ಈ ರಾಶಿಯವರಿಗಿಂದು ಮಾನಸಿಕ ನೆಮ್ಮದಿ ಭಂಗವಾಗಬಹುದು: ನಿತ್ಯಭವಿಷ್ಯ

Nitya Bhavisya Vijayavani
Published on

ಮೇಷ:  ದೂರ ಪ್ರಯಾಣ ಮಾಡುವ ಸಂದರ್ಭ. ತಾಯಿ ಯಿಂದ ಧನಾಗಮನ. ದಾನಧರ್ಮದ ಮನಸ್ಸು ಪ್ರಭಾವಿ ವ್ಯಕ್ತಿಗಳ ಸಂಪರ್ಕ. ಶುಭಸಂಖ್ಯೆ: 5

ವೃಷಭ:  ಆಧ್ಯಾತ್ಮಿಕ ಕ್ಷೇತ್ರದಲ್ಲಿ ಇದ್ದವರಿಗೆ ಅನುಕೂಲ. ಮನೆಯ ವಾತಾವರಣದಲ್ಲಿ ಕಿರಿಕಿರಿ. ಮಾನಸಿಕ ನೆಮ್ಮದಿ ಭಂಗವಾಗಬಹುದು. ಶುಭಸಂಖ್ಯೆ: 4

ಮಿಥುನ: ಪಾಲುದಾರಿಕೆಯಲ್ಲಿ ಲಾಭ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿಯಾಗಬಹುದು. ಬಂಧು ಮಿತ್ರರ ಆಗಮನ. ಕುಟುಂಬದಲ್ಲಿ ಆತಂಕ. ಶುಭಸಂಖ್ಯೆ: 1

ಕಟಕ: ಕೆಲಸ ಕಾರ್ಯಗಳಲ್ಲಿ ಜಯ ದೊರೆಯುವುದು. ಮಕ್ಕಳಿಂದ ಕುಟುಂಬದಲ್ಲಿ ಕಿರಿ-ಕಿರಿಯಾಗುವುದು. ಆರ್ಥಿಕ ನೆರವು ಸಿಗುವುದು. ಶುಭಸಂಖ್ಯೆ: 1

ಸಿಂಹ:ಅತಿಯಾದ ಒಳ್ಳೆಯತನದಿಂದ ಸಂಕಷ್ಟ. ಚಿಂತೆ. ಮಕ್ಕಳು ಉದ್ಯೋಗ ಕಳೆದುಕೊಳ್ಳುವ ಸಂದರ್ಭ. ಕುಟುಂಬದಲ್ಲಿ ಆತಂಕ. ಶುಭಸಂಖ್ಯೆ: 1

ಕನ್ಯಾ: ಮಿತ್ರರಿಂದ ನಷ್ಟ. ಪಾಲುದಾರಿಕೆ ವ್ಯವಹಾರದಲ್ಲಿ ಸಂಕಷ್ಟ ಎದುರಿಸಬೇಕಾದೀತು. ದಾಂಪತ್ಯದಲ್ಲಿ ಕಿರಿಕಿರಿ. ನಿದ್ರಾಭಂಗ. ಶುಭಸಂಖ್ಯೆ:9

ತುಲಾ:ಸೇವಾವೃತ್ತಿಯ ಉದ್ಯೋಗ ಲಾಭ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಯಶ. ಆರ್ಥಿಕ ಸಮಸ್ಯೆಗೆ ಮುಕ್ತಿ. ಆರೋಗ್ಯ ವ್ಯತ್ಯಾಸ. ಶುಭಸಂಖ್ಯೆ: 7

ವೃಶ್ಚಿಕ:  ಉಪನ್ಯಾಸಕ ವೃತ್ತಿಯವರಿಗೆ ವರ್ಗಾವಣೆ. ಉದ್ಯೋಗ ನಿಮಿತ್ತ ಪ್ರಯಾಣ. ಗುರು ನಿಂದನೆ, ದೈವನಿಂದನೆ ಬೇಡ. ಅನಾರೋಗ್ಯ. ಶುಭಸಂಖ್ಯೆ: 2

ಧನುಸ್ಸು:  ನೂತನ ಮನೆ ಖರೀದಿಗೆ ನಿರ್ಧಾರ. ಕುಲದೇವರ ದರ್ಶನ. ತಾಯಿ ಆರೋಗ್ಯದಲ್ಲಿ ವ್ಯತ್ಯಾಸ. ವಾಹನ ಚಾಲಕರಿಗೆ ಎಚ್ಚರವಿರಲಿ. ಶುಭಸಂಖ್ಯೆ: 2

ಮಕರ: ಮಕರ: ಜೇನು ಕೃಷಿಕರಿಗೆ ಅಧಿಕ ಲಾಭ. ಬಂಧುಗಳ ನಡುವೆ ವಿರಸ. ಪಾಲುದಾರಿಕೆಯಲ್ಲಿ ಅನಾನುಕೂಲ. ಪ್ರಯಾಣದಿಂದ ಸಂಕಷ್ಟ. ಶುಭಸಂಖ್ಯೆ: 2

ಕುಂಭ:  ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ. ಶುಭಕಾರ್ಯಗಳಿಗೆ ಕಾಲ ಕೂಡುವುದು. ಆರ್ಥಿಕ ಸಂಕಷ್ಟ. ಅವಿವಾಹಿತರಿಗೆ ವಿವಾಹ ಸಿದ್ದಿ. ಶುಭಸಂಖ್ಯೆ:7

ಮೀನ: ಹೈನುಗಾರಿಕೆಯಲ್ಲಿ ನಷ್ಟ ಸಂಭವ. ದೈಹಿಕ ಮತ್ತು ಮಾನಸಿಕ ತೊಂದರೆ. ಕೆಲಸ ಕಾರ್ಯಗಳಿಗೆ ಅಡೆತಡೆ. ವಾಮಾಚಾರದ ಭ್ರಮೆ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net