ನಿತ್ಯ ಭವಿಷ್ಯ: ಈ ರಾಶಿಯವರ ಕಾರ್ಯಕೌಶಲವನ್ನು ಮೇಲಧಿಕಾರಿಗಳು ಗುರುತಿಸುವರು

Nitya-Bhavishya-vvani-1-2-1
Published on

ಮೇಷ: ಯಾರ ಮೇಲೂ ಸಿಡುಕಾಡಬೇಡಿ. ಬುದ್ಧಿವಂತರೊಡನೆ ವಾದ ಮಾಡಿದರೂ ನಿಮಗೆ ಲಾಭವಾಗಲಿದೆ. ಶುಭಸಂಖ್ಯೆ: 8

ವೃಷಭ: ಅನಗತ್ಯವಾದ ಖರ್ಚುವೆಚ್ಚಗಳನ್ನು ನಿಲ್ಲಿಸಿಬಿಡಿ. ಇಲ್ಲದಿದ್ದರೆ ಈ ಸಂದರ್ಭದಲ್ಲಿ ಹಣದ ಕೊರತೆ ಆದೀತು. ಶುಭಸಂಖ್ಯೆ: 9

ಮಿಥುನ: ಮೇಲಧಿಕಾರಿಗಳು ನಿಮ್ಮ ಕಾರ್ಯಕೌಶಲವನ್ನು ಗುರುತಿಸುವರು. ಇದರಿಂದ ವೃತ್ತಿಪರವಾದ ಕಾರ್ಯಸಿದ್ಧಿಗೆ ತಕ್ಕ ದಾರಿ ಲಭ್ಯ. ಶುಭಸಂಖ್ಯೆ: 6

ಕಟಕ: ನಿಮ್ಮ ಸ್ವಭಾವವೇ ನಿಮ್ಮ ಸಮಸ್ಯೆ ಎನಿಸಿದೆ. ಆದಷ್ಟರ ಮಟ್ಟಿಗೆ ಮನಸ್ಸಿನ ಸಮಾಧಾನವನ್ನು ಕಾಪಾಡಿಕೊಂಡರೆ ಉತ್ತಮ. ಶುಭಸಂಖ್ಯೆ: 7

ಸಿಂಹ: ರಸಾಯನಶಾಸ್ತ್ರಜ್ಞರು, ಸಂಶೋಧಕರು, ವೈದ್ಯರಿಗೆ ಕೆಲವು ಕಾಯ್ದೆ, ಕಾನೂನುಗಳ ತೊಂದರೆಗಳಾಗಬಹುದು. ಶುಭಸಂಖ್ಯೆ: 4

ಕನ್ಯಾ: ಹಳೆಯ ತಪ್ಪುಗಳನ್ನೇ ಮಾಡುವ ನಿಮ್ಮ ದೌರ್ಬಲ್ಯ ನಷ್ಟವನ್ನು ಉಂಟುಮಾಡಬಹುದು. ಈ ಬಗ್ಗೆ ತುಸು ಗಮನವಿರಲಿ. ಶುಭಸಂಖ್ಯೆ: 5

ತುಲಾ: ದಿಢೀರ್ ಶ್ರೀಮಂತರಾಗಬೇಕು ಎಂಬಂಥ ಪ್ರಯತ್ನಗಳಿಂದ ನಿರಾಶೆಯಾಗಲಿದೆ. ಈ ಬಗ್ಗೆ ವಿಶೇಷವಾದ ಎಚ್ಚರ ವಹಿಸಿ. ಶುಭಸಂಖ್ಯೆ: 2

ವೃಶ್ಚಿಕ: ವಿರೋಧಿಗಳನ್ನು ಸರಿಯಾಗಿ ಗುರುತಿಸಿದರೆ ಮುಂದೆ ಎದುರಾಗಲಿರá-ವ ತೊಡಕುಗಳನ್ನು ಈಗಲೇ ತಡೆಯಬಹುದು. ಶುಭಸಂಖ್ಯೆ: 1

ಧನಸ್ಸು: ಸಂಗಾತಿಯ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ. ಇದರಿಂದ ಬಾಂಧವ್ಯದಲ್ಲಿನ ಪ್ರೀತಿ ಇನ್ನಷ್ಟು ವೃದ್ಧಿಸಲಿದೆ. ಶುಭಸಂಖ್ಯೆ: 3

ಮಕರ: ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಉಂಟಾಗಬಹುದು. ಯಶಸ್ಸು ಸಾಕಾರವಾಗಲು ಸತತ ಅಭ್ಯಾಸ ಅವಶ್ಯವಿದೆ. ಶುಭಸಂಖ್ಯೆ: 8

ಕುಂಭ: ಹಿರಿಯರ ಮೂಲಕವೇ ವಿವಾಹದ ಬಗೆಗಿನ ಪ್ರಯತ್ನಗಳನ್ನು ನಡೆಸಿ. ಇದರಿಂದ ಸಫಲತೆಗೆ ಹೆಚ್ಚಿನದಾದ ಅವಕಾಶವಿದೆ. ಶುಭಸಂಖ್ಯೆ: 9

ಮೀನ: ಆರ್ಥಿಕ ವಿಚಾರದಲ್ಲಿ ತುಸು ನಷ್ಟವೇ ಉಂಟಾಗಬಹುದು. ಆ ಬಗ್ಗೆ ಚಿಂತೆ ಬೇಡ. ಮಹಾಲಕ್ಷ್ಮಿಯನ್ನು ಸ್ತುತಿಸಿ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net