

ಮೇಷ: ಉದ್ಯೋಗದಲ್ಲಿ ಬಡ್ತಿ ದೊರೆಯಬಹುದು. ಆದರೆ ಆರೋಗ್ಯದಲ್ಲಿ ಏರುಪೇರಾದೀತು. ಒಟ್ಟಾರೆ ಸಂಮಿಶ್ರ ಫಲವಿದೆ. ಶುಭಸಂಖ್ಯೆ: 9
ವೃಷಭ: ದಿನಸಿ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿರುವವರಿಗೆ ಲಾಭವಿದೆ. ಅಪವಾದಗಳು ಬಂದರೂ ಸಾಲ ತೀರಿಸುವಿರಿ. ಶುಭಸಂಖ್ಯೆ: 4
ಮಿಥುನ: ತಂಪು ಪಾನೀಯಗಳಿಂದ ಅನಾರೋಗ್ಯ ಉಂಟಾಗಬಹುದು. ಶತ್ರುಗಳ ಬಾಧೆಯನ್ನು ಧೈರ್ಯದಿಂದ ಎದುರಿಸಿ. ಶುಭಸಂಖ್ಯೆ: 5
ಕಟಕ: ಅಕ್ಕಪಕ್ಕದ ಮನೆಯವರ ಜತೆ ಭಿನ್ನಾಭಿಪ್ರಾಯ ಬರಬಹುದು. ಅತಿಯಾಗಿ ನಿದ್ರೆ ಮಾಡದೆ ಇರುವುದೇ ಒಳ್ಳೆಯದು. ಶುಭಸಂಖ್ಯೆ: 1
ಸಿಂಹ: ನಿಮ್ಮ ಪರಿಶ್ರಮಕ್ಕೆ ತಕ್ಕಂತೆ ಫಲವಿದೆ. ಉತ್ಸಾಹಿ ಮನೋಭಾವದಿಂದ ಕೆಲಸ ಕಾರ್ಯಗಳಲ್ಲಿ ತೊಡಗಿದರೆ ಪ್ರಗತಿಯಿದೆ. ಶುಭಸಂಖ್ಯೆ: 6
ಕನ್ಯಾ: ಸ್ತ್ರೀಯರಿಗೆ ಉತ್ತಮವಾದ ಅವಕಾಶಗಳು ಎದುರಾಗಲಿವೆ. ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಖರ್ಚು ನಿಯಂತ್ರಿಸಿ. ಶುಭಸಂಖ್ಯೆ: 2
ತುಲಾ: ವಿವಾದಗಳಲ್ಲಿ ಸೋಲು ಎದುರಾದರೂ ವ್ಯವಹಾರದಲ್ಲಿ ಲಾಭವಿದೆ. ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಶುಭಸಂಖ್ಯೆ: 8
ವೃಶ್ಚಿಕ: ವಿದ್ಯಾರ್ಥಿಗಳಲ್ಲಿ ಕೊಂಚ ಗೊಂದಲ ಉಂಟಾಗಬಹುದು. ಕೆಲಸಕಾರ್ಯಗಳಲ್ಲಿ ಹೆಚ್ಚಿನ ಒತ್ತಡ ಎನಿಸಬಹುದು. ಶುಭಸಂಖ್ಯೆ: 3
ಧನಸ್ಸು: ವಾಹನಚಾಲನೆಯಲ್ಲಿ ಎಚ್ಚರವಿರಲಿ. ಸಹೋದರರಿಂದ ನೆರವು ಸಿಗಲಿದೆ. ಅತಿ ಆತ್ಮವಿಶ್ವಾಸ ಒಳ್ಳೆಯದಲ್ಲ. ಶುಭಸಂಖ್ಯೆ: 7
ಮಕರ: ವ್ಯಾಪಾರದಲ್ಲಿ ಮೋಸಕ್ಕೆ ಒಳಗಾಗುವಿರಿ. ವಿಧೇಯತೆಯಿಂದ ಯಶಸ್ಸು ಪ್ರಾಪ್ತಿಯಾಗಿ ಮಾನಸಿಕ ನೆಮ್ಮದಿಯಿದೆ. ಶುಭಸಂಖ್ಯೆ: 4
ಕುಂಭ: ಕಾರ್ಯಕ್ಷೇತ್ರದಲ್ಲಿ ಪ್ರಗತಿಯಿದೆ. ಮನೆಯವರ ಜತೆಗಿನ ಮಾತುಕತೆಯಿಂದ ಮಾನಸಿಕ ಒತ್ತಡ ದೂರವಾಗಲಿದೆ. ಶುಭಸಂಖ್ಯೆ: 9
ಮೀನ: ದೂರಾಲೋಚನೆ ಮಾಡಿ ಎಚ್ಚರಿಕೆಯಿಂದ ನಿರ್ಧಾರಗಳನ್ನು ಕೈಗೊಳ್ಳಿ. ಭೂಸಂಬಂಧಿ ವ್ಯವಹಾರದಲ್ಲಿ ಲಾಭವಿದೆ. ಶುಭಸಂಖ್ಯೆ: 5