ಈ ರಾಶಿಯವರಿಗಿಂದು ಮಕ್ಕಳ ಆರೋಗ್ಯದ ವಿಚಾರದಲ್ಲಿ ವಿಶೇಷ ಕಾಳಜಿ ವಹಿಸಿ: ನಿತ್ಯಭವಿಷ್ಯ

Nitya Bhavisya Vijayavani
Published on

ಮೇಷ: ಹೈನುಗಾರಿಕೆಯಲ್ಲಿ ಲಾಭ. ಪಶು ಆಹಾರ ತಯಾರಿಕರಿಗೆ ಆದಾಯ. ಕೌಟುಂಬಿಕ ಕಲಹ ಅಂತ್ಯ. ಕುಲದೇವರನ್ನು ಪ್ರಾರ್ಥಿಸಿ. ಶುಭಸಂಖ್ಯೆ: 9

ವೃಷಭ: ವಿದೇಶಿ ವ್ಯಾಪಾರಸ್ಥರಿಗೆ ಉತ್ತಮ ಧನಾದಾಯ. ಸ್ವಂತ ಊರಿಗೆ ಪ್ರವಾಸ ಕೈಗೊಳ್ಳುವಿರಿ. ಸಹೋದರಿಯರಿಂದ ಶುಭಸುದ್ದಿ. ಶುಭಸಂಖ್ಯೆ: 1

ಮಿಥುನ: ಸಾರಿಗೆ ಸಂಸ್ಥಾಪಕರಿಗೆ ಲಾಭ. ಸೇವಾ ಸಂಸ್ಥೆಗಳ ಚುನಾವಣೆಯಲ್ಲಿ ಗೆಲುವು. ವ್ಯಾಪಾರಸ್ಥರಿಗೆ ಕಾನೂನಿನ ತೊಂದರೆ ಕಾಡಲಿದೆ. ಶುಭಸಂಖ್ಯೆ: 3

ಕಟಕ: ಹೈನುಗಾರಿಕೆಯಲ್ಲಿ ಸರಾಸರಿ ಲಾಭ. ನಾಟ್ಯ ಪ್ರವೀಣರಿಗೆ ಉತ್ತಮ ಅವಕಾಶ ಲಭ್ಯ. ಉದ್ಯೋಗದ ನಿಮಿತ್ತ ಓಡಾಟ ಹೆಚ್ಚುವುದು. ಶುಭಸಂಖ್ಯೆ: 6

ಸಿಂಹ: ಸರ್ಕಾರಿ ನೌಕರರಿಗೆ ಬಡ್ತಿ ದೊರೆಯುವ ಸಾಧ್ಯತೆ. ವಾಣಿಜ್ಯ ಸಂಸ್ಥೆಯಲ್ಲಿರುವವರಿಗೆ ಕಿರಿಕಿರಿ. ಹೋಟೆಲ್ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 4

ಕನ್ಯಾ: ಆರ್ಥಿಕ ಹಿಂಜರಿತದ ಭಯ ತಾತ್ಕಾಲಿಕ, ಚಿಂತೆ ಬೇಡ. ಹಿತ ಶತ್ರುಗಳಿಂದ ಮೋಸವಾದೀತು. ದೇವತಾ ದರ್ಶನದಿಂದ ನೆಮ್ಮದಿ. ಶುಭಸಂಖ್ಯೆ: 3

ತುಲಾ: ಮಕ್ಕಳ ಆರೋಗ್ಯದ ವಿಚಾರದಲ್ಲಿ ವಿಶೇಷ ಕಾಳಜಿ ವಹಿಸಿ. ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ವಾದ ವಿವಾದಗಳಲ್ಲಿ ಜಯವಿದೆ. ಶುಭಸಂಖ್ಯೆ: 7

ವೃಶ್ಚಿಕ: ಆಕಸ್ಮಿಕ ನಷ್ಟ. ಮಕ್ಕಳ ಶಿಕ್ಷಣದಲ್ಲಿ ಅಭಿವೃದ್ಧಿ. ಮನೋವೈದ್ಯರಿಗೆ ಒತ್ತಡ. ಅಂತರಿಕ್ಷ ವಿಜ್ಞಾನ ಸಂಸ್ಥೆಯ ಉದ್ಯೋಗಿಗಳಿಗೆ ಬಡ್ತಿ. ಶುಭಸಂಖ್ಯೆ:3

ಧನಸ್ಸು: ಭೂಮಿಯ ವ್ಯವಹಾರದಲ್ಲಿ ಆದಾಯ. ಪುಸ್ತಕ ವ್ಯಾಪಾರಿಗಳಿಗೆ ಶುಭದಾಯಕ ದಿನ. ಸ್ಟಾಕ್-ಷೇರು ವ್ಯವಹಾರದಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 7

ಮಕರ: ಗಂಡನ ಆರೋಗ್ಯದಲ್ಲಿ ಏರುಪೇರು ಆಗಬಹುದು. ವೈದ್ಯರ ಸಲಹೆ ಅಗತ್ಯ. ದಾಂಪತ್ಯದಲ್ಲಿ ಕಲಹ ಬೇಡ. ಸ್ನೇಹಿತರಿಂದ ಮೋಸ. ಶುಭಸಂಖ್ಯೆ: 7

ಕುಂಭ: ವೃತ್ತಿಯಲ್ಲಿ ಕಿರಿಕಿರಿ ಸಾಧ್ಯತೆ, ತಾಳ್ಮೆ ಇರಲಿ. ಪ್ರಯಾಣದಿಂದ ಕಾರ್ಯಸಿದ್ಧಿಯಾಗಲಿದೆ. ಬಂಧುಗಳಿಂದ ಸಾಲ ಮರುಪಾವತಿ. ಶುಭಸಂಖ್ಯೆ: 7

ಮೀನ: ಸಿಎ ವಿದ್ಯಾಭ್ಯಾಸ ನಿರತರಿಗೆ ಗಣನೀಯ ಪ್ರಗತಿ. ಆರೋಗ್ಯದಲ್ಲಿ ಚೇತರಿಕೆ. ಆಸ್ತಿ ವಿಚಾರದಲ್ಲಿ ಗೊಂದಲ ಉಂಟಾಗಬಹುದು. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net