ನಿತ್ಯ ಭವಿಷ್ಯ| ಈ ರಾಶಿಯವರಿಗೆ ದಿನಾಂತ್ಯದಲ್ಲಿ ಧನಾಗಮ

Nitya-Bhavishya-vvani-1-2-1-1
Published on

ಮೇಷ: ಬಾಳಸಂಗಾತಿಯ ಸಲಹೆ ತೆಗೆದುಕೊಳ್ಳಿ. ಅನಿರೀಕ್ಷಿತ ಅತಿಥಿಗಳ ಆಗಮನವಾಗುತ್ತದೆ. ಸಂತೋಷ ಕೂಟ. ಶುಭಸಂಖ್ಯೆ: 5

ವೃಷಭ: ಹಿತಶತ್ರುಗಳ ಉಪಟಳ, ಸಹೋದರರಿಂದ ಸಹಾಯ. ಸಂಜೆಯ ಹೊತ್ತಿಗೆ ಶುಭಸುದ್ದಿ ಬಂದು ಸಮಾಧಾನ. ಶುಭಸಂಖ್ಯೆ: 3

ಮಿಥುನ: ಮಕ್ಕಳ ವಿಷಯದಲ್ಲಿ ಹೆಮ್ಮೆ. ಸಂತಾನ ನಿರೀಕ್ಷೆಯಲ್ಲಿ ಇರುವವರಿಗೆ ಸಂತಸ. ಆರೋಗ್ಯದ ಬಗ್ಗೆ ನಿಗಾ ಇರಲಿ. ಶುಭಸಂಖ್ಯೆ: 2

ಕಟಕ: ಮನೆಗೆ ಸಂಬಂಧಿಸಿದ ಮಹತ್ವದ ನಿರ್ಧಾರಕ್ಕೆ ಚಾಲನೆ ಸಿಗಲಿದೆ. ಮೇಲಧಿಕಾರಿಗಳಿಂದ ವಿಶೇಷ ಜವಾಬ್ದಾರಿ. ಶುಭಸಂಖ್ಯೆ: 7

ಸಿಂಹ: ಅಕ್ಕ ತಂಗಿಯರ ಮಧುರ ಬಾಂಧವ್ಯವನ್ನು ನಿಮ್ಮ ಹಠದಿಂದ ಹಾಳು ಮಾಡಿಕೊಳ್ಳಬೇಡಿ. ಅತಿಥಿಗಳನ್ನು ಸತ್ಕರಿಸಿ. ಶುಭಸಂಖ್ಯೆ: 9

ಕನ್ಯಾ: ಕುಟುಂಬದಲ್ಲಿ ಸಂಭ್ರಮ ಸಡಗರ. ಹಣದ ಸಮಸ್ಯೆ ಉಂಟಾಗಿ ಕಳವಳವಾಗಬಹುದು. ದಿನಾಂತ್ಯದಲ್ಲಿ ಧನಾಗಮ. ಶುಭಸಂಖ್ಯೆ: 6

ತುಲಾ: ನಿಮ್ಮ ಸಮಸ್ಯೆಗೆ ಸ್ನೇಹಿತರಿಂದ ಪರಿಹಾರ ದೊರೆಯುತ್ತದೆ. ಕಲಾವಿದರಿಗೆ ವಿಶೇಷ ದಿನ. ಶುಭಸುದ್ದಿಯಿಂದ ಸಂತಸ. ಶುಭಸಂಖ್ಯೆ: 3

ವೃಶ್ಚಿಕ: ನ್ಯಾಯಾಲಯದ ಆದೇಶದ ನಿರೀಕ್ಷೆ, ನಿರಾಸೆ. ಅನಾರೋಗ್ಯದ ಸಮಸ್ಯೆ ಉಲ್ಬಣ. ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ಮಾಡಿ. ಶುಭಸಂಖ್ಯೆ: 8

ಧನುಸ್ಸು: ಮಾತಿನ ಬಗ್ಗೆ ನಿಗಾ ಇರಲಿ. ಹಿತಶತ್ರುಗಳು ನಿಮ್ಮ ಕುರಿತು ಅಪಪ್ರಚಾರ ಮಾಡಬಹುದು. ದಿನಾಂತ್ಯದಲ್ಲಿ ಶುಭ ವಾರ್ತೆ. ಶುಭಸಂಖ್ಯೆ: 5

ಮಕರ: ಹಣದ ಅಪವ್ಯಯ. ನಿರೀಕ್ಷೆಯಲ್ಲಿ ಇದ್ದ ಹಣ ಬರದೇ ಬೇಸರವಾಗಬಹುದು. ಅಭ್ಯಾಗತರ ಆಗಮನದಿಂದ ಸಂತಸ. ಶುಭಸಂಖ್ಯೆ: 2

ಕುಂಭ: ಕೋಪವನ್ನು ನಿಯಂತ್ರಿಸಿಕೊಳ್ಳಲೇಬೇಕು. ವ್ಯೆದ್ಯರ ಸಲಹೆಯನ್ನು ಪಾಲಿಸದಿದ್ದರೆ ಅಪಾಯ. ಮಕ್ಕಳಿಂದ ಖರ್ಚು. ಶುಭಸಂಖ್ಯೆ: 9

ಮೀನ: ಅವಸರದಲ್ಲಿ ನಿರ್ಧಾರ ಕೈಗೊಳ್ಳುವ ಮೊದಲು ಸಾಧ್ಯಾಸಾಧ್ಯತೆ ಕುರಿತು ನೂರು ಸಲ ಯೋಚಿಸಿ. ಅನಿರೀಕ್ಷಿತ ಧನಾಗಮ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net