ನಿತ್ಯಭವಿಷ್ಯ| ಈ ರಾಶಿಯವರಿಗೆ ಆಪ್ತರಿಂದಲೇ ತೊಂದರೆ..

Nithya Bhavishya vvani
Published on

ಆಧುನಿಕ ಕಾಲದ ರೀತಿನೀತಿಗಳನ್ನು ಪಾಲಿಸದೆ ಮುಂದೆ ಸಾಗುವಂತಹ ಯೋಚನೆಗಳನ್ನು ಬಿಟ್ಟುಬಿಡಿ. ಕ್ಷೇಮವಿದೆ. ಶುಭಸಂಖ್ಯೆ: 2

ನಿಮ್ಮ ಕೆಲವು ಯೋಜನೆಗಳು ನಿಮ್ಮಿಂದ ಅಪಾರ ಪ್ರಮಾಣದ ಶ್ರಮವನ್ನು ಬೇಡುತ್ತವೆ. ಮುನ್ನುಗ್ಗಿದರಷ್ಟೇ ಲಾಭವಿದೆ. ಶುಭಸಂಖ್ಯೆ: 1

ಹಣವನ್ನು ಪೋಲು ಮಾಡುವಂತಹ ದುಶ್ಚಟಗಳ ಬಗ್ಗೆ ಜಾಗರೂಕರಾಗಿರಿ. ಧನನಾಶ ಸಂಭವಿಸಬಹುದು. ಶುಭಸಂಖ್ಯೆ: 4

ಕೈಗೊಂಡ ಕೆಲಸಗಳು ಆಗಾಗ ನಿಲ್ಲಬಹುದು. ಅವುಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಕುಲದೇವತಾ ಸ್ಮರಣೆ ಮಾಡಿ. ಶುಭಸಂಖ್ಯೆ: 3

ವಿಷಮ ಪರಿಸ್ಥಿತಿಗಳು ಎದುರಾಗಬಹುದು. ನಿಮ್ಮ ಜಾಣ್ಮೆಯಿಂದಲೇ ಅವನ್ನು ನಿಭಾಯಿಸಲು ಸಾಧ್ಯವಿದೆ. ಶುಭಸಂಖ್ಯೆ: 6

ಭೂಸಂಬಂಧಿ ವಿಚಾರದಲ್ಲಿ ನಾನಾ ಥರದ ವಿವಾದಗಳನ್ನು ಎದುರಿಸುತ್ತಿದ್ದೀರಿ. ಸದ್ಯದಲ್ಲೇ ಅವೆಲ್ಲ ಪರಿಹಾರವಾಗಲಿವೆ. ಶುಭಸಂಖ್ಯೆ: 5

ಬೇಡವಾದ ಹಳೆಯ ವಸ್ತುಗಳನ್ನೆಲ್ಲ ಮನೆಯಿಂದ ಹೊರಹಾಕಿ. ಆರೋಗ್ಯದ ಬಗ್ಗೆ ಹೆಚ್ಚಿನದಾದ ಗಮನವಿರಲಿ. ಶುಭಸಂಖ್ಯೆ: 8

ಉದ್ಯೋಗದಲ್ಲಿ ವರ್ಗಾವಣೆಯ ಬದಲಾವಣೆ ಎದುರಾದರೂ ಅಂಜಬೇಡಿ. ನಿಮಗೆ ಒಳಿತೇ ಆಗಲಿದೆ. ಶುಭಸಂಖ್ಯೆ: 7

ನಿಮ್ಮ ಆಪ್ತರೇ ತೊಂದರೆ ತಂದಿಡಬಹುದು. ಅದು ವಿವಾದವಾಗಿ ಉಲ್ಬಣ ಆಗದಂತೆ ಎದುರಿಸುವ ತಾಳ್ಮೆ ಇರಲಿ. ಶುಭಸಂಖ್ಯೆ: 9

ಪದೇಪದೆ ಆಡಿದ್ದನ್ನೇ ಆಡುವುದನ್ನು ಬಿಡಿ. ಜನರೆಲ್ಲ ನಿಮ್ಮನ್ನು ಕಂಡರೆ ದೂರವೇ ಉಳಿಯುವ ಅಪಾಯವಿದೆ. ಶುಭಸಂಖ್ಯೆ: 1

ಹೊಸ ವಸ್ತುಗಳ ಖರೀದಿಯ ಯೋಚನೆ ಇದ್ದರೆ ಸ್ವಲ್ಪ ಕಾಲ ಮುಂದೂಡುವುದು ಒಳ್ಳೆಯ ನಿರ್ಧಾರವಾಗಲಿದೆ. ಶುಭಸಂಖ್ಯೆ: 4

ಸುಜ್ಞಾನವನ್ನು ನೀಡುವ ಶಾರದಾಂಬೆಯ ಕರುಣೆಯಿಂದ ವೃತ್ತಿಯಲ್ಲಿ ಉತ್ತಮವಾದ ಬೆಳವಣಿಗೆ ಸಂಭವಿಸಲಿದೆ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net