. ಶುಭಸಂಖ್ಯೆ: 9

ವೃಷಭ: ಮಾದರಿಯ ಜೀವನ ನಡೆಸುವಿರಿ. ನಿಮ್ಮ ಪ್ರತಿಭೆಯಿಂದ ನಾಯಕರಾಗಿ ಹೊರಹೊಮ್ಮುವಿರಿ. ಹಣಕಾಸಿಗೆ ತೊಂದರೆ ಇರದು. ಶುಭಸಂಖ್ಯೆ: 1

ಮಿಥುನ: ವಿವಾದಗಳಲ್ಲಿ ಜಯ. ಗಿರಣಿ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಸ್ನೇಹಿತ ವರ್ಗದಿಂದ ಸಹಾಯ. ಕುಟುಂಬದಲ್ಲಿ ಆಂತರಿಕ ಕಲಹ. ಶುಭಸಂಖ್ಯೆ: 5

ಕಟಕ: ಹಾಲು ಉತ್ಪಾದಕರಿಗೆ ನಿರೀಕ್ಷಿತ ಲಾಭ. ಆಟೋ ಮೊಬೈಲ್ಸ್ ವ್ಯವಹಾರದಲ್ಲಿ ಹಿನ್ನಡೆ. ಭೂವ್ಯವಹಾರ ದಲ್ಲಿ ಮುನ್ನೆಚ್ಚರಿಕೆ ವಹಿಸಿ. ಶುಭಸಂಖ್ಯೆ: 4

ಸಿಂಹ: ಯಂತ್ರಗಳ ಮಾರಾಟಗಾರರಿಗೆ ಶುಭ. ಬಾಕಿ ಕೆಲಸ ಪೂರ್ಣಗೊಳಿಸುವಿರಿ. ವ್ಯಾಪಾರ ವ್ಯವಹಾರದಲ್ಲಿ ಹಣ ಹೂಡಿಕೆಗೆ ಅವಕಾಶ. ಶುಭಸಂಖ್ಯೆ: 8

ಕನ್ಯಾ: ಗೃಹ ನಿರ್ವಣಕ್ಕೆ ಚಾಲನೆ. ಸಾಧುಸಂತರ ದರ್ಶನದಿಂದ ನೆಮ್ಮದಿ. ಹಿರಿಯರಿಂದ ಸಹಾಯ. ಸಹೋದ್ಯೋಗಿಗಳಿಂದ ಕಿರಿಕಿರಿ. ಶುಭಸಂಖ್ಯೆ: 8

ತುಲಾ: ಸಮಾರಂಭಗಳಿಗಾಗಿ ಖರ್ಚು. ಬಂಧುಗಳ ಭೇಟಿ. ಕೆಲಸಗಾರರ ಮೇಲೆ ವಿಶ್ವಾಸ. ಆರಕ್ಷಕರ ವಿಚಾರಣೆ ಎದುರಿಸುವ ಸಂದರ್ಭ. ಶುಭಸಂಖ್ಯೆ: 6

ವೃಶ್ಚಿಕ:  ಅಪರಿಚಿತ ಮಹಿಳೆಯರಿಂದ ಸಮಸ್ಯೆ. ಖರ್ಚಿನ ಮೇಲೆ ಹಿಡಿತವಿರಲಿ. ನೌಕರರಿಗೆ ಬಡ್ತಿ. ಹಣಕಾಸಿನ ವ್ಯವಹಾರದಲ್ಲಿ ಒತ್ತಡ. ಶುಭಸಂಖ್ಯೆ:2

ಧನಸ್ಸು: ಸರ್ಕಾರಿ ಇಲಾಖೆಯಲ್ಲಿ ಇರುವವರಿಗೆ ಬಡ್ತಿ ಸಾಧ್ಯತೆ. ವಧುವರ ಅನ್ವೇಷಣಾ ಕೇಂದ್ರದವರಿಗೆ ಶುಭದಿನ. ಕಾಲು ನೋವಿನ ಸಮಸ್ಯೆ. ಶುಭಸಂಖ್ಯೆ: 6

ಮಕರ: ವಿದ್ಯಾರ್ಥಿಗಳಿಗೆ ಅಡ್ಡಿ. ಮಾನಸಿಕ ಭಯ ಅಧಿಕ. ಕೃಷಿಕರಿಗೆ ಇಳುವರಿ ಕುಂಠಿತಗೊಳ್ಳುವ ಆತಂಕ. ಸಹೋದರರಿಂದ ತೊಂದರೆ. ಶುಭಸಂಖ್ಯೆ:1

ಕುಂಭ: ವಸ್ತುಗಳ ಖರೀದಿಯಲ್ಲಿ ಎಚ್ಚರಿಕೆ ವಹಿಸಿ. ವೃತ್ತಿಯಲ್ಲಿ ಕಿರಿಕಿರಿಯಾಗಬಹುದು. ವಿದ್ಯುತ್ ಸಂಬಂಧೀ ವ್ಯಾಪಾರಸ್ಥರಿಗೆ ತೊಂದರೆ. ಶುಭಸಂಖ್ಯೆ:9

ಮೀನ: ಕಾಗದ ಪತ್ರಗಳ ವ್ಯವಹಾರದಲ್ಲಿ ಎಚ್ಚರ. ನಿಮ್ಮ ಒಳ್ಳೆಯತನದ ದುರುಪಯೋಗ. ಮಹಿಳೆಯರು ಅಪವಾದದಿಂದ ಪಾರಾಗುವಿರಿ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net