ನಿತ್ಯಭವಿಷ್ಯ: ಈ ರಾಶಿಯವರಿಗಿಂದು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಪ್ರಗತಿ!

Nitya Bhavisya Vijayavani
Published on

ಮೇಷ: ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹಿನ್ನಡೆ. ಆಭರಣ ವ್ಯಾಪಾರಸ್ಥರಿಗೆ ಶುಭದಾಯಕ ದಿನ. ವಿಶ್ರಾಂತಿಯ ಅಗತ್ಯವಿದೆ. ಶುಭಸಂಖ್ಯೆ:5

ವೃಷಭ: ವಿದೇಶಿ ವ್ಯಾಪಾರಸ್ಥರಿಗೆ ಅನಿರೀಕ್ಷಿತ ಲಾಭ. ಅಧಿಕ ವರಮಾನ ಬಂದು ಸಂತೋಷ. ಮನೆಯಲ್ಲಿ ಶುಭ ಕಾರ್ಯಕ್ಕೆ ಸಿದ್ಧತೆ. ಶುಭಸಂಖ್ಯೆ:1

ಮಿಥುನ: ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ಅವಕಾಶಗಳು ಲಭ್ಯ. ಸಾಹಿತಿಗಳು, ಕಲಾವಿದರಿಗೆ ಉತ್ತಮ ದಿನ. ಅನಿರೀಕ್ಷಿತ ಧನ ಲಾಭ. ಶುಭಸಂಖ್ಯೆ:9

ಕಟಕ: ತೈಲ ಮಾರಾಟ ಮಾಡುವವರಿಗೆ ಒಳ್ಳೆಯ ದಿನ. ಹಿರಿಯರ ಮಾರ್ಗದರ್ಶನದಿಂದ ಲಾಭ. ಆಸ್ತಿ ವಿಚಾರದಲ್ಲಿ ವಾದ ವಿವಾದ. ಶುಭಸಂಖ್ಯೆ:8

ಸಿಂಹ: ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಪ್ರಗತಿ. ಆರೋಗ್ಯ ಸಮಸ್ಯೆ ಕಾಡಬಹುದು. ನಿಮ್ಮ ನಡವಳಿಕೆಗೆ ಕುಟುಂಬದ ವಿರೋಧ. ಶುಭಸಂಖ್ಯೆ:3

ಕನ್ಯಾ: ಸ್ಥಿರಾಸ್ತಿ ಖರೀದಿಯ ಚಿಂತನೆ ಮಾಡುವಿರಿ. ವ್ಯವಹಾರ ದಲ್ಲಿ ಉತ್ತಮ ಅಭಿವೃದ್ಧಿ. ಕೆಲಸ ಕಾರ್ಯಗಳಲ್ಲಿ ಯಶಸ್ಸು ನಿಮ್ಮ ಕಡೆಗಿದೆ. ಶುಭಸಂಖ್ಯೆ:6

ತುಲಾ: ಯಂತ್ರ ತಯಾರಿಕೆಗೆ ಪೋ›ತ್ಸಾಹ. ಐಟಿ ನೌಕರರಿಗೆ ಅದೃಷ್ಟದಾಯಕ ದಿನ. ಚಿಕ್ಕ ವ್ಯಾಪಾರಸ್ಥರಿಗೆ ಸಾಲದಾತರಿಂದ ತೊಂದರೆ. ಶುಭಸಂಖ್ಯೆ:6

ವೃಶ್ಚಿಕ: ರಾಜಕಾರಣಿಗಳಿಗೆ ಪರ್ವಕಾಲ. ತೋಟಗಾರಿಕೆಯಲ್ಲಿ ಆದಾಯ. ಮಕ್ಕಳ ಆರೋಗ್ಯದಲ್ಲಿ ಕಾಳಜಿ ವಹಿಸುವುದು ಅನಿವಾರ್ಯ. ಶುಭಸಂಖ್ಯೆ:5

ಧನಸ್ಸು ಪಿತ್ರಾರ್ಜಿತ ಆಸ್ತಿಯಿಂದ ಆದಾಯ. ಜೇನು ಮತ್ತು ರೇಷ್ಮೆವ್ಯವಹಾರದಲ್ಲಿ ಹೆಚ್ಚಿನ ಆದಾಯ, ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ. ಶುಭಸಂಖ್ಯೆ:3

ಮಕರ: ಸರ್ಕಾರಿ ನೌಕರರಿಗೆ ಮೇಲಧಿಕಾರಿಗಳ ಬೆಂಬಲ. ತಾಯಿಯಿಂದ ಹಣದ ಸಹಕಾರ. ಕೌಟುಂಬಿಕ ಅಗತ್ಯಗಳಿಗಾಗಿ ಖರ್ಚು. ಶುಭಸಂಖ್ಯೆ:8

ಕುಂಭ: ಬ್ಯಾಂಕ್ ವ್ಯವಹಾರದಲ್ಲಿ ಲಾಭ ಆದರೂ ಹಣಕಾಸಿನಲ್ಲಿ ತೊಂದರೆ. ಬುದ್ಧಿ ಚಾಂಚಲ್ಯ ಅಧಿಕ. ನೂತನ ವಸ್ತು ಖರೀದಿ ಬೇಡ. ಶುಭಸಂಖ್ಯೆ: 7

ಮೀನ: ಅತಿಥಿ ಉಪನ್ಯಾಸಕರ ಜೊತೆ ವಾಗ್ವಾದ. ನೌಕರಿಯಲ್ಲಿ ಬಡ್ತಿ ದೊರೆಯುವುದು. ಆಸ್ತಿಗೆ ಸಂಬಂಧಿಸಿದ ಕೆಲಸ ಕಾರ್ಯಗಳಲ್ಲಿ ವಿಘ್ನ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net