ನಿತ್ಯಭವಿಷ್ಯ: ಈ ರಾಶಿಯವರಿಗೆ ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ಸಿಗಲಿದೆ

Nitya Bhavisya Vijayavani
Published on

ಮೇಷ: ಅನಾರೋಗ್ಯ ಸಮಸ್ಯೆ. ಮಕ್ಕಳಿಂದ ತೊಂದರೆ. ತರಕಾರಿ ಮತ್ತು ಹಣ್ಣು ವ್ಯಾಪಾರಿಗಳು ಹಿರಿಯರ ಮನ ನೋಯಿಸಬೇಡಿ. ಶುಭಸಂಖ್ಯೆ: 9

ವೃಷಭ: ರೋಗ ಬಾಧೆಗಳಿಂದ ಮುಕ್ತಿ. ಕುಟುಂಬದಲ್ಲಿ ಪಿತ್ರಾರ್ಜಿತ ಆಸ್ತಿ ಕುರಿತು ಚರ್ಚೆ. ಪಾಲುದಾರಿಕೆಯಲ್ಲಿ ಅಸಮಾಧಾನ ಆದೀತು. ಶುಭಸಂಖ್ಯೆ:8

ಮಿಥುನ: ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ. ಶುಭಕಾರ್ಯಗಳ ಮುಂದೂಡಿಕೆ. ಹೃದಯ ಸಂಬಂಧಿ ಅನಾರೋಗ್ಯ ಸಮಸ್ಯೆ ಕಾಡುವುದು. ಶುಭಸಂಖ್ಯೆ:3

ಕಟಕ: ಮಾನಸಿಕ ಕಿರಿಕಿರಿ ಮತ್ತು ತೊಂದರೆ. ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ಸಿಗಲಿದೆ. ಸರ್ಕಾರಿ ಅಧಿಕಾರಿಗಳಿಂದ ಸೂಕ್ತ ಸಲಹೆ. ಶುಭಸಂಖ್ಯೆ: 1

ಸಿಂಹ: ಮಕ್ಕಳಿಂದ ದುಬಾರಿ ಬೇಡಿಕೆ. ಅನಾರೋಗ್ಯ ಸಮಸ್ಯೆ. ವೈದ್ಯರ ಸಲಹೆ ಪಡೆಯುವಿರಿ. ಆಸ್ತಿ ನೋಂದಣಿ ವ್ಯವಹಾರದಲ್ಲಿ ವಿಘ್ನ. ಶುಭಸಂಖ್ಯೆ: 8

ಕನ್ಯಾ: ಉದ್ಯೋಗಾವಕಾಶ ಹುಡುಕಿ ಬರಲಿದೆ. ಸಾಲಗಾರರಿಂದ ಮುಕ್ತಿ. ಅಮೂಲ್ಯ ವಸ್ತುವನ್ನು ಕಳೆದು ಕೊಳ್ಳುವಿರಿ. ಗುರುಗಳಿಂದ ಮಾರ್ಗದರ್ಶನ. ಶುಭಸಂಖ್ಯೆ: 5

ತುಲಾ: ಕೆಲಸಗಾರರ ಸಮಸ್ಯೆಯಿಂದ ಕೃಷಿ ವಸ್ತುಗಳ ನಷ್ಟ. ಉದ್ಯೋಗ ಒತ್ತಡ. ಕಾಲು ನೋವು. ಬುದ್ಧಿ ಚಾಂಚಲ್ಯ. ವೈರಾಗ್ಯದ ಭಾವ. ಶುಭಸಂಖ್ಯೆ:8

ವೃಶ್ಚಿಕ: ಆಕಸ್ಮಿಕ ಅವಘಡಗಳಿಂದ ಖರ್ಚು. ಭೂಮಿ, ವಾಹನ ಖರೀದಿಯಲ್ಲಿ ಮೋಸವಾದೀತು. ಕೆಲಸಕಾರ್ಯಗಳಲ್ಲಿ ಸೋಮಾರಿತನ. ಶುಭಸಂಖ್ಯೆ:6

ಧನಸ್ಸು: ಕುಟುಂಬದಲ್ಲಿ ಕಿರಿಕಿರಿ, ಕಲಹ. ಪ್ರಯಾಣಕ್ಕೆ ಕಾನೂನಿನ ತಡೆ. ಕಿರುತೆರೆ ನಟರಿಗೆ ಅವಮಾನಗಳಿಗೆ ಗುರಿಯಾಗುವ ಸಂದರ್ಭ. ಶುಭಸಂಖ್ಯೆ:8

ಮಕರ: ವ್ಯವಹಾರ ಸ್ಥಳದಲ್ಲಿ ಕಿರುಕುಳ. ಸ್ನೇಹಿತೆಯಿಂದ ಆರ್ಥಿಕ ಸಹಾಯ. ದಾಯಾದಿ ಕಲಹ ಸಾಧ್ಯತೆ. ಕೋರ್ಟ್ ಕೇಸುಗಳಲ್ಲಿ ಜಯ. ಶುಭಸಂಖ್ಯೆ:2

ಕುಂಭ: ಪಿತ್ರಾರ್ಜಿತ ಆಸ್ತಿಯಿಂದ ಸ್ವಂತ ಉದ್ಯಮಕ್ಕೆ ಉತ್ತಮ ಅನುಕೂಲ. ಉದ್ಯೋಗ ಬದಲಾವಣೆಗೆ ಅಡೆತಡೆ. ದಾಂಪತ್ಯದಲ್ಲಿ ವಿರಸ. ಶುಭಸಂಖ್ಯೆ:4

ಮೀನ: ಅವಘಡಗಳಿಂದ ಬೇಸರ. ವಾಹನಗಳಿಂದ ಪೆಟ್ಟು. ಕಾರ್ಯಗಳಿಗೆ ಅಡೆತಡೆ. ಕಲಾವಿದರು ಮತ್ತು ಗಾಯಕರಿಗೆ ವಿಶೇಷ ವೇದಿಕೆ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net