

ಮೇಷ: ಭತ್ತ ಬೇಸಾಯಗಾರರಿಗೆ ಆರೋಗ್ಯದಲ್ಲಿ ವ್ಯತ್ಯಾಸ. ಕಾನೂನುಬಾಹಿರ ಚಟುವಟಿಕೆಗೆ ಮನಸ್ಸು. ಧಾರ್ವಿುಕ ಕಾರ್ಯದಲ್ಲಿ ಅಡೆತಡೆ. ಶುಭಸಂಖ್ಯೆ: 5
ವೃಷಭ: ಮಗಳ ಮದುವೆ ವಿಷಯದಲ್ಲಿ ನಿರಾಸೆ. ಆಕಸ್ಮಿಕ ಘಟನೆ ಮರುಕಳಿಸೀತು. ಎಲೆಕ್ಟ್ರಾನಿಕ್ಸ್ ಯಂತ್ರೋಪಕರಣಗಳಿಂದ ಪೆಟ್ಟು. ಶುಭಸಂಖ್ಯೆ:9
ಮಿಥುನ: ಆರೋಗ್ಯದಲ್ಲಿ ವ್ಯತ್ಯಾಸ. ಸ್ನೇಹಿತರಿಂದ ಸಂಕಷ್ಟ. ಪಾಲುದಾರಿಕೆಯಲ್ಲಿ ನಷ್ಟ. ಸಂಗಾತಿಯಿಂದ ನೋವು ಉಂಟಾಗಬಹುದು. ಶುಭಸಂಖ್ಯೆ: 6
ಕಟಕ: ಆರ್ಥಿಕ ನಷ್ಟ. ಸ್ವಯಂಕೃತ ಅಪರಾಧದಿಂದ ನೋವು. ಬಂದಂತಹ ಅವಕಾಶಗಳು ತಪ್ಪುವುದು. ಮೇಲಾಧಿಕಾರಿಗಳಿಂದ ಸಮಸ್ಯೆ. ಶುಭಸಂಖ್ಯೆ:2
ಸಿಂಹ: ಸ್ವಂತ ಉದ್ಯೋಗ, ವ್ಯವಹಾರ, ಕರ್ತವ್ಯದಲ್ಲಿ ನಿರೀಕ್ಷಿತ ಜಯ. ಅನಿರೀಕ್ಷಿತ ಪ್ರಯಾಣ. ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಯಶಸ್ಸು. ಶುಭಸಂಖ್ಯೆ:4
ಕನ್ಯಾ: ಅಪಘಾತವಾಗುವ ಸಂಭವ. ಬಾಂಧವರಿಂದ ನಷ್ಟ. ಪಿತ್ರಾರ್ಜಿತ ಆಸ್ತಿ ಕುರಿತು ಗೊಂದಲ. ಕೋರ್ಟ್ ಮೆಟ್ಟಿಲೇರುವ ಸಂದರ್ಭ. ಶುಭಸಂಖ್ಯೆ:1
ತುಲಾ: ಸಂಗಾತಿಯಿಂದ ಸಂಕಟ. ಪಾಲುದಾರಿಕೆಯಲ್ಲಿ ಲಾಭದ ಪ್ರಮಾಣ ಅಧಿಕ. ಅನುಕೂಲ ಕೆಲಸ, ಕಾರ್ಯನಿಮಿತ್ತ ಪ್ರಯಾಣ. ಶುಭಸಂಖ್ಯೆ: 7
ವೃಶ್ಚಿಕ: ಉದ್ಯೋಗದಿಂದ ಧನಾಗಮನ. ಮೇಲಧಿಕಾರಿಗಳಿಂದ ಪ್ರಶಂಸೆ. ಗೌರವಕ್ಕೆ ಧಕ್ಕೆ ಸಾಧ್ಯತೆ. ವ್ಯವಹಾರದಲ್ಲಿ ಸಮಸ್ಯೆಯಾದೀತು. ಶುಭಸಂಖ್ಯೆ:7
ಧನುಸ್ಸು: ಪ್ರೇಮದ ವಿಷಯದಲ್ಲಿ ಜಯ. ಮಕ್ಕಳಿಂದ ಅನುಕೂಲ. ಗರ್ಭಿಣಿಯರು ಎಚ್ಚರದಿಂದಿರಿ. ಧರ್ಮ ಕಾರ್ಯಗಳಲ್ಲಿ ತೊಡಗುವಿರಿ. ಶುಭಸಂಖ್ಯೆ:3
ಮಕರ: ಕೋರ್ಟ್ ಮೆಟ್ಟಿಲೇರುವ ಸಂದರ್ಭ. ವೇಗದ ಚಾಲನೆಯಿಂದ ತೊಂದರೆ. ನಿದ್ರಾಭಂಗ. ಉನ್ನತ ಅಧಿಕಾರಿಗಳಿಂದ ಸಮಸ್ಯೆ. ಶುಭಸಂಖ್ಯೆ: 5
ಕುಂಭ: ಗ್ರಂಥಾಲಯ, ಶೈಕ್ಷಣಿಕ ಉದ್ಯೋಗಿಗಳಿಗೆ ನಷ್ಟ. ದಾಯಾದಿಗಳಿಂದ ಅನುಕೂಲ. ಪಾಲುದಾರಿಕೆಯಲ್ಲಿ ಲಾಭ. ದಿನಾಂತ್ಯದಲ್ಲಿ ಶುಭ.ಶುಭಸಂಖ್ಯೆ: 6
ಮೀನ: ಮಕ್ಕಳಿಂದ ಧನಾಗಮನ. ಪ್ರಯಾಣದಲ್ಲಿ ಅಡೆತಡೆ. ಆರೋಗ್ಯದಲ್ಲಿ ತೊಂದರೆ ಆದೀತು. ಮನೆಯ ವಾತಾವರಣದಲ್ಲಿ ಆತಂಕ. ಶುಭಸಂಖ್ಯೆ: 3