ನಿತ್ಯ ಭವಿಷ್ಯ: ಈ ರಾಶಿಯವರು ಕಂಡ ಕನಸುಗಳೆಲ್ಲವೂ ಇಂದು ನನಸಾಗಲಿವೆ

Nitya-Bhavishya-vvani-1-2
Published on

ಮೇಷ: ಯಾವುದೇ ರೀತಿಯ ಹೊಸ ಕಾರ್ಯವನ್ನೂ ಆರಂಭಿಸಬಹುದು. ಆದರೆ ಆರಂಭಕ್ಕಿಂತ ಮೊದಲು ತುಸು ಆಲೋಚಿಸಿ. ಶುಭಸಂಖ್ಯೆ: 1

ವೃಷಭ: ಜೀವನದಲ್ಲಿ ಯಶಸ್ಸಿನ ಹುಡುಕಾಟ ಅನಿವಾರ್ಯ. ಅದು ತಡವಾದೀತೆಂದು ಧೈರ್ಯವನ್ನು ಕಳೆದುಕೊಳ್ಳದಿರಿ. ಶುಭಸಂಖ್ಯೆ: 4

ಮಿಥುನ: ಮನೆಯಲ್ಲಿ ಮಕ್ಕಳ ಜತೆಗೆ ಸಂತೋಷದಿಂದ ಕಾಲ ಕಳೆಯಿರಿ. ಸಂದರ್ಭ ನೋಡಿಕೊಂಡು ಬುದ್ಧಿಮಾತುಗಳನ್ನು ಹೇಳಿ. ಶುಭಸಂಖ್ಯೆ: 7

ಕಟಕ: ಗೆಲುವಿನ ದಾರಿ ಎಂಬುದು ಯಾವಾಗಲೂ ಸರಳವಾಗಿರುವುದಿಲ್ಲ. ಆದರೂ ನಿಮ್ಮ ಶ್ರಮವು ಫಲವನ್ನು ಕೊಟ್ಟೇ ಕೊಡುತ್ತದೆ. ಶುಭಸಂಖ್ಯೆ: 9

ಸಿಂಹ: ಇಲೆಕ್ಟ್ರಾನಿಕ್ ಉಪಕರಣ ಮಾರಾಟಗಾರರಿಗೆ, ಹೈನೋದ್ಯಮಿಗಳಿಗೆ, ತರಕಾರಿ, ಹಣ್ಣು ವ್ಯಾಪಾರಿಗಳಿಗೆ ಯಶಸ್ಸಿದೆ. ಶುಭಸಂಖ್ಯೆ: 2

ಕನ್ಯಾ:  ಸರ್ಪದೋಷದ ಭಯ ಆವರಿಸಿಕೊಂಡೀತು. ಸುಬ್ರಹ್ಮಣ್ಯನನ್ನು ಭಕ್ತಿಯಿಂದ ಸ್ತುತಿಸಿದರೆ ಭಯ ನಿವಾರಣೆಯಾಗಲಿದೆ. ಶುಭಸಂಖ್ಯೆ: 5

ತುಲಾ: ಕುಲದೇವರ ಕೃಪಾಶೀರ್ವಾದ ಫಲದಿಂದ ನೀವು ಕಂಡ ಕನಸುಗಳೆಲ್ಲ ಬೇಗನೆ ನನಸಿನ ದಾರಿಯ ಕಡೆಗೆ ಸಾಗಲಿವೆ. ಶುಭಸಂಖ್ಯೆ: 8

ವೃಶ್ಚಿಕ: ಕಚೇರಿಯಲ್ಲಿ ಅನಿರೀಕ್ಷಿತ ಬದಲಾವಣೆ ಇದೆ. ಆದರೆ ಜಾಣ್ಮೆಯುಳ್ಳವರಾದ ನೀವು ಗಾಬರಿಗೊಳ್ಳುವ ಅಗತ್ಯವಿಲ್ಲ. ಶುಭಸಂಖ್ಯೆ: 3

ಧನಸ್ಸು: ಯಾರನ್ನೂ ಗದರಿಸಲು ಹೋಗದಿರಿ. ನಿಮ್ಮ ಮಾತಿಗೆ ಒರಟಾದ ಪ್ರತಿಕ್ರಿಯೆಯೇ ಎದುರಾಗುವ ಸಾಧ್ಯತೆ ಇದೆ. ಶುಭಸಂಖ್ಯೆ: 6

ಮಕರ: ದೈವಿಕ ಶಕ್ತಿಯೊಂದು ನಿಮ್ಮನ್ನು ದುರ್ಭರ ಸಂದರ್ಭದಿಂದ ಕಾಪಾಡಲಿದೆ. ನಿಮ್ಮಲ್ಲಿ ಆತ್ಮವಿಶ್ವಾಸ ಇದ್ದೇ ಇರಲಿ. ಶುಭಸಂಖ್ಯೆ: 1

ಕುಂಭ: ಅನಿರೀಕ್ಷಿತ ವ್ಯಕ್ತಿಗಳಿಂದ ದೊಡ್ಡ ಮಟ್ಟದ ಸಹಾಯವೇ ಒದಗಿಬರಲಿದೆ. ಮನಸ್ಸಿನ ಸಂಕಲ್ಪ ಸಾಕಾರಗೊಳ್ಳಲಿದೆ. ಶುಭಸಂಖ್ಯೆ: 4

ಮೀನ: ಯಾರದೋ ಮಾತಿನಿಂದಾಗಿ ನಿಮ್ಮ ಯೋಜನೆಗಳನ್ನು ಬಿಡದಿರಿ. ಯೋಗ್ಯ ಸಲಹೆ ಸ್ವೀಕರಿಸಬಹುದು. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net