

ಮೇಷ: ಉನ್ನತ ವ್ಯಾಸಂಗದ ಅವಕಾಶಗಳನ್ನು ಪಡೆಯಲಿದ್ದೀರಿ. ಸಂತಸದ ವಿಚಾರವು ಸ್ಪಷ್ಟವಾಗಿ ಗೋಚರವಾಗಲಿದೆ. ಶುಭಸಂಖ್ಯೆ: 1
ವೃಷಭ: ಸುಮ್ಮನೆ ಸಮಸ್ಯೆಗಳನ್ನು ಹೊತ್ತುಕೊಂಡು ಬಳಲದಿರಿ. ಈ ಬಗ್ಗೆ ಸಂಗಾತಿಯ ಜತೆಗೂ ವಿವರವಾಗಿ ರ್ಚಚಿಸಿ. ಶುಭಸಂಖ್ಯೆ: 5
ಮಿಥುನ: ಹಳೆಯ ಬಾಸ್ ಜತೆಗಿನ ಭಿನ್ನಾಭಿಪ್ರಾಯ ಮರೆತು ಮಿತ್ರರಾಗಿ. ಒಳ್ಳೆಯ ಬೆಳವಣಿಗೆಗೆ ಅವಕಾಶ ದೊರೆಯಲಿದೆ. ಶುಭಸಂಖ್ಯೆ: 2
ಕಟಕ: ಆಂಜನೇಯನ ಸ್ತುತಿ ಮಾಡಿ. ಅದರಿಂದ ನಿಮ್ಮ ಕಾರ್ಯದಲ್ಲಿ ತೊಡಕು ತರುವ ಜನರನ್ನು ದೂರವಿಡಬಹುದು. ಶುಭಸಂಖ್ಯೆ: 8
ಸಿಂಹ: ಗೆಲುವು ಸಾಧಿಸುತ್ತಲೇ ಇರುವ ಇಚ್ಛೆಯು ಸಹಜವಾದುದು. ಆದರೆ ಇದರಿಂದ ಖಿನ್ನತೆಗೆ ದಾರಿ ಮಾಡಿಕೊಳ್ಳದಿರಿ. ಶುಭಸಂಖ್ಯೆ: 3
ಕನ್ಯಾ: ಹಿರಿಯ ಜನರನ್ನು ಆದರಿಸಿ. ವಿಶಿಷ್ಟವಾದ ವಿಜಯ ಹಾಗೂ ಸಮಾಧಾನಗಳಿಗೆ ಸರಳ ದಾರಿ ಸದಾ ಇದ್ದೇ ಇದೆ. ಶುಭಸಂಖ್ಯೆ: 7
ತುಲಾ: ಮನಃಸ್ಥಿತಿಯಲ್ಲಿ ಸೂಕ್ಷ್ಮವಾದ ಬಳಲಿಕೆ ಉಂಟಾಗುವ ಸಾಧ್ಯತೆಯಿದೆ. ಜೀವನದ ವಾಸ್ತವವನ್ನು ಅರ್ಥೈಸಿಕೊಳ್ಳಿ. ಶುಭಸಂಖ್ಯೆ: 4
ವೃಶ್ಚಿಕ: ಸದ್ಯ ನಿಮ್ಮೆದುರಿಗೆ ವರ್ತಮಾನ ಸಂದರ್ಭದ ವಿಷಮತೆಯಿದೆ. ಶ್ರೀ ರಾಮರಕ್ಷಾ ಸ್ತೋತ್ರ ಓದಿ. ತೊಂದರೆಗಳಿಗೆ ವಿರಾಮ. ಶುಭಸಂಖ್ಯೆ: 6
ಧನುಸ್ಸು: ಕಚೇರಿಯಲ್ಲಿ ವಿರೋಧಿಗಳ ಜತೆಗೆ ಸಿಡುಕುತನ ತೋರಿಸಲೇಬೇಡಿ. ಇದರಿಂದ ಹೆಚ್ಚಿನ ತೊಂದರೆಯೇ ಆದೀತು. ಶುಭಸಂಖ್ಯೆ: 9
ಮಕರ: ಅನವಶ್ಯಕವಾದ ಚರ್ಚೆಗಳನ್ನು ಕೈಗೊಳ್ಳಬೇಡಿ. ಇರುವಂತಹ ಸಮಸ್ಯೆಗಳು ಕೂಡ ಇದರಿಂದ ಕಗ್ಗಂಟಾಗಬಹುದು. ಎಚ್ಚರ. ಶುಭಸಂಖ್ಯೆ: 1
ಕುಂಭ: ಮಕ್ಕಳೆದುರು ಖಂಡಿತ ದಂಪತಿ ಜಗಳ ಬೇಡ. ಅವರ ಮನಸ್ಸಿನಲ್ಲಿ ಅಭದ್ರತೆಯ ಭಾವ ಮೂಡುವುದನ್ನು ತಪ್ಪಿಸಿ. ಶುಭಸಂಖ್ಯೆ: 2
ಮೀನ: ಚುರುಕುತನದ ಮಾತುಗಳು ಗೆಳೆಯರ ಎದುರು ನಿಮ್ಮನ್ನು ಮುಖ್ಯವಾಗಿಸಲು ಹೊಸ ದಾರಿ ಮಾಡಿಕೊಡುತ್ತವೆ. ಶುಭಸಂಖ್ಯೆ: 5