ನಿತ್ಯಭವಿಷ್ಯ: ಈ ರಾಶಿಯವರಿಗೆ ದಾಂಪತ್ಯದಲ್ಲಿ ಪ್ರೀತಿ. ಹಳೆಯ ಸ್ನೇಹಿತರ ಭೇಟಿ

Nitya-Bhavisya-FILEminimizer
Published on

ಮೇಷ: ಸಂಗಾತಿಯ ಮೇಲೆ ವಿನಾಕಾರಣ ದ್ವೇಷ. ಯಶಸ್ಸು ಕಾಣುವಿರಿ. ಗುರುಗಳ ಬೋಧನೆ ಸಿಗಲಿದೆ. ಅವಿವಾಹಿತರಿಗೆ ವಿವಾಹ ಯೋಗ. ಶುಭಸಂಖ್ಯೆ: 2

ವೃಷಭ: ರಾಜಕೀಯದವರಿಗೆ ತೊಂದರೆ. ಮಾಲೀಕರಿಗೆ ಕೋಪ. ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ಲಾಭ. ಅನವಶ್ಯಕ ಮಾತುಗಳಿಂದ ದೂರವಿರಿ. ಶುಭಸಂಖ್ಯೆ: 9

ಮಿಥುನ: ದ್ರವರೂಪದ ವಸ್ತುಗಳಿಂದ ಲಾಭ. ಕಾರ್ಯ ಸಾಧನೆಗೆ ತಿರುಗಾಟ. ಮನೆ ಕಟ್ಟಲು ಸಾಲ ಮಾಡುವ ಸಾಧ್ಯತೆ. ದಾಯಾದಿ ಕಲಹ. ಶುಭಸಂಖ್ಯೆ:6

ಕಟಕ: ದುಷ್ಟರಿಂದ ದೂರವಿರಿ. ಜೇನು, ರೇಷ್ಮೆ ಕೃಷಿಯಲ್ಲಿ ಲಾಭ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಗತಿ. ಉದ್ಯೋಗದಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 5

ಸಿಂಹ: ಮನೆ ಖರೀದಿಗೆ ಸ್ನೇಹಿತರ ನೆರವು. ಕಲಹ. ಭೂಮಿ ನೊಂದಣಿ ಕಾರ್ಯಗಳಲ್ಲಿ ವೈಫಲ್ಯ. ವೀಸಾ ಸಮಸ್ಯೆಯಿಂದ ಪ್ರಯಾಣ ರದ್ದು. ಶುಭಸಂಖ್ಯೆ: 3

ಕನ್ಯಾ: ಶೈಕ್ಷಣಿಕ ಕ್ಷೇತ್ರದಲ್ಲಿ ಇರುವವರಿಗೆ ಅನಿರೀಕ್ಷಿತ ಲಾಭ. ವಾಹನ ರಿಪೇರಿ. ನೀಚ ಜನರಿಂದ ದೂರವಿರಿ. ನಟನಾ ಕ್ಷೇತ್ರದಲ್ಲಿಆಸಕ್ತಿ. ಶುಭಸಂಖ್ಯೆ:1

ತುಲಾ: ಉದ್ಯೋಗಸ್ಥ ಮಹಿಳೆಯರಿಗೆ ಸಲ್ಲದ ಅಪವಾದ. ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗಲಿದೆ. ಥಳುಕಿನ ಮಾತಿಗೆ ಮರುಳಾಗದಿರಿ. ಶುಭಸಂಖ್ಯೆ: 4

ವೃಶ್ಚಿಕ: ವಿದ್ಯಾರ್ಥಿಗಳಿಗೆ ವಿಧೇಯತೆಯಿಂದ ಯಶಸ್ಸು. ದಾಂಪತ್ಯದಲ್ಲಿ ಪ್ರೀತಿ. ಹಳೆಯ ಸ್ನೇಹಿತರ ಭೇಟಿ. ದುರಭ್ಯಾಸಕ್ಕೆ ಹಣ ವ್ಯಯ. ಶುಭಸಂಖ್ಯೆ:8

ಧನಸ್ಸು: ಕಚೇರಿಯಲ್ಲಿ ಮಾತಿನ ಚಕಮಕಿ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ನಾನಾ ವಿಚಾರಗಳಲ್ಲಿ ಆಸಕ್ತಿ ತಾಳುವಿರಿ. ಶುಭಸಂಖ್ಯೆ: 7

ಮಕರ: ದಿನಸಿ ವ್ಯಾಪಾರದಲ್ಲಿ ಲಾಭ. ಹಿತೈಷಿಗಳಿಂದ ಪ್ರಶಂಸೆ. ಭೂ ವ್ಯವಹಾರದಲ್ಲಿ ನಷ್ಟ. ಎಲೆಕ್ಟ್ರಾನಿಕ್ಸ್ ಉಪಕರಣಗಳಿಂದ ಲಾಭ. ಶುಭಸಂಖ್ಯೆ: 6

ಕುಂಭ: ಷೇರು ವ್ಯವಹಾರಗಳಿಂದ ಲಾಭ. ಉದರ ಸಂಬಂಧಿ ರೋಗ. ಪತ್ರಕರ್ತರು ಮತ್ತು ಮಾಧ್ಯಮದವರಿಗೆ ಅನಿರೀಕ್ಷಿತ ತಿರುವು. ಶುಭಸಂಖ್ಯೆ:2

ಮೀನಾ: ಹಣ ಬಂದರೂ ಉಳಿಯದು. ಪ್ರತಿಭೆಗೆ ತಕ್ಕ ಫಲ. ಕಿರುತೆರೆಯ ನಟರಿಗೆ ವಿಶೇಷ ಅವಕಾಶ ಲಭ್ಯ. ಸಂಘ-ಸಂಸ್ಥೆಗಳಲ್ಲಿ ಅವಕಾಶ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net