ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಅನಿರೀಕ್ಷಿತ ಧನಸಹಾಯ ಸಿಗಲಿದೆ

Nitya Bhavisya Vijayavani
Published on

ಮೇಷ: ಭೂಮಿ ವಿಷಯವಾಗಿ ಕಲಹ ಉಂಟಾಗುವ ಸಾಧ್ಯತೆ. ಶರೀರಕ್ಕೆ ಗಾಯವಾದೀತು. ಅತಿಯಾದ ಆತ್ಮವಿಶ್ವಾಸದಿಂದ ನಷ್ಟ. ಶುಭಸಂಖ್ಯೆ: 2

ವೃಷಭ: ರಾಜಕಾರಣಿಗಳಿಗೆ ಸ್ಥಾನಪಲ್ಲಟ ಸಂಭವ. ಸಾಧು-ಸಂತರ ದರ್ಶನ ಮಾಡುವಿರಿ. ಮನಸ್ಸು ನಿಯಂತ್ರಣದಲ್ಲಿ ಇರುವುದಿಲ್ಲ. ಶುಭಸಂಖ್ಯೆ: 8

ಮಿಥುನ: ವಕೀಲರಿಗೆ ವಿಶೇಷ ದಿನ. ಹೈನುಗಾರಿಕೆಯಲ್ಲಿ ನಿರೀಕ್ಷಿತ ಲಾಭ ಬರುವುದು. ಕಾರ್ಖಾನೆಯ ಕಾರ್ವಿುಕರಿಗೆ ಉತ್ತಮವಾದ ದಿನ. ಶುಭಸಂಖ್ಯೆ:6

ಕಟಕ: ಆಸ್ತಿ ಖರೀದಿಯಲ್ಲಿ ಎಚ್ಚರಿಕೆ ವಹಿಸಿ. ವೈದ್ಯರಿಗೆ ವಿಶೇಷ ಸನ್ಮಾನ, ಗೌರವ ಸಿಗಲಿದೆ.ರಾಜಕಾರಣಿಗಳಿಗೆ ಪದವಿ ಕೈತಪ್ಪುವ ಸಾಧ್ಯತೆ.ಶುಭಸಂಖ್ಯೆ: 9

ಸಿಂಹ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭವಿದೆ. ಖಾಸಗಿ ಉದ್ಯೋಗದಲ್ಲಿ ಬದಲಾವಣೆ. ಸರ್ಕಾರದಿಂದ ಧನಸಹಾಯ ಸಿಗಲಿದೆ. ಶುಭಸಂಖ್ಯೆ:1

ಕನ್ಯಾ: ಬಂಧುಗಳಿಂದ ಕಿರಿಕಿರಿಯಾಗುವುದು. ಆಹಾರ ವಸ್ತುಗಳ ಪೂರೈಕೆದಾರರಿಗೆ ಲಾಭ. ಮಹಿಳೆಯರಿಗೆ ಬೆನ್ನುನೋವಿನ ತೊಂದರೆ. ಶುಭಸಂಖ್ಯೆ: 8

ತುಲಾ: ವಿದ್ಯಾರ್ಥಿಗಳು ಶ್ರಮವಹಿಸಿದರೆ ಉತ್ತಮ ಫಲಿತಾಂಶ. ಅಜೀರ್ಣದಿಂದ ತೊಂದರೆ. ಸಾಲ ಸಮಸ್ಯೆಗೆ ಸ್ನೇಹಿತರಿಂದ ಸಹಾಯ. ಶುಭಸಂಖ್ಯೆ:6

ವೃಶ್ಚಿಕ: ಅನವಶ್ಯಕ ವಿವಾದ. ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಬೇಡ. ಆರೋಗ್ಯ ಸಮಸ್ಯೆ. ಸಹೋದ್ಯೋಗಿಗಳ ಜತೆ ಉತ್ತಮ ಬಾಂಧವ್ಯ. ಶುಭಸಂಖ್ಯೆ:6

ಧನಸ್ಸು: ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಹೇರಳ ಅವಕಾಶಗಳು ಲಭ್ಯ. ಪ್ಲಾಸ್ಟಿಕ್ ಉದ್ದಿಮೆಯಲ್ಲಿ ನಷ್ಟ. ಖರೀದಿಯಲ್ಲಿ ಮೋಸ. ಶುಭಸಂಖ್ಯೆ: 1

ಮಕರ: ವೀಸಾ ಸಮಸ್ಯೆ, ಪ್ರಯಾಣ ರದ್ದು. ವಕೀಲರಿಗೆ ಉತ್ತಮ ದಿನ. ವಾಣಿಜ್ಯ ಅಧ್ಯಯನದಲ್ಲಿ ಶುಭ. ರಾಜಕಾರಣಿಗಳಿಗೆ ಅಶುಭ. ಶುಭಸಂಖ್ಯೆ: 7

ಕುಂಭ: ದೀರ್ಘ ಪ್ರಯಾಣ. ಕಾಂಡಿಮೆಂಟ್ಸ್ , ಹೋಟೆಲ್ ವ್ಯವಹಾರಗಳಲ್ಲಿ ಪ್ರಗತಿ. ಚಿಕ್ಕ ಪುಟ್ಟ ವ್ಯಾಪಾರಸ್ಥರಿಗೆ ಉತ್ತಮ ಧನಲಾಭ. ಶುಭಸಂಖ್ಯೆ:6

ಮೀನ: ಅನಿರೀಕ್ಷಿತ ಧನಸಹಾಯ ಸಿಗಲಿದೆ. ನಟರಿಗೆ ಮತ್ತು ಕಲಾವಿದರಿಗೆ ಶುಭ. ತೆಂಗಿನಕಾಯಿ ವ್ಯಾಪಾರಸ್ಥರಿಗೆ ಧನ ನಷ್ಟ ಸಂಭವ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net