ನಿತ್ಯಭವಿಷ್ಯ: ಈ ರಾಶಿಯವರಿಂದು ಹಣಕಾಸಿನ ವಿಚಾರದಲ್ಲಿ ಎಚ್ಚರ ವಹಿಸಲೇಬೇಕು.

Nitya Bhavisya Vijayavani
Published on

ಮೇಷ:  ಚಿನ್ನಾಭರಣಗಳನ್ನು ಖರೀದಿಸುವಿರಿ. ಧಾರ್ವಿುಕ ಕಾರ್ಯಕ್ರಮಕ್ಕೆ ಅಧಿಕ ಖರ್ಚು. ಕುಟುಂಬದಲ್ಲಿ ಒಗ್ಗಟ್ಟಿನ ಕೊರತೆ ಕಾಡಲಿದೆ. ಶುಭಸಂಖ್ಯೆ: 5

ವೃಷಭ: ಒತ್ತಡದಿಂದ ಹೊರಬನ್ನಿ. ಕಾರ್ಯಗಳನ್ನು ಪೂರ್ಣಗೊಳಿಸಿ. ಸ್ಥಿರಾಸ್ತಿಯನ್ನು ಗಳಿಸುವಿರಿ. ಉದ್ಯೋಗಸ್ಥ ಮಹಿಳೆಯರಿಗೆ ಖಿನ್ನತೆ. ಶುಭಸಂಖ್ಯೆ: 1

ಮಿಥುನ: ಹೊಸ ವ್ಯವಹಾರಕ್ಕೆ ಮನಸ್ಸು. ಆರ್ಥಿಕ ಅನುಕೂಲ ಒದಗಿಬರಲಿದೆ. ನಿರ್ಧಾರದಲ್ಲಿ ಆತ್ಮವಿಶ್ವಾಸವಿರಲಿ. ದುಡುಕುತನ ಬೇಡ. ಶುಭಸಂಖ್ಯೆ:3

ಕಟಕ: ಮನಸ್ಸಿಗೆ ಚಿಂತೆ. ಸ್ವಂತ ಉದ್ಯೋಗ ಸಂಬಂಧದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ. ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ. ಶುಭಸಂಖ್ಯೆ: 7

ಸಿಂಹ: ಉದ್ಯೋಗದಲ್ಲಿ ಒತ್ತಡ. ದೃಢವಾದ ತೀರ್ವನವನ್ನು ತೆಗೆದುಕೊಳ್ಳಿ. ಐಟಿ ಉದ್ಯೋಗಿಗಳಿಗೆ ಉತ್ತಮ ಆದಾಯವಿರುತ್ತದೆ. ಶುಭಸಂಖ್ಯೆ: 2

ಕನ್ಯಾ: ಪಾಲುದಾರಿಕೆಯಲ್ಲಿ ವೈಮನಸ್ಯ. ಸಗಟು ವ್ಯಾಪಾರಿಗಳಿಗೆ ಲಾಭವಿದೆ. ಒಳ್ಳೆಯತನದ ದುರುಪಯೋಗ ಆದೀತು. ವಿರಕ್ತ ಭಾವ. ಶುಭಸಂಖ್ಯೆ: 6

ತುಲಾ:  ತಂದೆಯ ಆರೋಗ್ಯದಲ್ಲಿ ವ್ಯತ್ಯಯ. ಪ್ರವಾಸ ಕೈಗೊಳ್ಳುವಿರಿ. ಕೆಲಸಗಳಲ್ಲಿ ಜಯವಿದೆ. ಪ್ರಭಾವಿ ವ್ಯಕ್ತಿಗಳ ಸಂಪರ್ಕವಾಗುವುದು. ಶುಭಸಂಖ್ಯೆ: 6

ವೃಶ್ಚಿಕ: ಆತ್ಮಶಕ್ತಿಯ ಕೊರತೆ. ಕುಟುಂಬದಲ್ಲಿ ಸಾಮರಸ್ಯವಿರದು. ಕೆಲಸಗಳಲ್ಲಿ ಆತ್ಮೀಯರ ಸಹಕಾರ ಸಿಗಲಿದೆ. ದಿನಾಂತ್ಯದಲ್ಲಿ ಶುಭ ಸುದ್ದಿ.ಶುಭಸಂಖ್ಯೆ: 4

ಧನಸ್ಸು:  ಹಣಕಾಸಿನ ವಿಚಾರದಲ್ಲಿ ಎಚ್ಚರ ವಹಿಸಲೇಬೇಕು. ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣ. ಕಟ್ಟಡ ನಿರ್ಮಾಣ ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ: 8

ಮಕರ: ಉದರ ಬಾಧೆ. ಸೇವಾವೃತ್ತಿಯವರಿಗೆ ಆದಾಯ. ದೊಡ್ಡ ಹುದ್ದೆಯಲ್ಲಿರುವವರು ನಿರ್ಧಾರಕ್ಕೆ ಬದ್ಧರಾಗಿ. ವಾಹನಕ್ಕಾಗಿ ಖರ್ಚು. ಶುಭಸಂಖ್ಯೆ:1

ಕುಂಭ: ಸಂಗಾತಿಯ ಮೇಲೆ ಕೋಪ ಬೇಡ. ಆಸ್ತಿ ವಿಚಾರದಲ್ಲಿ ಬುದ್ಧಿವಂತಿಕೆಯ ನಿರ್ಧಾರ ತೆಗೆದುಕೊಳ್ಳಿ. ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಶುಭಸಂಖ್ಯೆ: 9

ಮೀನಾ: ಭೂ ವ್ಯವಹಾರ, ಹೈನುಗಾರಿಕೆಯಲ್ಲಿ ನಿರೀಕ್ಷಿತ ಲಾಭ.ಪೂಜಾ ಸಾಮಗ್ರಿಗಳ ವ್ಯಾಪಾರಸ್ಥರಿಗೆ ಆದಾಯ.ವೈದ್ಯರಿಗೆ ಕಲಹ ಸಮಸ್ಯೆ.ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net