ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಸಾಲ ಮಾಡುವ ಪರಿಸ್ಥಿತಿಯಿಂದ ಮುಕ್ತಿ ಸಿಗಲಿದೆ

Nitya Bhavisya Vijayavani
Published on

ಮೇಷ: ವಾಹನ ಲಾಭವಿದೆ. ಉನ್ನತ ಸ್ಥಾನಮಾನ ಪ್ರಾಪ್ತಿಯಾಗಲಿದೆ. ಜೀವನಕ್ಕೆ ಉತ್ತಮ ತಿರುವು. ಪ್ರೀತಿ ಪಾತ್ರರೊಂದಿಗೆ ಬಾಂಧವ್ಯ. ಶುಭಸಂಖ್ಯೆ:1

ವೃಷಭ: ಅವಮಾನದಿಂದ ಮನಸ್ಸಿನ ಮೇಲೆ ದುಷ್ಪರಿಣಾಮ. ಆರ್ಥಿಕ ಬಿಕ್ಕಟ್ಟು. ನಾನಾ ವಿಚಾರಗಳಲ್ಲಿ ಆಸಕ್ತಿ ತಾಳುವಿರಿ. ರೋಗ ಬಾಧೆ. ಶುಭಸಂಖ್ಯೆ: 1

ಮಿಥುನ: ಸ್ವಪ್ರಯತ್ನದಿಂದ ಕಾರ್ಯ ಸಿದ್ಧಿಯಾಗುವುದು. ದೂರ ಪ್ರಯಾಣ ಸಾಧ್ಯತೆ. ಶತ್ರುಗಳ ಬಾಧೆ. ತೀರ್ಥಯಾತ್ರೆಗೆ ಹಣ ಖರ್ಚು. ಶುಭಸಂಖ್ಯೆ: 8

ಕಟಕ: ವೃತ್ತಿಕ್ಷೇತ್ರದಲ್ಲಿ ಯಶಸ್ಸು ಸಾಧಿಸುವಿರಿ. ಮಾತಿನ ಮೇಲೆ ಹಿಡಿತ ಅಗತ್ಯ. ಮಾನಸಿಕ ಗೊಂದಲ. ಕೋರ್ಟ್ ಪ್ರಕರಣಗಳಲ್ಲಿ ವಿಘ್ನ. ಶುಭಸಂಖ್ಯೆ: 2

ಸಿಂಹ: ವ್ಯಾಪಾರ-ವ್ಯವಹಾರಗಳಲ್ಲಿ ನಷ್ಟ. ದೃಷ್ಟಿ ದೋಷದಿಂದ ತೊಂದರೆ. ಶತ್ರುಗಳ ಬಾಧೆ. ಸೇವಾ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಶುಭಸಂಖ್ಯೆ:7

ಕನ್ಯಾ: ಧಾರ್ವಿುಕ ಕಾರ್ಯದಲ್ಲಿ ಆಸಕ್ತಿ. ಪ್ರತಿಭೆಗೆ ತಕ್ಕ ಫಲ. ಶೀತ ಸಂಬಂಧಿತ ರೋಗ ಬಾಧೆ. ವೈಯಕ್ತಿಕ ವಿಚಾರಗಳಲ್ಲಿ ಗಮನಹರಿಸಿ. ಶುಭಸಂಖ್ಯೆ:7

ತುಲಾ: ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ. ಆರೋಗ್ಯದಲ್ಲಿ ಚೇತರಿಕೆ. ಅಧಿಕವಾದ ಖರ್ಚು. ಪರರಿಗೆ ಕರುಣೆ ತೋರುವಿರಿ. ಶುಭಸಂಖ್ಯೆ:9

ವೃಶ್ಚಿಕ: ಆತುರ ಸ್ವಭಾವದಿಂದ ತೊಂದರೆ. ಅವಕಾಶ ಕೈ ತಪ್ಪುವುದು. ಮಕ್ಕಳೊಂದಿಗೆ ಪ್ರವಾಸ ಹೋಗುವಿರಿ. ಸ್ವಂತ ಊರಿಗೆ ಪ್ರಯಾಣ. ಶುಭಸಂಖ್ಯೆ: 5

ಧನಸ್ಸು: ಅತಿಯಾದ ಆತ್ಮವಿಶ್ವಾಸದಿಂದ ನಷ್ಟವಾಗಲಿದೆ. ವಿರೋಧಿಗಳ ಕುತಂತ್ರ ದಿಂದ ಆರ್ಥಿಕ ನಷ್ಟ. ಆತ್ಮೀಯರ ಭೇಟಿ ಮಾಡುವಿರಿ. ಶುಭಸಂಖ್ಯೆ: 5

ಮಕರ: ವಿವಾದಗಳಿಂದ ದೂರವಿರಿ. ನಂಬಿಕಸ್ಥರಿಂದ ದ್ರೋಹ, ಮಾನಸಿಕ ವ್ಯಥೆ. ಸಣ್ಣ ವ್ಯಾಪಾರದಲ್ಲಿ ಸಾಧಾರಣ ಪ್ರಗತಿಯಾಗುವುದು. ಶುಭಸಂಖ್ಯೆ:6

ಕುಂಭ: ಸಾಲ ಮಾಡುವ ಪರಿಸ್ಥಿತಿಯಿಂದ ಮುಕ್ತಿ ಸಿಗಲಿದೆ. ಧಾರ್ವಿುಕ ವಿಚಾರಗಳಲ್ಲಿ ಆಸಕ್ತಿ ತಾಳುವಿರಿ. ಅನವಶ್ಯಕ ಖರ್ಚು ಮಾಡುವಿರಿ. ಶುಭಸಂಖ್ಯೆ:8

ಮೀನ: ಯತ್ನ ಕಾರ್ಯದಲ್ಲಿ ಜಯ. ಕಾರ್ಯದಲ್ಲಿ ಪ್ರಗತಿ. ಎಲ್ಲರ ಮನಸ್ಸು ಗೆಲ್ಲುವಿರಿ. ವಿದೇಶ ಪ್ರಯಾಣ. ಹಣಕಾಸು ಅನುಕೂಲ. ಶುಭಸಂಖ್ಯೆ:9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net