ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಪ್ರೀತಿ-ಪ್ರೇಮದ ವಿಷಯಗಳಲ್ಲಿ ಸಮಸ್ಯೆ

Nitya-Bhavisya-FILEminimizer
Published on

ಮೇಷ: ಆರ್ಥಿಕವಾಗಿ ಮತ್ತು ಕೌಟುಂಬಿಕವಾಗಿ ಅನುಕೂಲಕರ ದಿನ. ಆರೋಗ್ಯ ಸಮಸ್ಯೆ ಬಾಧಿಸುವುದು. ಮಾನಸಿಕವಾಗಿ ಗೊಂದಲ. ಶುಭಸಂಖ್ಯೆ: 5

ವೃಷಭ: ಸಮಾರಂಭಕ್ಕೆ ಅಧಿಕ ಖರ್ಚು ಆಗುವುದು. ಮಿತ್ರರೊಂದಿಗೆ ಮೋಜು-ಮಸ್ತಿ. ನೆರೆಹೊರೆಯ ವರಿಂದ ಅನುಕೂಲವಾಗುವುದು. ಶುಭಸಂಖ್ಯೆ:6

ಮಿಥುನ: ಹೋಟೆಲ್ ವ್ಯವಹಾರದಲ್ಲಿ ನಷ್ಟ. ಆರ್ಥಿಕ ಸಮಸ್ಯೆಯಿಂದ ಮುಕ್ತಿ. ಸ್ವಂತ ವ್ಯವಹಾರದಲ್ಲಿ ಪ್ರಗತಿ. ಮಿತ್ರರಿಂದ ಉದ್ಯೋಗ ಲಾಭ. ಶುಭಸಂಖ್ಯೆ:1

ಕಟಕ: ಉದ್ಯೋಗದಲ್ಲಿ ಹೆಚ್ಚಿದ ಜವಾಬ್ದಾರಿ. ಕ್ಲಿನಿಕ್ ಅಥವಾ ಸ್ವಂತ ಆಸ್ಪತ್ರೆ ಹೊಂದಿದವರಿಗೆ ಕೆಲಸಗಾರರಿಂದ ಅನಿರೀಕ್ಷಿತ ಘಟನೆ. ಶುಭಸಂಖ್ಯೆ: 8

ಸಿಂಹ: ದೂರ ಪ್ರಯಾಣಕ್ಕೆ ಅನಾರೋಗ್ಯ ಸಮಸ್ಯೆ. ಪ್ರಯಾಣದಲ್ಲಿ ವಸ್ತುಗಳು ಕಳುವಾದಾವು, ಎಚ್ಚರ. ತಂದೆ ಮಕ್ಕಳಲ್ಲಿ ಮನಸ್ತಾಪ. ಶುಭಸಂಖ್ಯೆ: 4

ಕನ್ಯಾ: ಅನಿರೀಕ್ಷಿತ ಸ್ನೇಹಿತರ ಭೇಟಿ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ಪಾಲುದಾರಿಕೆಯಲ್ಲಿ ಅನುಕೂಲ. ಮಹಿಳೆಯರಿಗೆ ವಸ್ತ್ರ ಲಾಭವಿದೆ. ಶುಭಸಂಖ್ಯೆ:9

ತುಲಾ: ಔಷದ ವ್ಯಾಪಾರದಲ್ಲಿ ಧನ ಲಾಭ. ಮಹಿಳೆಯರಿಂದ ನೋವು. ದಾಂಪತ್ಯದಲ್ಲಿ ವೈಮನಸ್ಸು ಉಂಟಾದೀತು. ಭವಿಷ್ಯದ ಚಿಂತೆ. ಶುಭಸಂಖ್ಯೆ:2

ವೃಶ್ಚಿಕ: ವಿನ್ಯಾಸಕರು, ಅಧ್ಯಾಪಕರಿಗೆ ವಿಶೇಷ ದಿನ. ರೋಗಬಾಧೆಯಿಂದ ಮುಕ್ತಿ. ಉದ್ಯೋಗದ ಒತ್ತಡ. ಸೌಂದರ್ಯ ವರ್ಧಕ ಖರೀದಿ. ಶುಭಸಂಖ್ಯೆ:6

ಧನಸ್ಸು: ಸಾಲದ ಚಿಂತೆ. ಸ್ಥಿರಾಸ್ತಿ ಅಥವಾ ವಾಹನದ ಮೇಲೆ ಸಾಲ. ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ ಜಾಸ್ತಿ. ತಂದೆಯಿಂದ ಲಾಭವಿದೆ. ಶುಭಸಂಖ್ಯೆ:4

ಮಕರ: ಪಾಲುದಾರಿಕೆಯಲ್ಲಿ ಮನಸ್ತಾಪ. ಪ್ರಯಾಣದಲ್ಲಿ ಅಡೆತಡೆ. ಉದ್ಯೋಗ, ಸ್ಥಳ ಬದಲಾವಣೆಯಿಂದ ಸಮಸ್ಯೆ. ಸಂಗಾತಿ ಜತೆ ಕಲಹ. ಶುಭಸಂಖ್ಯೆ: 5

ಕುಂಭ: ಪ್ರೀತಿ-ಪ್ರೇಮದ ವಿಷಯಗಳಲ್ಲಿ ಸಮಸ್ಯೆ. ದಾಂಪತ್ಯದಲ್ಲಿ ಅಹಂಭಾವ ಸರಿಯಲ್ಲ. ಸ್ನೇಹಿತರಿಂದ ಮಗಳ ಮದುವೆಗೆ ನೆರವು. ಶುಭಸಂಖ್ಯೆ:7

ಮೀನ: ಕಾರ್ಖಾನೆ ಮಾಲೀಕರಿಗೆ ಅವಮಾನ. ಮಕ್ಕಳ ನಡವಳಿಕೆಯಲ್ಲಿ ಶಂಕೆ. ಮಾತನಾಡುವಾಗ ಜಾಗ್ರತೆ. ವಾಹನದಿಂದ ತೊಂದರೆ. ಶುಭಸಂಖ್ಯೆ:9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net