ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಪಾಲುದಾರಿಕೆ ವ್ಯವಹಾರದಲ್ಲಿ ಆರ್ಥಿಕ ಚೇತರಿಕೆ.

Nitya Bhavisya Vijayavani
Published on

ಮೇಷ: ಜೇನು ಕೃಷಿಕರಿಗೆ ಅನನುಕೂಲ. ಮನೆ ಕಟ್ಟಲು ತಾಯಿಯಲ್ಲಿ ಸಹಾಯ ಕೇಳುವಿರಿ. ಮಗಳ ವಿವಾಹದ ಸಂಬಂಧ ಚಿಂತೆ. ಶುಭಸಂಖ್ಯೆ:3

ವೃಷಭ: ದೈಹಿಕ ಅಸಮರ್ಥತೆ. ಕುಟುಂಬದೊಂದಿಗೆ ಗ್ರಾಮಕ್ಕೆ ಪ್ರಯಾಣ. ನೆರೆಹೊರೆಯವರಿಂದ ನೆರವು. ಪ್ರಯೋಗಾತ್ಮಕ ಆಲೋಚನೆ. ಶುಭಸಂಖ್ಯೆ: 5

ಮಿಥುನ: ಕಚೇರಿಯಲ್ಲಿ ಮಾತಿನಿಂದ ಕಲಹ. ಪಾಲುದಾರಿಕೆ ವ್ಯವಹಾರದಲ್ಲಿ ಆರ್ಥಿಕ ಚೇತರಿಕೆ. ಕಣ್ಣಿನ ಸಮಸ್ಯೆ. ಹಿರಿಯರೊಂದಿಗೆ ಕಲಹ. ಶುಭಸಂಖ್ಯೆ:2

ಕಟಕ: ವ್ಯವಹಾರದಲ್ಲಿ ಹಣ ಹೂಡಿಕೆ. ಸ್ವಾಭಿಮಾನಕ್ಕೆ ಧಕ್ಕೆತರುವ ಘಟನೆ. ದೈಹಿಕ ಅಸಮರ್ಥತೆ. ಪಾಲುದಾರಿಕೆಯಲ್ಲಿ ಸಮಸ್ಯೆ. ಶುಭಸಂಖ್ಯೆ: 3

ಸಿಂಹ: ಸಾಲಗಾರ ಶತ್ರುಗಳ ಚಿಂತೆ. ಅನಗತ್ಯ ಖರ್ಚು. ಆಸ್ಪತ್ರೆಗೆ ಅಲೆದಾಟ. ದೀರ್ಘ ಅನಾರೋಗ್ಯಕ್ಕೆ ಚಿಕಿತ್ಸೆ. ಹಿರಿಯರಿಂದ ಮನ್ನಣೆ. ಶುಭಸಂಖ್ಯೆ: 8

ಕನ್ಯಾ: ಮಕ್ಕಳಿಂದ ನೈತಿಕ ಸಹಕಾರ ದೊರೆಯಲಿದೆ. ಪ್ರೀತಿ-ಪ್ರೇಮದಲ್ಲಿ ಯಶಸ್ಸು. ಮಿತ್ರರಿಂದ ಸಹಾಯ. ನಿರ್ವಪಕರಿಗೆ ಧನಲಾಭ. ಶುಭಸಂಖ್ಯೆ: 8

ತುಲಾ: ಪ್ರವೃತ್ತಿಯಲ್ಲಿ ಹಿನ್ನಡೆಯಾಗುವ ಸಾಧ್ಯತೆ. ಅಧಿಕಾರ ವರ್ಗದವರಿಂದ ಸಮಸ್ಯೆ. ಕಲಾವಿದರ ಗೌರವಕ್ಕೆ ಧಕ್ಕೆಯಾಗುವ ಸ್ಥಿತಿ. ಶುಭಸಂಖ್ಯೆ: 8

ವೃಶ್ಚಿಕ: ಸಾಮಾಜಿಕವಾಗಿ ಗೌರವ ಮನ್ನಣೆ ಸಿಗಲಿದೆ. ಪತ್ರಿಕೋದ್ಯಮ ವೃತ್ತಿಯಲ್ಲಿ ಇರುವವರಿಗೆ ಯಶಸ್ಸು. ಪೂರ್ವಿಕರ ನೆನಪು ಕಾಡಲಿದೆ. ಶುಭಸಂಖ್ಯೆ:1

ಧನಸ್ಸು: ಭೂ ವ್ಯವಹಾರ ಮತ್ತು ಪಿತ್ರಾರ್ಜಿತ ಆಸ್ತಿಯಲ್ಲಿ ನಷ್ಟ. ಅಪಘಾತ ಸಾಧ್ಯತೆ ಇದೆ, ಎಚ್ಚರಿಕೆಯಿಂದ ಇರಿ. ಸ್ಥಿತಿಗತಿಗಳಿಂದ ನೋವು. ಶುಭಸಂಖ್ಯೆ: 4

ಮಕರ: ಮಾನಸಿಕ ಚಂಚಲತೆಯಿಂದ ಅವಕಾಶ ವಂಚಿತರಾಗುವಿರಿ. ದೈಹಿಕ ಅಸಮರ್ಥತೆ ಕಾಡಲಿದೆ. ಶಸ್ತ್ರ ಚಿಕಿತ್ಸೆ ಕುರಿತು ನಿರ್ಧಾರ. ಶುಭಸಂಖ್ಯೆ:2

ಕುಂಭ: ದೂರ ಪ್ರದೇಶಕ್ಕೆ ಪ್ರವಾಸ. ಹಿರಿಯ ಅಧಿಕಾರಿಗಳಿಂದ ನಿಮ್ಮ ಮೇಲೆ ಮಲತಾಯಿ ಧೋರಣೆ. ಊಟ-ಉಪಚಾರಗಳಲ್ಲಿ ವ್ಯತ್ಯಾಸ. ಶುಭಸಂಖ್ಯೆ: 7

ಮೀನ: ರಹಸ್ಯ ಸ್ಥಳಕ್ಕೆ ಭೇಟಿ. ಸಂಗಾತಿಯ ವರ್ತನೆಯಿಂದ ಬೇಸರ. ನೂತನ ಗೃಹ ನಿರ್ವಣಕ್ಕೆ ಚಾಲನೆ. ಆತ್ಮೀಯರ ವಿಯೋಗ. ಶುಭಸಂಖ್ಯೆ:9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net