ನಿತ್ಯಭವಿಷ್ಯ: ಈ ರಾಶಿಯವರಿಂದು ಆಸ್ತಿ ವಿಚಾರದ ಮಾತುಕತೆ ನಡೆಯಲಿದೆ

Nitya-Bhavisya-FILEminimizer
Published on

ಮೇಷ: ಆಸ್ತಿ ವಿಚಾರದ ಮಾತುಕತೆ ನಡೆಯಲಿದೆ. ಉದ್ಯೋಗದಲ್ಲಿ ನಿರೀಕ್ಷಿತ ಲಾಭ ಬರುವುದು. ಮಕ್ಕಳಿಂದ ಸಂತಸದ ಸುದ್ದಿ ಕೇಳುವಿರಿ.ಶುಭಸಂಖ್ಯೆ: 9.

ವೃಷಭ: ಆರೋಗ್ಯದತ್ತ ಗಮನವಿರಲಿ. ದಾಂಪತ್ಯದಲ್ಲಿ ಸಾಮರಸ್ಯ ಕಡಿಮೆ. ವಿದ್ಯಾರ್ಥಿಗಳಿಗೆ ಪ್ರಗತಿ. ಹಿರಿಯರ ಆರೋಗ್ಯದಲ್ಲಿ ತೊಂದರೆ. ಶುಭಸಂಖ್ಯೆ: 1

ಮಿಥುನ: ಮನೆಗೆ ಆತ್ಮೀಯರ ಆಗಮನವಾಗುವುದು. ವ್ಯಾಪಾರಸ್ಥರಿಗೆ ನಿತ್ಯದ ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ. ಬಡವರಿಗೆ ನೆರವಾಗಿ. ಶುಭಸಂಖ್ಯೆ:5

ಕಟಕ: ಮನೆ ದುರಸ್ತಿಗೆ ಅಧಿಕ ಖರ್ಚು. ವ್ಯರ್ಥ ಕಾಲಹರಣ. ನ್ಯಾಯಾಲಯದಲ್ಲಿ ಜಯ. ಮಕ್ಕಳ ವಿಚಾರದಲ್ಲಿ ಗಮನವಿರಲಿ. ಶುಭಸಂಖ್ಯೆ: 3

ಸಿಂಹ: ಮಗಳ ವಿವಾಹ ವಿಷಯದಲ್ಲಿ ಬದಲಾವಣೆ. ಹೊಸ ಉದ್ಯೋಗದ ಸಾಧ್ಯತೆ ಜಾಸ್ತಿ. ದಂಪತಿಗಳ ಮಧ್ಯೆ ಸಾಮರಸ್ಯ ಇರುವುದು. ಶುಭಸಂಖ್ಯೆ:2

ಕನ್ಯಾ: ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ. ನೀರಿನಿಂದ ಅಪಾಯ. ಪ್ರಯಾಣದಲ್ಲಿ ಜಾಗೃತರಾಗಿರಿ. ದಿನಾಂತ್ಯದಲ್ಲಿ ಅಶುಭ ಸುದ್ದಿ. ಶುಭಸಂಖ್ಯೆ: 7

ತುಲಾ: ಸಾಧನೆಯ ಹಾದಿಯಲ್ಲಿ ಅಡೆತಡೆಗಳು ಎದುರಾಗುವವು. ಹಣಕಾಸಿನ ಮುಗ್ಗಟ್ಟು. ಸ್ನೇಹಿತರ ಮಧ್ಯೆ ಕಲಹ. ಪುಣ್ಯಕ್ಷೇತ್ರ ದರ್ಶನ. ಶುಭಸಂಖ್ಯೆ:2

ವೃಶ್ಚಿಕ: ಲೇವಾದೇವಿ ವ್ಯವಹಾರಸ್ಥರಿಗೆ ಲಾಭ. ಮಕ್ಕಳಿಂದ ಸುವಾರ್ತೆಯನ್ನು ಕೇಳುವಿರಿ. ಪುಸ್ತಕ ವ್ಯಾಪಾರಸ್ಥರಿಗೆ ಸಂತೋಷದ ದಿನ. ಶುಭಸಂಖ್ಯೆ:9

ಧನಸ್ಸು: ಫ್ಯಾನ್ಸಿ ಸ್ಟೋರ್ ವ್ಯಾಪಾರಿಗಳಿಗೆ ಮೋಸ. ಮಾನಸಿಕ ಒತ್ತಡು ಹೆಚ್ಚುತ್ತದೆ. ಸಾಕುಪ್ರಾಣಿಗಳಿಂದ ತೊಂದರೆ. ಪ್ರಯಾಣ ಯೋಗ. ಶುಭಸಂಖ್ಯೆ:1

ಮಕರ: ವಿದ್ಯಾರ್ಥಿಗಳಿಗೆ ಪ್ರಗತಿ. ಲೇವಾದೇವಿ ವ್ಯವಹಾರದಿಂದ ನಷ್ಟ. ಹಿತ ಶತ್ರುಗಳ ಬಗ್ಗೆ ಎಚ್ಚರ. ಖಿನ್ನತೆಗೆ ಜಾರುವಿರಿ, ಎಚ್ಚರಿಕೆ. ಶುಭಸಂಖ್ಯೆ: 6

ಕುಂಭ: ಆಹಾರ ಪದಾರ್ಥ ಮಾರಾಟದಲ್ಲಿ ಲಾಭ. ಮನೆಗೆ ಬಂಧುಮಿತ್ರರ ಆಗಮನ. ಕೃಷಿಕರಿಗೆ ಶುಭ. ವೀಸಾ ಸಮಸ್ಯೆ ಎದುರಾಗುವುದು. ಶುಭಸಂಖ್ಯೆ: 8

ಮೀನ: ಉದ್ಯೋಗಸ್ಥ ಮಹಿಳೆಯರಿಗೆ ಒಳ್ಳೆಯ ದಿನ. ಪಶುಸಂಗೋಪನೆಯಿಂದ ಹೆಚ್ಚು ಲಾಭ. ಹಾಲು-ಹಣ್ಣು ವ್ಯಾಪಾರಸ್ಥರಿಗೆ ಶುಭ. ಶುಭಸಂಖ್ಯೆ:4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net