ಈ ರಾಶಿಯವರಿಗಿಂದು ಸಾಲ ತೀರಿಸಲು ಹಣಕಾಸು ನೆರವು ಬರಲಿದೆ.: ನಿತ್ಯಭವಿಷ್ಯ

Nitya Bhavisya Vijayavani
Published on

ಮೇಷ: ಕಟ್ಟಡ ನಿರ್ವಣದಲ್ಲಿ ಅಡೆತಡೆಯಾದೀತು. ಮಕ್ಕಳ ಪ್ರಗತಿಯಿಂದ ಸಂತೋಷ. ನಿಮ್ಮ ಇಷ್ಟದಂತೆ ಕಾರ್ಯಗಳು ನೆರವೇರುತ್ತವೆ. ಶುಭಸಂಖ್ಯೆ: 2

ವೃಷಭ: ಕುಟುಂಬ ಸದಸ್ಯರ ಸಹಾಯ. ಸುಖ ಭೋಜನ. ಮನಃಶಾಂತಿ. ವಾಹನಗಳನ್ನು ಕೊಂಡುಕೊಳ್ಳುವ ವ್ಯವಹಾರದಲ್ಲಿ ಎಚ್ಚರ. ಶುಭಸಂಖ್ಯೆ: 6

ಮಿಥುನ: ಪರಿಶ್ರಮಕ್ಕೆ ತಕ್ಕ ಫಲ ದೊರೆಯುವುದು. ಸರ್ಕಾರಿ ಉದ್ಯೋಗಸ್ಥ ಮಹಿಳೆಗೆ ಬಡ್ತಿ. ಸಾಲ ತೀರಿಸಲು ಹಣಕಾಸು ನೆರವು ಬರಲಿದೆ. ಶುಭಸಂಖ್ಯೆ: 1

ಕಟಕ: ಕೆಲಸಗಳಲ್ಲಿ ಜಯ. ಮಾತನಾಡುವಾಗ ಎಚ್ಚರ. ಮಗಳ ಉನ್ನತ ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಅನಾರೋಗ್ಯಕ್ಕೆ ವೈದ್ಯರಿಂದ ಸಲಹೆ. ಶುಭಸಂಖ್ಯೆ:8

ಸಿಂಹ: ಕುಟುಂಬದ ನೆಮ್ಮದಿಗೆ ಅಡ್ಡಿ. ಶತ್ರು ನಾಶ. ಪ್ರಯಾಣದಿಂದ ತೊಂದರೆ. ಸೌಂದರ್ಯ ವರ್ಧಕಗಳ ವ್ಯಾಪಾರದಲ್ಲಿ ವಿಶೇಷ ಲಾಭ. ಶುಭಸಂಖ್ಯೆ: 3

ಕನ್ಯಾ: ಕೂಡಿಟ್ಟ ಹಣದ ಸೃಜನೆಯಿಂದ ತೊಂದರೆ. ದೇವತಾ ಕಾರ್ಯಗಳಲ್ಲಿ ಭಾಗಿ. ದಾನ ಮಾಡುವಿರಿ. ಭೂ ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ: 8

ತುಲಾ: ಹೈನುಗಾರಿಕೆಯಲ್ಲಿ ಕೆಲಸಗಾರರ ಸಮಸ್ಯೆ. ಬಂಧುಗಳ ಭೇಟಿ. ದೇವರಿಗೆ ಶರಣು ಹೋಗುವಿರಿ. ವಾಹನ ಚಾಲಕರಿಗೆ ನಷ್ಟ. ಶುಭಸಂಖ್ಯೆ: 9

ವೃಶ್ಚಿಕ: ಅಧಿಕ ನಷ್ಟ. ಸಾಲ ಮಾಡುವ ಸಾಧ್ಯತೆ. ಸ್ವಂತ ಪರಿಶ್ರಮದಿಂದ ಅನುಕೂಲ. ಆಲಸ್ಯ, ಕೋಪದಿಂದ ಕೆಲಸ ಕಳೆದುಕೊಳ್ಳಬೇಡಿ. ಶುಭಸಂಖ್ಯೆ: 4

ಧನುಸ್ಸು: ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣ, ರಿಯಲ್ ಎಸ್ಟೇಟ್​ನವರಿಗೆ ಲಾಭ. ಉದ್ಯೋಗದಲ್ಲಿ ತಿರುಗಾಟ. ಹೊಸ ಪ್ರಯತ್ನಕ್ಕೆ ಜಯ. ಶುಭಸಂಖ್ಯೆ:1

ಮಕರ: ಪಿತ್ರಾರ್ಜಿತ ಆಸ್ತಿಗಾಗಿ ಜಗಳ. ಮನಕ್ಲೇಷ.ಎಷ್ಟೇ ಹಣ ಬಂದರೂ ಸಾಕಾಗುವುದಿಲ್ಲ.ಅನ್ಯರಲ್ಲಿ ವೈಮನಸ್ಯ. ಸ್ವಯಂಕೃತ ಅಪರಾಧ. ಶುಭಸಂಖ್ಯೆ: 2

ಕುಂಭ: ದುರ್ಜನರ ಸಹವಾಸದಿಂದ ಕೂಡಿಟ್ಟ ಹಣ ನಷ್ಟ. ತೀರ್ಥಯಾತ್ರೆ. ದಿನಸಿ ಅಂಗಡಿಯವರಿಗೆ ಉತ್ತಮ ಸಂಪಾದನೆ. ಮಕ್ಕಳಿಂದ. ಶುಭಸಂಖ್ಯೆ:2

ಮೀನ: ಸ್ತ್ರೀಯರಿಗೆ ಕುಟುಂಬದಲ್ಲಿ ಅನುಕೂಲ. ವೈದ್ಯಕೀಯವಿಚಾರಗಳಲ್ಲಿ ವಿಶೇಷ ಆಸಕ್ತಿ ತಾಳುವಿರಿ. ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net