

ಮೇಷ: ಗುರು, ಕುಲದೈವ ದರ್ಶನ. ಮಾನಸಿಕ ಆಘಾತ.ಸ್ವಂತ ನಿರ್ಧಾರ ಕೈಗೊಳ್ಳುವಲ್ಲಿ ಗೊಂದಲ.ಕೆಲಸ ಕಾರ್ಯಗಳಿಗೆ ಶತ್ರು ತೊಂದರೆ.ಶುಭಸಂಖ್ಯೆ: 9
ವೃಷಭ: ಸ್ವಯಂಕೃತ ಅಪರಾಧದಿಂದ ನಷ್ಟ. ನೆರೆಹೊರೆಯವರಿಂದ ತೊಂದರೆ. ಉದ್ಯೋಗ ಬದಲಾವಣೆ. ಪ್ರಯಾಣದಿಂದ ತೊಂದರೆ. ಶುಭಸಂಖ್ಯೆ:6
ಮಿಥುನ: ಆರ್ಥಿಕ ಸಮಸ್ಯೆಗೆ ಪರಿಹಾರ. ಮಾತಿನಿಂದ ಶತ್ರುಗಳು ಸೃಷ್ಟಿಯಾಗುವರು. ಕುಲದೇವರ ಕೃಪೆ ಸದಾ ಇರಲು ಭಕ್ತಿಯಿಂದ ಭಜಿಸಿ. ಶುಭಸಂಖ್ಯೆ: 9
ಕಟಕ: ಆರೋಗ್ಯದಲ್ಲಿ ಏರುಪೇರು. ಮಕ್ಕಳ ಭವಿಷ್ಯದ ಚಿಂತೆ. ಪ್ರೇಮದ ವಿಚಾರದಿಂದ ತೊಂದರೆ. ಹೊಸದಾಗಿ ಪಾಲುದಾರರ ಸೇರ್ಪಡೆ. ಶುಭಸಂಖ್ಯೆ: 7
ಸಿಂಹ: ರೇಷ್ಮೆ, ಜೇನು ಕೃಷಿಕರಿಗೆ ಲಾಭ. ಸಾಲ ಮಾಡುವ ಸಂಭವ. ಜಿಪುಣತನ ಪ್ರದರ್ಶಿಸುವಿರಿ. ಮನೆಯ ವಾತಾವರಣ ಕಲುಷಿತ. ಶುಭಸಂಖ್ಯೆ:3
ಕನ್ಯಾ: ವಿದೇಶ ಪ್ರಯಾಣ ಸ್ಥಗಿತ. ಸಹೋದರಿಯರ ಸಹಕಾರ. ಸಾಲದ ಪ್ರಮಾಣ ಅಧಿಕ. ಅನಾರೋಗ್ಯದಿಂದ ಉದ್ಯೋಗಕ್ಕೆ ಸಮಸ್ಯೆ. ಶುಭಸಂಖ್ಯೆ: 7
ತುಲಾ: ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ. ಪಿತ್ರಾರ್ಜಿತ ಆಸ್ತಿವಿಚಾರದಲ್ಲಿ ಗೊಂದಲ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ:7
ವೃಶ್ಚಿಕ: ಕೈಗೆ ಬಂದ ತುತ್ತು ಬಾಯಿಗೆ ಬರದು. ಮಕ್ಕಳಿಂದ ನೋವು. ಆಸ್ತಿ ಮಾರಾಟದಿಂದ ನಷ್ಟ. ಅರಣ್ಯ ಉತ್ಪನ್ನ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 4
ಧನಸ್ಸು: ದಿನಸಿ, ಸಗಟು ವ್ಯಾಪಾರದಲ್ಲಿ ಲಾಭ. ಪಾಲುದಾರಿಕೆಯಲ್ಲಿ ನಷ್ಟ. ಕೊಟ್ಟ ಹಣ ಬರಲಿದೆ. ಆತ್ಮೀಯರು ದೂರವಾಗುವ ಸಂಭವ. ಶುಭಸಂಖ್ಯೆ:1
ಮಕರ: ಮಕ್ಕಳಿಂದ ಅನುಕೂಲ ಮತ್ತು ಲಾಭ ಆಗಲಿದೆ. ಮುಖ್ಯ ತೀರ್ವನಗಳಲ್ಲಿ ಗೊಂದಲ ಸಾಧ್ಯತೆ. ಕುಟುಂಬದಲ್ಲಿ ಶುಭ ಸುದ್ದಿ. ಶುಭಸಂಖ್ಯೆ:7
ಕುಂಭ: ಕೃಷಿಯ ಮೂಲಕ ನಿರೀಕ್ಷಿತ ಲಾಭ. ಉದ್ಯೋಗ ಕಳೆದುಕೊಳ್ಳುವ ಆತಂಕ. ಆತುರದ ಸ್ವಭಾವದಿಂದ ಕಾರ್ಯಗಳಲ್ಲಿ ವಿಘ್ನ. ಶುಭಸಂಖ್ಯೆ: 9
ಮೀನಾ: ಸ್ವಂತ ಕೆಲಸ ಕಾರ್ಯಗಳಲ್ಲಿ ನೆಮ್ಮದಿ. ಹೆಣ್ಣು ಮಕ್ಕಳು ದೂರವಾಗುವ ಸಂಭವ. ಅನಾರೋಗ್ಯ, ಆಸ್ಪತ್ರೆ ಸೇರುವ ಸಾಧ್ಯತೆ. ಶುಭಸಂಖ್ಯೆ: 8