

ಮೇಷ: ಕಬ್ಬಿಣ ವಸ್ತು ತಯಾರಿಸುವವರಿಗೆ ಶುಭಸೂಚನೆ. ರಾಜಕೀಯದವರಿಗೆ ಉತ್ತಮ ದಿನ. ದಾಂಪತ್ಯದಲ್ಲಿ ಸಂತಸದ ವಾತಾವರಣ. ಶುಭಸಂಖ್ಯೆ: 9
ವೃಷಭ: ಉದರ ಸಂಬಂಧಿ ನೋವು ಕಾಡಬಹುದು. ವಿದೇಶಿ ವ್ಯಾಪಾರಸ್ಥರಿಗೆ ಶಕ್ಷಿುಭದಾಯಕ ದಿನ. ಕೋರ್ಟ್ ವಿಷಯಗಳಲ್ಲಿ ಗೆಲುವು. ಶುಭಸಂಖ್ಯೆ:1
ಮಿಥುನ: ಷೇರು ವ್ಯವಹಾರದಲ್ಲಿ ತಾಟಸ್ಥ್ಯ ಕಾಯ್ದುಕೊಳ್ಳಿ. ಜಯವಿದೆ. ಬುದ್ಧಿವಂತಿಕೆಯಿಂದ ವರ್ತಿಸುವಿರಿ. ಅತಿ ಆತ್ಮವಿಶ್ವಾಸ ಬೇಡ. ಶುಭಸಂಖ್ಯೆ:1
ಕಟಕ: ಕಾನೂನು ವಿದ್ಯಾರ್ಥಿಗಳಿಗೆ ಸುದಿನ. ಅಧಿಕ ಓಡಾಟದಿಂದ ದೇಹಕ್ಕೆ ವಿಶ್ರಾಂತಿ ಕೊಡಿ. ಧೈರ್ಯದಿಂದ ವರ್ತಿಸಿ,ಯಶಸ್ಸಿದೆ. ಶುಭಸಂಖ್ಯೆ: 8
ಸಿಂಹ: ಸಣ್ಣ ವ್ಯಾಪಾರದಲ್ಲಿ ಆದಾಯ ಹೆಚ್ಚು ಬರುವುದು. ವಿದ್ಯಾರ್ಥಿಗಳಿಗೆ ಶ್ರಮದ ಅಗತ್ಯವಿದೆ. ಆಸ್ತಿ ಖರೀದಿಗೆ ಈ ದಿನ ಸಕಾಲವಲ್ಲ. ಶುಭಸಂಖ್ಯೆ:5
ಕನ್ಯಾ: ಕುಟುಂಬದ ಸಂತೋಷಕ್ಕಾಗಿ ಖರ್ಚು. ಸಾಧುಸಂತರ ದರ್ಶನದಿಂದ ನೆಮ್ಮದಿ. ವಿದ್ಯಾರ್ಥಿಗಳಿಗೆ ಮತ್ತು ಸಾಹಿತಿಗಳಿಗೆ ಗೌರವ. ಶುಭಸಂಖ್ಯೆ:9
ತುಲಾ: ವಕೀಲರಿಗೆ ಉತ್ತಮ ದಿನ. ಸಂಗೀತ ಅಭ್ಯಾಸದಲ್ಲಿ ಒಲವು. ಮನಸ್ಸು ಸ್ಥಿರವಾಗಿರುವಂತೆ ನೋಡಿಕೊಳ್ಳಿ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 3
ವೃಶ್ಚಿಕ: ಆರೋಗ್ಯದ ವಿಚಾರದಲ್ಲಿ ಕಾಳಜಿವಹಿಸಿ. ಕಾರ್ವಿುಕ ವರ್ಗದವರಿಗೆ ಅಧಿಕ ಶ್ರಮವಾದೀತು. ಅಧಿಕಾರಿಗಳೊಂದಿಗೆ ವಾಗ್ವಾದ. ಶುಭಸಂಖ್ಯೆ:4
ಧನಸ್ಸು: ಹಿರಿಯ ಅಧಿಕಾರಿಗಳಿಂದ ಕಿರುಕುಳ. ಮಹಿಳಾ ರಾಜಕಾರಣಿಗಳಿಗೆ ಒಳ್ಳೆಯ ದಿನ. ಮನೆಯಲ್ಲಿ ಮಂಗಳ ಕಾರ್ಯದ ಸಡಗರ. ಶುಭಸಂಖ್ಯೆ:7
ಮಕರ: ಮೂಳೆಗಳ ಸಮಸ್ಯೆ ತಲೆದೋರಬಹುದು. ಭೂಮಿ ಸಂಬಂಧೀ ವ್ಯಾಪಾರದಲ್ಲಿ ನಷ್ಟ ಸಾಧ್ಯತೆ. ಗುತ್ತಿಗೆ ಕೆಲಸಗಾರರಿಗೆ ಆದಾಯ. ಶುಭಸಂಖ್ಯೆ: 9
ಕುಂಭ: ಯಂತ್ರೋಪಕರಣ ಬಳಕೆಯಲ್ಲಿ ಎಚ್ಚರ. ಗೃಹಬಳಕೆಯ ವಸ್ತು ಮಾರಾಟಸ್ಥರಿಗೆ ಲಾಭ, ಕೆಲಸಗಳ ಬಗ್ಗೆ ವಿಶೇಷ ಗಮನವಿರಲಿ. ಶುಭಸಂಖ್ಯೆ: 1
ಮೀನ: ವಾಣಿಜ್ಯ ವ್ಯವಹಾರದಲ್ಲಿ ಯಶಸ್ಸು. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸರಾಸರಿ ಆದಾಯ. ಕಚೇರಿ ಕೆಲಸಗಳಿಂದ ಒತ್ತಡ. ಶುಭಸಂಖ್ಯೆ: 5