ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ವಿದೇಶಿ ವ್ಯವಹಾರದಲ್ಲಿ ಲಾಭ ಬರಲಿದೆ

Nitya Bhavisya Vijayavani
Published on

ಮೇಷ: ಕೃಷಿಕರಿಗೆ ಅನುಕೂಲ. ನಿವೇಶನ ಲಭ್ಯ. ಮಾತಿನಿಂದ ಕಲಹ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ವಿದ್ಯಾಭ್ಯಾಸದಲ್ಲಿ ಆಸಕ್ತಿ. ಶುಭಸಂಖ್ಯೆ: 9

ವೃಷಭ: ಹಣ್ಣುಗಳ ವ್ಯಾಪಾರಸ್ಥರಿಗೆ ಲಾಭ. ದಿನಸಿ ವ್ಯಾಪಾರಸ್ಥರಿಗೆ ನಷ್ಟವಾಗಬಹುದು. ಆರೋಗ್ಯದ ವಿಚಾರದಲ್ಲಿ ಎಚ್ಚರವಿರಲಿ. ಶುಭಸಂಖ್ಯೆ:1

ಮಿಥುನ: ವಿದ್ಯಾರ್ಥಿಗಳಿಗೆ ಪ್ರಶಂಸೆ ದೊರೆಯಲಿದೆ. ಜಂಟಿ ವ್ಯವಹಾರದಲ್ಲಿ ಕಿರಿಕಿರಿ ಅನುಭವಿಸುವಿರಿ. ಸ್ನೇಹಿತರಿಂದ ಅರ್ಥಿಕ ಸಹಾಯ. ಶುಭಸಂಖ್ಯೆ:7

ಕಟಕ: ದೂರ ಪ್ರಯಾಣ ರದ್ದು ಮಾಡಬೇಕಾಗುವುದು. ಹೋಟೆಲ್ ವ್ಯವಹಾರದಲ್ಲಿ ಅಧಿಕ ನಷ್ಟ. ವಿದೇಶಿ ವ್ಯವಹಾರದಲ್ಲಿ ಲಾಭ ಬರಲಿದೆ. ಶುಭಸಂಖ್ಯೆ: 3

ಸಿಂಹ: ಆಹಾರ ವ್ಯವಹಾರದಲ್ಲಿ ನಷ್ಟವಾಗಿ ಬೇಸರ. ತೈಲ ವ್ಯಾಪಾರಿಗಳಿಗೆ ಅನಿರೀಕ್ಷಿತ ಆದಾಯ. ತೆರಿಗೆ ಇಲಾಖೆಯ ಉದ್ಯೋಗ ಲಾಭ. ಶುಭಸಂಖ್ಯೆ:7

ಕನ್ಯಾ: ಒಳಾಂಗಣ ವಿನ್ಯಾಸಗಾರರಿಗೆ ಉತ್ತಮ ಆದಾಯ ಬರಲಿದೆ. ತಂದೆಯಿಂದ ಲಾಭ. ಮಿತ್ರರೊಂದಿಗೆ ಸಂತೋಷ ಕೂಟದಲ್ಲಿ ಭಾಗಿ. ಶುಭಸಂಖ್ಯೆ: 4

ತುಲಾ: ಕಾನೂನು ವಿದ್ಯಾರ್ಥಿಗಳಿಗೆ ಅನುಕೂಲವಾಗುವುದು. ಚಿನ್ನ -ಬೆಳ್ಳಿ ಆಭರಣ ವ್ಯವಹಾರದಲ್ಲಿ ಪ್ರಗತಿ. ಕೋರ್ಟ್ ಕೇಸುಗಳಲ್ಲಿ ಜಯ. ಶುಭಸಂಖ್ಯೆ: 6

ವೃಶ್ಚಿಕ: ಸಾಂಪ್ರದಾಯಿಕ ಕೃಷಿಕರಿಗೆ ಬೇಡಿಕೆ. ಮಹಿಳಾ ರಾಜಕಾರಣಿಗಳಿಗೆ ಶುಭದಾಯಕ ದಿನ. ಕುಟುಂಬ ದಲ್ಲಿ ಖರ್ಚು ಹೆಚ್ಚಾಗುವುದು.ಶುಭಸಂಖ್ಯೆ: 1

ಧನಸ್ಸು: ಸದ್ಯಕ್ಕೆ ಹೂಡಿಕೆ ಮಾಡಲು ಹೋಗಬೇಡಿ. ವಿಶ್ರಾಂತಿ ವೇತನ ಲಭಿಸುವುದು. ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ ಮಾಡುವಿರಿ. ಶುಭಸಂಖ್ಯೆ:3

ಮಕರ: ಸಂಗಾತಿಯಿಂದ ಸಾಲ ಪಡೆಯಲು ಅನುಕೂಲ ವಾಗಲಿದೆ. ಪಾಲುದಾರಿಕೆಯಲ್ಲಿ ಉತ್ತಮ ಲಾಭ. ರೋಗ ಬಾಧೆಗೆ ಪರಿಹಾರ. ಶುಭಸಂಖ್ಯೆ: 5

ಕುಂಭ: ಆಟೋಮೊಬೈಲ್ಸ್ ವ್ಯವಹಾರದಲ್ಲಿ ಮೋಸ ಹೋಗುವಿರಿ. ಸ್ಥಿರಾಸ್ತಿಯಿಂದ ನಷ್ಟ. ಮಾನಸಿಕ ಒತ್ತಡವನ್ನು ನಿಯಂತ್ರಿಸಿ. ಶುಭಸಂಖ್ಯೆ: 8

ಮೀನ: ಆಪ್ತರೊಂದಿಗೆ ಕಷ್ಟ ಹಂಚಿಕೊಳ್ಳಿ. ರೆಸ್ಟೋರೆಂಟ್ ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ. ಪ್ರಿಯ ಜನರ ಭೇಟಿಯಾಗಲಿದೆ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net