ನಿತ್ಯಭವಿಷ್ಯ: ಈ ರಾಶಿಯವರಿಗೆ ರಾಜಕೀಯದವರ ಸಂಪರ್ಕ. ಹಿತ ಶತ್ರುಗಳಿಂದ ಅಪಪ್ರಚಾರ

Nitya Bhavisya Vijayavani
Published on

ಮೇಷ: ಕಚೇರಿಯ ಕೆಲಸಗಳಲ್ಲಿ ಅನುಕೂಲ. ಸ್ತಿರಾಸ್ಥಿ ನೋಂದಣಿಗೆ ಅಡೆತಡೆ. ಸರ್ಕಾರಿ ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಸಹಾಯ. ಶುಭಸಂಖ್ಯೆ: 8

ವೃಷಭ: ಪತಿಯ ಕಡೆಯಿಂದ ಬರುವ ಆಸ್ತಿಯ ತಗಾದೆಯಾದರೂ ಅನುಕೂಲ. ಸಾಲದ ಸುಳಿಗೆ ಸಿಲುಕುವಿರಿ. ಆಕಸ್ಮಿಕ ದುರ್ಘಟನೆ. ಶುಭಸಂಖ್ಯೆ: 3

ಮಿಥುನ: ಉದ್ಯಮದಲ್ಲಿ ಬದಲಾವಣೆ. ಸಮಾರಂಭಕ್ಕೆ ಖರ್ಚು. ಅಧಿಕಾರಿಗಳಿಂದ ತೊಂದರೆ. ಮಗನ ವಿವಾಹಕ್ಕೆ ಕಾಲ ಕೂಡಿಬರಲಿದೆ. ಶುಭಸಂಖ್ಯೆ:8

ಕಟಕ: ಮಾಲೀಕರಿಗೆ ಕೆಲಸಗಾರರ ಅಭಾವದ ಅನುಭವ. ಹಳೆಯ ಸಾಲವನ್ನು ತೀರಿಸುವಿರಿ. ಅಹಂಭಾವ ದಿಂದ ವ್ಯಾಪಾರದಲ್ಲಿ ನಷ್ಟ. ಶುಭಸಂಖ್ಯೆ: 4

ಸಿಂಹ: ವಿದೇಶ ಪ್ರಯಾಣ ಅವಕಾಶ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ಅಧಿಕ ಖರ್ಚು. ಉದ್ಯೋಗ ಬದಲಾವಣೆಯ ನಿರ್ಧಾರ. ಶುಭಸಂಖ್ಯೆ: 1

ಕನ್ಯಾ: ಮದುವೆಗೆ ಸಂಬಂಧ ಕೂಡಿ ಬರಲಿದೆ. ಪಾಲುದಾರಿಕೆ ಉದ್ಯಮದಲ್ಲಿ ಹೆಚ್ಚಿದ ಒತ್ತಡ. ತಂದೆಯ ಮಿತ್ರರಿಂದ ಅನುಕೂಲ. ಶುಭಸಂಖ್ಯೆ:5

ತುಲಾ: ಪ್ರತಿಭೆಗೆ ವೇದಿಕೆ ಲಭ್ಯ. ಉದ್ಯೊಗದಲ್ಲಿ ಹೆಚ್ಚಿನ ಜವಾಬ್ದಾರಿ. ಚಿಕ್ಕಪುಟ್ಟ ವ್ಯವಹಾರದಲ್ಲಿ ಲಾಭ. ಸಾಲಗಾರರಿಂದ ಗೌರವಕ್ಕೆ ಧಕ್ಕೆ. ಶುಭಸಂಖ್ಯೆ:5

ವೃಶ್ಚಿಕ: ಪ್ರಭಾವಿ ವ್ಯಕ್ತಿಗಳಿಂದ ಸಹಾಯ. ಕಾರ್ಯಗಳಲ್ಲಿ ಅಡೆತಡೆ. ಬಟ್ಟೆ ಉದ್ಯಮ-ವ್ಯಾಪಾರದಲ್ಲಿ ಅನುಕೂಲ. ಮನಸ್ಸಿನಲ್ಲಿ ಅಶಾಂತಿ. ಶುಭಸಂಖ್ಯೆ: 6

ಧನಸ್ಸು: ಮೇಲಧಿಕಾರಿಗಳ ಸಹಾಯ. ರಾಜಕೀಯದವರ ಸಂಪರ್ಕ. ಹಿತ ಶತ್ರುಗಳಿಂದ ಅಪಪ್ರಚಾರ. ನೂತನ ದಂಪತಿಗಳಿಗೆ ಶುಭಸುದ್ದಿ. ಶುಭಸಂಖ್ಯೆ:1

ಮಕರ: ಪತ್ರಕರ್ತರಿಗೆ ಹೆಚ್ಚಿದ ಒತ್ತಡ. ಆರಕ್ಷಕ ವೃತ್ತಿಯಲ್ಲಿ ಬಡ್ತಿ ಸಾಧ್ಯತೆ. ಪಿತ್ರಾರ್ಜಿತ ಆಸ್ತಿ ಸಮಸ್ಯೆ. ರಾಜಕೀಯ ವ್ಯಕ್ತಿಗಳಿಂದ ಸಹಾಯ. ಶುಭಸಂಖ್ಯೆ: 8

ಕುಂಭ: ಹಣ್ಣಿನ ವ್ಯವಹಾರದಲ್ಲಿ ಪ್ರಗತಿ. ವಾಹನ ಮಾರಾಟಕ್ಕೆ ಮನಸ್ಸು. ಅಮೂಲ್ಯ ವಸ್ತುಗಳ ಕಳವು. ಬಂಧುಗಳಿಂದ ಅನಗತ್ಯ ಕಿರಿಕಿರಿ. ಶುಭಸಂಖ್ಯೆ: 9

ಮೀನಾ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣ. ಹೃದಯ ಕಾಯಿಲೆಯವರು ಎಚ್ಚರದಿಂದಿರಿ. ಸಾಲ ಸಿಗಲಿದೆ. ಯತ್ನ ಕಾರ್ಯದಲ್ಲಿ ಜಯ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net