ನಿತ್ಯಭವಿಷ್ಯ: ಈ ರಾಶಿಯ ನಿರ್ದೇಶಕರು ಮತ್ತು ನಿರ್ಮಾಪಕರ ನಡುವೆ ಘರ್ಷಣೆ

Nitya Bhavisya Vijayavani
Published on

ಮೇಷ: ಧನ ಸಮೃದ್ಧಿ. ವೃತ್ತಿ ಜೀವನದಲ್ಲಿ ಹಲವಾರು ಒತ್ತಡಗಳು ಎದುರಾಗಬಹುದು. ಹೂಡಿಕೆದಾರರಿಗೆ ಇದು ಸಮಯವಲ್ಲ. ಎಚ್ಚರ. ಶುಭಸಂಖ್ಯೆ: 5

ವೃಷಭ: ತರಕಾರಿ ವ್ಯಾಪಾರಿಗಳಿಗೆ ಶುಭದಾಯಕ ದಿನ. ಸಾಲದ ಬಗ್ಗೆ ಎಚ್ಚರವಿರಲಿ. ಕಾರ್ಯ ನಿಮಿತ್ತ ಸ್ವಗ್ರಾಮಕ್ಕೆ ಪ್ರಯಾಣ ಮಾಡುವಿರಿ. ಶುಭಸಂಖ್ಯೆ: 1

ಮಿಥುನ: ಹೊಸ ಕೆಲಸದಲ್ಲಿ ಜಯವಾಗಲಿದೆ. ಕಠಿಣ ಶ್ರಮದಿಂದ ಫಲ ಸಿಗುವುದು. ಕುಟುಂಬದ ಸದಸ್ಯರಿಂದ ತೊಂದರೆ ಎದುರಾಗುವುದು. ಶುಭಸಂಖ್ಯೆ: 9

ಕಟಕ: ಖಾಸಗಿ ನೌಕರರಿಗೆ ವರ್ಗಾವಣೆ. ಹಣ್ಣು, ತರಕಾರಿ ವ್ಯಾಪಾರಸ್ಥರಿಗೆ ಲಾಭ. ಮಹಿಳಾ ಉದ್ಯಮದಾರರಿಗೆ ಆರ್ಥಿಕ ಸಂಕಷ್ಟ ಸಾಧ್ಯತೆ.ಶುಭಸಂಖ್ಯೆ: 5

ಸಿಂಹ: ಕ್ರೀಡಾಪಟುಗಳಿಗೆ ಪ್ರಗತಿಯ ದಿನ. ದಾಂಪತ್ಯದಲ್ಲಿ ವಿರಸ, ನೂತನ ದಂಪತಿಗಳಿಗೆ ಸಂತಾನ ಯೋಗ, ಹೈನುಗಾರಿಕೆಯಲ್ಲಿ ನಷ್ಟ. ಶುಭಸಂಖ್ಯೆ: 7

ಕನ್ಯಾ: ಮಾನಸಿಕ ಭಯ ಅಧಿಕ. ಬೋರವೆಲ್ ಕೊರೆಯುವ ವ್ಯಾಪಾರದಲ್ಲಿ ಲಾಭ. ಹಣಕಾಸಿನ ವ್ಯವಹಾರದಲ್ಲಿ ಉತ್ತಮ ಆದಾಯ. ಶುಭಸಂಖ್ಯೆ: 4

ತುಲಾ: ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಮುನ್ನಡೆ. ಸ್ನೇಹಿತರಿಂದ ಆರ್ಥಿಕ ನೆರವು ದೊರೆಯುವುದು. ಟೆಂಡರ್ ಯೋಜನೆಗಳಲ್ಲಿ ನಿಧಾನ. ಶುಭಸಂಖ್ಯೆ: 3

ವೃಶ್ಚಿಕ: ಸಾಹಸ ಕಾರ್ಯಗಳಲ್ಲಿ ಜಯಶೀಲತೆ. ಶೀತ ಮತ್ತು ಕೆಮ್ಮಿನಿಂದ ಅಸ್ವಸ್ಥತೆ ಕಾಡುವುದು. ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಬೇಡ. ಶುಭಸಂಖ್ಯೆ: 8

ಧನಸ್ಸು: ಬರಬೇಕಾದ ಸರ್ಕಾರಿ ಹಣಕ್ಕೆ ತಡೆ. ಮನಸ್ಸಿನಲ್ಲಿ ನೆಮ್ಮದಿ. ಹಣಕಾಸಿನ ವಿಚಾರದಲ್ಲಿ ಒತ್ತಡ. ನೇರ ನುಡಿಗಳಿಂದ ಶತ್ರುಗಳ ಹೆಚ್ಚಳ. ಶುಭಸಂಖ್ಯೆ: 2

ಮಕರ: ಔಷಧಿ ತಯಾರಿಕರಿಗೆ ಉತ್ತಮ ಆದಾಯ. ಸಗಟು ವ್ಯಾಪಾರಸ್ಥರಿಗೆ ಬೇಡಿಕೆ ಹೆಚ್ಚುವುದು. ಒತ್ತಡ ನಿವಾರಣೆಯಾಗಿ ಸಂತಸ. ಶುಭಸಂಖ್ಯೆ: 6

ಕುಂಭ: ನಿರ್ದೇಶಕರು ಮತ್ತು ನಿರ್ಮಾಪಕರ ನಡುವೆ ಘರ್ಷಣೆ. ತಂದೆಯ ಆರೋಗ್ಯದಲ್ಲಿ ಏರುಪೇರು. ಪತ್ನಿಯೊಂದಿಗೆ ವಾಗ್ವಾದ. ಶುಭಸಂಖ್ಯೆ: 4

ಮೀನ: ಹಣ ಹೂಡಿಕೆಗೆ ಸುಸಮಯ. ದುರ್ವಾರ್ತೆ ಕೇಳಬೇಕಾದೀತು. ಬಂಧುಗಳ ಜೀವನದಲ್ಲಿ ವ್ಯತ್ಯಾಸ. ಕೆಲಸ ಕಾರ್ಯಗಳಲ್ಲಿ ಸೋಲು. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net