

ಮೇಷ: ಮಗಳ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯಾಗಲಿದೆ. ಉದ್ಯೋಗ ಆಕಾಂಕ್ಷಿಗಳಿಗೆ ಯಶಸ್ಸು. ಶುಭಸಂಖ್ಯೆ: 9
ವೃಷಭ: ವಕೀಲರಿಗೆ ಶುಭದಾಯಕ ದಿನ. ಉನ್ನತ ಅಧಿಕಾರಿಗಳಿಗೆ ಸುಸಮಯ. ಕಲಾವಿದರಿಗೆ ಸಾಮಾಜಿಕ ಗೌರವ, ಮನ್ನಣೆ ಪ್ರಾಪ್ತಿ. ಶುಭಸಂಖ್ಯೆ:4
ಮಿಥುನ: ತಾಳ್ಮೆಯಿಂದ ಅನುಕೂಲವಿದೆ. ಅನಗತ್ಯ, ಕೆಲಸಗಳನ್ನು ಮುಂದೂಡುವುದು ಉತ್ತಮ. ಪ್ರತಿಭೆಗೆ ಸೂಕ್ತ ಮನ್ನಣೆ ದೊರೆಯಲಿದೆ. ಶುಭಸಂಖ್ಯೆ: 2
ಕಟಕ: ಲೇವಾದೇವಿ ವ್ಯವಹಾರದಲ್ಲಿ ಲಾಭವಾಗುವುದು. ಹೋಟೆಲ್ ವ್ಯಾಪಾರದಲ್ಲಿ ಶುಭ. ಹಣವನ್ನು ಉಳಿತಾಯ ಮಾಡಿ ಗಳಿಸುವಿರಿ. ಶುಭಸಂಖ್ಯೆ: 2
ಸಿಂಹ: ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಅಹಂಕಾರ ಹೆಚ್ಚಾಗುವ ಸಾಧ್ಯತೆ. ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಿರಿ. ಶುಭಸಂಖ್ಯೆ:8
ಕನ್ಯಾ: ಭೂಮಿ ಅಥವಾ ಸ್ಥಿರಾಸ್ತಿ ಲಾಭವಿದೆ. ಚತುರವಾಗಿ ವ್ಯವಹರಿಸುವಲ್ಲಿ ಯಶಸ್ವಿಯಾಗುವಿರಿ. ವಿಚ್ಛೇದಿತರಿಗೆ ಮರು ವಿವಾಹ ಯೋಗ.ಶುಭಸಂಖ್ಯೆ: 6
ತುಲಾ: ಯಂತ್ರ ತಯಾರಿಕೆಗೆ ಪೋ›ತ್ಸಾಹ ದೊರೆಯಲಿದೆ. ಭೂ ವ್ಯವಹಾರದಲ್ಲಿ ಲಾಭ ಬರಲಿದೆ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಶುಭಸಂಖ್ಯೆ: 7
ವೃಶ್ಚಿಕ: ಅಪನಿಂದನೆಗೆ ಸಿಲುಕುವ ಸಾಧ್ಯತೆ ದಟ್ಟವಾಗಿದೆ. ಪರರ ವಿಷಯದಲ್ಲಿ ಭಾಗಿಯಾಗಲು ಹೋಗಬೇಡಿ. ಅಧಿಕಾರಿಗಳಿಗೆ ಒತ್ತಡ. ಶುಭಸಂಖ್ಯೆ:5
ಧನಸ್ಸು: ಗಣ್ಯ ವ್ಯಕ್ತಿಯ ಭೇಟಿಯಾಗಲಿದೆ. ಅನಾರೋಗ್ಯದಿಂದ ಮುಕ್ತಿ ಸಿಗಲಿದೆ. ವಿದ್ಯಾರ್ಜನೆಗಾಗಿ ಪ್ರಯಾಣ. ವಿದೇಶ ಪ್ರವಾಸ ಸಾಧ್ಯತೆ. ಶುಭಸಂಖ್ಯೆ:2
ಮಕರ: ಟ್ರಾವೆಲ್ಸ್ ಏಜೆಂಟರಿಗೆ ಉತ್ತಮ ದಿನವಲ್ಲ. ವ್ಯಾಪಾರಸ್ಥರಿಗೆ ಸಾಲಬಾಧೆ ಕಾಡುತ್ತದೆ. ವಾಹನ ಅಪಘಾತ ಸಂಭವ, ಎಚ್ಚರದಿಂದಿರಿ. ಶುಭಸಂಖ್ಯೆ: 3
ಕುಂಭ: ಬ್ಯಾಂಕಿಂಗ್ ಸಂಸ್ಥೆಗಳಿಗೆ ಆದಾಯವಿದೆ. ಕೋಪದ ಮೇಲೆ ನಿಯಂತ್ರಣ ಅನಿವಾರ್ಯ. ಅವಕಾಶಕ್ಕಾಗಿ ಸತತ ಪ್ರಯತ್ನ ಅಗತ್ಯ. ಶುಭಸಂಖ್ಯೆ: 8
ಮೀನ: ವ್ಯಾಪಾರದಲ್ಲಿ ಚೇತರಿಕೆಯಾಗುವುದು. ಪತ್ನಿಯಿಂದ ಧನ ಸಹಾಯ ಸಿಗಲಿದೆ. ಕುಟುಂಬದಲ್ಲಿ ಆಂತರಿಕ ಕಲಹ ನಿಯಂತ್ರಿಸಿ. ಶುಭಸಂಖ್ಯೆ: 8