ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಸಿನಿಮಾ ರಂಗದವರಿಗೆ ಉತ್ತಮ ಅವಕಾಶ ಸಿಗಲಿದೆ

bhavishya
Published on

ಮೇಷ: ಸಿನಿಮಾ ರಂಗದವರಿಗೆ ಉತ್ತಮ ಅವಕಾಶ ಸಿಗಲಿದೆ. ಅನ್ಯರ ಅವಲಂಬನೆ ಬೇಡ. ಮತ್ತೊಬ್ಬರ ವಿಷಯದಲ್ಲಿ ಪ್ರವೇಶ ಮಾಡದಿರಿ. ಶುಭಸಂಖ್ಯೆ: 7

ವೃಷಭ: ವಾದಕರು, ಗಾಯಕರಿಗೆ ವಿಶೇಷ ದಿನ. ಪರರಿಗೆ ಸಹಾನುಭೂತಿ ತೋರುವಿರಿ. ಆದಾಯಕ್ಕಿಂತ ಖರ್ಚು ಜಾಸ್ತಿಯಾಗಿ ಬೇಸರ. ಶುಭಸಂಖ್ಯೆ: 2

ಮಿಥುನ: ಹಳೆಯ ಮಿತ್ರರ ಭೇಟಿ ಮಾಡುವಿರಿ. ನಿರುದ್ಯೋಗಿ ಗಳಿಗೆ ಉದ್ಯೋಗಾವಕಾಶ. ಹಿತ ಶತ್ರುಬಾಧೆ. ಪರಸ್ತ್ರೀಯಿಂದ ತೊಂದರೆ. ಶುಭಸಂಖ್ಯೆ:4

ಕಟಕ: ಮಕ್ಕಳ ಪ್ರಗತಿಗೆ ಹೆಮ್ಮೆ. ಕಾರ್ಯಕ್ಷೇತ್ರದಲ್ಲಿ ಕೆಲಸದ ಒತ್ತಡ. ಶ್ರಮಕ್ಕೆ ತಕ್ಕ ಫಲ. ದಾಂಪತ್ಯದಲ್ಲಿ ವಿರಸ. ಅಧಿಕ ಖರ್ಚು. ಶುಭಸಂಖ್ಯೆ: 8

ಸಿಂಹ: ಕಾರ್ಯಗಳಲ್ಲಿ ಜಯ. ಧಾರ್ವಿುಕ ವಿಚಾರದಲ್ಲಿ ಆಸಕ್ತಿ ಹೆಚ್ಚಲಿದೆ. ಕೃಷಿಕರಿಗೆ ಲಾಭ. ಸುಖ ಭೋಜನ. ಮಾತಾಪಿತರಲ್ಲಿ ವಾತ್ಸಲ್ಯ. ಶುಭಸಂಖ್ಯೆ:3

ಕನ್ಯಾ: ವೀಸಾ ಸಮಸ್ಯೆಯಿಂದ ವಿದೇಶ ಪ್ರಯಾಣ ರದ್ದು. ಅತಿಯಾದ ಆತ್ಮವಿಶ್ವಾಸದಿಂದ ನಷ್ಟವಾಗಬಹುದು. ದುಡುಕು ಸ್ವಭಾವ. ಶುಭಸಂಖ್ಯೆ: 2

ತುಲಾ: ಉದ್ಯೋಗದಲ್ಲಿ ತೊಂದರೆ. ಸಾರ್ವಜನಿಕವಾಗಿ ತಾಳ್ಮೆ ಅಗತ್ಯ. ನಯವಂಚಕರ ಮಾತಿಗೆ ಮರುಳಾಗದಿರಿ. ಕಾರ್ಯಗಳಲ್ಲಿ ಅಡ್ಡಿ. ಶುಭಸಂಖ್ಯೆ: 1

ವೃಶ್ಚಿಕ: ಕಲಾವಿದರಿಗೆ ಅನಾರೋಗ್ಯ. ಸಹೋದ್ಯೋಗಿಗಳ ಜತೆ ವೈಮನಸ್ಸು. ವಿಪರೀತ ಖರ್ಚು. ದೂರ ಪ್ರಯಾಣ. ನಂಬಿಕೆ ದ್ರೋಹ. ಶುಭಸಂಖ್ಯೆ:2

ಧನಸ್ಸು: ವಿವಾಹ ಯತ್ನದಲ್ಲಿ ಕಾರ್ಯಾನುಕೂಲ. ಅಧಿಕ ತಿರುಗಾಟ ಮಾಡಬೇಕಾಗುವುದು. ಆರೋಗ್ಯದಲ್ಲಿ ಏರುಪೇರು. ಚಂಚಲ ಮನಸ್ಸು. ಶುಭಸಂಖ್ಯೆ: 7

ಮಕರ: ಅನಿರೀಕ್ಷಿತ ದ್ರವ್ಯಲಾಭ. ಋಣವಿಮೋಚನೆಯಾಗಿ ಮಾನಸಿಕ ನೆಮ್ಮದಿ. ವಾಹನ ಯೋಗ. ಅಕಾಲ ಭೋಜನ. ವೃಥಾ ತಿರುಗಾಟ. ಶುಭಸಂಖ್ಯೆ: 6

ಕುಂಭ: ಮಾತಿನಲ್ಲಿ ಹಿಡಿತವಿರಲಿ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಧನ ನಷ್ಟ. ಪರರ ಮಾತಿಗೆ ಕಿವಿ ಕೊಡಬೇಡಿ. ಕೆಲಸದಲ್ಲಿ ಏಕಾಗ್ರತೆ. ಶುಭಸಂಖ್ಯೆ:6

ಮೀನ: ವ್ಯಾಪಾರದ ಆಯ್ಕೆಯಲ್ಲಿ ಗೊಂದಲ. ನಾನಾ ವಿಚಾರಗಳಲ್ಲಿ ಆಸಕ್ತಿ. ರಕ್ತ ಸಂಬಂಧಿ ಕಾಯಿಲೆ. ದಿನಾಂತ್ಯದಲ್ಲಿ ಶುಭ ಸುದ್ದಿ . ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net