ಈ ರಾಶಿಯ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ: ನಿತ್ಯಭವಿಷ್ಯ

Nitya Bhavisya Vijayavani
Published on

ಮೇಷ: ಚಿನ್ನಾಭರಣ ವ್ಯಾಪಾರದಲ್ಲಿ ಮೋಸ ಸಾಧ್ಯತೆ. ಸಾಮರ್ಥ್ಯದ ಮೇಲೆ ನಂಬಿಕೆ ಇಡಿ. ಮತ್ತೊಬ್ಬರ ವಿಷಯದಲ್ಲಿ ಪ್ರವೇಶ ಬೇಡ. ಶುಭಸಂಖ್ಯೆ: 9

ವೃಷಭ: ಗಂಡನ ಆರೋಗ್ಯದಲ್ಲಿ ಏರುಪೇರು ಆಗಬಹುದು. ಪರರಿಗೆ ಸಹಾನುಭೂತಿ ತೋರುವಿರಿ. ಆದಾಯಕ್ಕಿಂತ ಖರ್ಚು ಜಾಸ್ತಿ. ಶುಭಸಂಖ್ಯೆ:1

ಮಿಥುನ: ಮಿತ್ರರ ಭೇಟಿ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ. ಹಿತ ಶತ್ರುಬಾಧೆ ಜಾಸ್ತಿಯಾಗುವುದು. ಪರಸ್ತ್ರೀಯಿಂದ ತೊಂದರೆ. ಶುಭಸಂಖ್ಯೆ:7

ಕಟಕ: ನಿಮ್ಮ ಕಾರ್ಯಕ್ಷೇತ್ರದಲ್ಲಿ ಒತ್ತಡ. ಶ್ರಮಕ್ಕೆ ತಕ್ಕ ಫಲ ದೊರೆಯುವುದು. ದೂರ ಪ್ರಯಾಣ. ದಾಂಪತ್ಯದಲ್ಲಿ ವಿರಸ. ಅಧಿಕ ಖರ್ಚು. ಶುಭಸಂಖ್ಯೆ:4

ಸಿಂಹ: ಗೃಹ ನಿರ್ವಣದಲ್ಲಿ ಜಯ. ಧಾರ್ವಿುಕ ವಿಚಾರದಲ್ಲಿ ಆಸಕ್ತಿ. ಕೃಷಿಕರಿಗೆ ಲಾಭ. ಸುಖ ಭೋಜನ. ಮಾತಾಪಿತರಲ್ಲಿ ವಾತ್ಸಲ್ಯ. ಶುಭಸಂಖ್ಯೆ:9

ಕನ್ಯಾ: ಅತಿಯಾದ ಆತ್ಮವಿಶ್ವಾಸದಿಂದ ನಷ್ಟವಾದೀತು. ದುಡುಕು ಸ್ವಭಾವದಿಂದ ಅವಕಾಶ ವಂಚಿತ. ಆಕಸ್ಮಿಕ ಧನಲಾಭ. ಮನಃಶಾಂತಿ. ಶುಭಸಂಖ್ಯೆ: 2

ತುಲಾ: ಖಾಸಗಿ ಉದ್ಯೋಗದಲ್ಲಿ ತೊಂದರೆ. ಸಂಸಾರದಲ್ಲಿ ತಾಳ್ಮೆ ಅಗತ್ಯ. ನಯವಂಚಕರ ಮಾತಿಗೆ ಮರುಳಾಗದಿರಿ. ಕೆಲಸದಲ್ಲಿ ಆತಂಕ. ಶುಭಸಂಖ್ಯೆ:9

ವೃಶ್ಚಿಕ: ಸಹೋದ್ಯೋಗಿಗಳೊಡನೆ ವೈಮನಸ್ಸು ಬೇಡ. ವಿಪರೀತ ಖರ್ಚು. ದೂರ ಪ್ರಯಾಣ ಸಾಧ್ಯತೆ. ಸ್ನೇಹಿತೆಯಿಂದ ನಂಬಿಕೆ ದ್ರೋಹ. ಶುಭಸಂಖ್ಯೆ:8

ಧನುಸ್ಸು: ಯತ್ನ ಕಾರ್ಯದಲ್ಲಿ ಅನುಕೂಲವಿದೆ. ಬಟ್ಟೆ ವ್ಯಾಪಾರದಲ್ಲಿ ನಷ್ಟ. ಸಕ್ಕರೆ ಕಾಯಿಲೆ ಉಲ್ಬಣ. ಚಂಚಲ ಮನಸ್ಸು ನಿಯಂತ್ರಿಸಿ. ಶುಭಸಂಖ್ಯೆ: 7

ಮಕರ: ಅನಿರೀಕ್ಷಿತ ತಿರುವು. ಋಣವಿಮೋಚನೆ. ವಾಹನ ಖರೀದಿಗೆ ಯೋಗ. ಅಕಾಲ ಭೋಜನದಿಂದ ಅನಾರೋಗ್ಯ. ವೃಥಾ ತಿರುಗಾಟ. ಶುಭಸಂಖ್ಯೆ: 2

ಕುಂಭ: ಮಾತಿನಲ್ಲಿ ಹಿಡಿತವಿರಲಿ. ವ್ಯಾಪಾರದ ಸ್ಥಳ ಬದಲಾವಣೆ. ಪರರ ಮಾತಿಗೆ ಕಿವಿ ಕೊಡಬೇಡಿ. ಕೆಲಸದಲ್ಲಿ ಏಕಾಗ್ರತೆ ಬೇಕು. ಶುಭಸಂಖ್ಯೆ: 1

ಮೀನ:  ಸ್ವಜನರಿಂದ ತೊಂದರೆ. ವಿದ್ಯಾರ್ಥಿಗಳಲ್ಲಿ ಆಯ್ಕೆಯ ಗೊಂದಲ. ಷೇರು ವಿಚಾರಗಳಲ್ಲಿ ಆಸಕ್ತಿ. ರಕ್ತ ಸಂಬಂಧಿ ಕಾಯಿಲೆ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net