

ಮೇಷ: ಕಾರಣವಿಲ್ಲದೆಯೂ ಮಕ್ಕಳು ನಿಮ್ಮ ಮೇಲೆ ಕೋಪ ಮಾಡಿಕೊಳ್ಳಬಹುದು. ಎಚ್ಚರವಿರಲಿ. ಆತ್ಮೀಯ ಮಾತುಗಳನ್ನೇ ಆಡಿ. ಶುಭಸಂಖ್ಯೆ: 2
ವೃಷಭ: ನಿಮ್ಮ ಬಗ್ಗೆ ಹೊಟ್ಟೆಕಿಚ್ಚುಪಡುವ ಜನ ಎದುರಾಗಬಹುದು. ಆದರೆ ನಿಮ್ಮ ಬಗ್ಗೆ ನಿಮಗೇ ಆತ್ಮವಿಶ್ವಾಸ ಇರಲಿ. ಶುಭಸಂಖ್ಯೆ: 4
ಮಿಥುನ: ಬಹಳ ದಿನಗಳ ಸಂಕಷ್ಟವು ಮಹಾಗಣಪತಿಯ ಕೃಪೆಯಿಂದ ಪರಿಹಾರಗೊಳ್ಳಲಿದೆ. ಸುಮ್ಮನೆ ಚಿಂತಿಸದೆಯೇ ಶಾಂತವಾಗಿರಿ. ಶುಭಸಂಖ್ಯೆ: 6
ಕಟಕ: ಎಷ್ಟೇ ಕೋಪ ಬಂದರೂ ಸಿಡುಕಬೇಡಿ. ಶಾಂತ ಸಾಗರದಂತೆ ಸಮಾಧಾನವಾಗಿರಿ. ಮನಸ್ಸಿಗೆ ನೆಮ್ಮದಿ ಲಭ್ಯ. ಶುಭಸಂಖ್ಯೆ: 1
ಸಿಂಹ: ನಿಮ್ಮ ಚುರುಕಾದ ಮಾತುಗಳೇ ಜನರ ಮಧ್ಯೆ ನಿಮಗೆ ವಿಶೇಷ ಸ್ಥಾನಮಾನವನ್ನು ನೀಡುತ್ತವೆ. ಖುಷಿಯಾಗಿರಿ. ಶುಭಸಂಖ್ಯೆ: 8
ಕನ್ಯಾ: ಆತ್ಮೀಯ ಮಿತ್ರರೇ ನಿಮ್ಮ ಮೇಲೆ ಆರೋಪ ಮಾಡಬಹುದು. ಆದರೆ ಬಾಳಸಂಗಾತಿ ನಿಮ್ಮನ್ನು ಕಾಪಾಡಲಿದ್ದಾರೆ. ಶುಭಸಂಖ್ಯೆ: 3
ತುಲಾ: ವಿವಾದವೊಂದರಿಂದ ಪಾರಾಗುವ ನಿಮಗೆ ಅನುಕೂಲಕರ ಸಂದರ್ಭವೊಂದು ಹೊಸದಾಗಿ ಒದಗಿಬರಲಿದೆ. ಶುಭಸಂಖ್ಯೆ: 5
ವೃಶ್ಚಿಕ: ಅನಗತ್ಯ ಖರ್ಚುಗಳನ್ನು ನಿಲ್ಲಿಸಿಬಿಡಿ. ಹಾಸಿಗೆ ಇದ್ದಷ್ಟೇ ಕಾಲುಗಳನ್ನು ಚಾಚಿದರೆ ನಿಮ್ಮ ಜೇಬಿಗೂ ಒಳ್ಳೆಯದು. ಶುಭಸಂಖ್ಯೆ: 9
ಧನುಸ್ಸು: ಹಿರಿಯರ ಶುಶ್ರೂಷೆ ಮಾಡಲು ಹಿಂಜರಿಕೆ ಬೇಡ. ಅವರ ಸಲಹೆಗಳಿಂದಾಗಿ ನಿಮ್ಮ ಕಷ್ಟಗಳೂ ಕೊನೆಗೊಳ್ಳಲಿವೆ. ಶುಭಸಂಖ್ಯೆ: 2
ಮಕರ: ಹಳೆಯ ಕಚೇರಿಯಲ್ಲೇ ಮತ್ತೆ ಕೆಲಸ ಸಿಗುವ ಅವಕಾಶವಿದೆ. ಆ ನಿಟ್ಟಿನಲ್ಲಿಯೇ ಮತ್ತೆ ಪ್ರಯತ್ನ ಮಾಡುವುದು ಉತ್ತಮ. ಶುಭಸಂಖ್ಯೆ: 6
ಕುಂಭ: ಹೆಚ್ಚಿನ ವಿದ್ಯಾಭ್ಯಾಸಕ್ಕೆ ಎದುರಾಗುವ ಅವಕಾಶವನ್ನು ಬಿಡಬೇಡಿ. ಭಕ್ತಿಯಿಂದ ಕುಲದೇವರನ್ನು ಪ್ರಾರ್ಥಿಸಿ. ಶುಭಸಂಖ್ಯೆ: 4
ಮೀನ: ಸಂಗಾತಿಯ ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ಬೇಡ. ಕಾಳಜಿಯಿಂದ ಆರೈಕೆ ಮಾಡಿ. ಕಷ್ಟ ದೂರವಾಗಲಿದೆ. ಶುಭಸಂಖ್ಯೆ: 7