

ಮೇಷ: ಮಕ್ಕಳ ವಿದ್ಯಾಭ್ಯಾಸ ಪ್ರಗತಿಯ ಕಡೆಗೆ ಸಾಗುವುದು. ಸಂಗಾತಿಯ ಬೇಕುಬೇಡಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ. ಶುಭಸಂಖ್ಯೆ: 3
ವೃಷಭ: ಕೆಲವು ಕೆಲಸಗಳನ್ನು ಒಲ್ಲದ ಮನಸ್ಸಿನಿಂದ ಮಾಡಲು ಹೋಗಿ ಸಿಕ್ಕಿಹಾಕಿಕೊಳ್ಳುವಿರಿ. ಕುಲದೇವರನ್ನು ಪ್ರಾರ್ಥಿಸಿ. ಶುಭಸಂಖ್ಯೆ: 5
ಮಿಥುನ: ಯಾರಿಗೂ ಹಣಕಾಸಿನ ವಿಚಾರವನ್ನು ಮಾತ್ರ ತಿಳಿಸಲು ಹೋಗದಿರಿ. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾದೀರಿ. ಶುಭಸಂಖ್ಯೆ: 7
ಕಟಕ: ನಿಮ್ಮ ನಿರೀಕ್ಷೆ ಮೀರಿ ಬಂಧುಗಳು, ಸ್ನೇಹಿತರ ಸಹಾಯಹಸ್ತ ದೊರೆಯುವುದು. ಆರಾಧ್ಯದೈವವನ್ನು ಸ್ತುತಿಸಿ. ಶುಭಸಂಖ್ಯೆ: 9
ಸಿಂಹ: ಬಾಕಿ ಇರುವ ಕೆಲಸಗಳನ್ನು ಮುಗಿಸಿಕೊಂಡರೆ ಹೆಚ್ಚಿನ ಲಾಭವಾಗಿ ಹಣಕಾಸಿನ ಸ್ಥಿತಿಯೂ ಉತ್ತಮಗೊಳ್ಳುವುದು. ಶುಭಸಂಖ್ಯೆ: 5
ಕನ್ಯಾ: ಕಚೇರಿಗೆ ಸಂಬಂಧಿತ ದಾಖಲೆಗಳನ್ನು ಸರಿಯಾಗಿ ಜೋಡಿಸಿ. ಇಲ್ಲದಿದ್ದರೆ ಸ್ವಲ್ಪಮಟ್ಟಿನ ಕಿರಿಕಿರಿಯೂ ಎದುರಾಗುತ್ತದೆ. ಶುಭಸಂಖ್ಯೆ: 1
ತುಲಾ: ಮಕ್ಕಳು ಹೆಚ್ಚಿನ ಅಂಕ ಪಡೆಯುತ್ತಿಲ್ಲ ಎಂಬ ಕೊರಗು ಕಾಡುವುದಾದರೂ ಮುಂದಿನ ದಿನಗಳಲ್ಲಿ ಒಳಿತಾಗಲಿದೆ. ಶುಭಸಂಖ್ಯೆ: 8
ವೃಶ್ಚಿಕ: ನೀವು ಯೋಚಿಸಿದ ರೀತಿಯಲ್ಲಿಯೇ ಎಲ್ಲವೂ ನಡೆಯದಿದ್ದರೂ ಕೆಲವು ವಿಶೇಷ ಅನುಭವ ಹೊಂದುವಿರಿ. ಶುಭಸಂಖ್ಯೆ: 2
ಧನಸ್ಸು: ಕೊಟ್ಟ ಸಾಲ ಮರಳಿ ಬರದೆ ಆರ್ಥಿಕ ಸಂಕಷ್ಟ ಎದುರಿಸುವಿರಿ. ಅದಕ್ಕಾಗಿ ಗಾಬರಿ ಬೇಡ. ಲಕ್ಷ್ಮೀ ಸ್ತೋತ್ರ ಪಠಿಸಿ. ಶುಭಸಂಖ್ಯೆ: 4
ಮಕರ: ಆಸ್ತಿಯ ವಿಚಾರದಲ್ಲಿ ನಿಷ್ಠುರತೆಯನ್ನು ಪ್ರದರ್ಶಿಸುವುದು ನಿಮಗೆ ಅನಿವಾರ್ಯ. ಆದರೆ ದೈವಕೃಪೆಯಿಂದ ಗೆಲ್ಲುವಿರಿ. ಶುಭಸಂಖ್ಯೆ: 6
ಕುಂಭ: ಈ ಸ್ಥಿತಿಯಿಂದ ಹೊರಬಂದರೆ ಸಾಕೆನ್ನುವಷ್ಟು ರೋಸಿಹೋಗಿದ್ದೀರಿ. ದಕ್ಷಿಣಾಮೂರ್ತಿಯನ್ನು ಧ್ಯಾನಿಸಿದರೆ ಕಷ್ಟ ಪರಿಹಾರ. ಶುಭಸಂಖ್ಯೆ: 9
ಮೀನ: ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿರುತ್ತದೆ. ಆದರೆ ಅದಕ್ಕಾಗಿ ಹೆಚ್ಚೇನೂ ಚಿಂತಿಸಬೇಕಿಲ್ಲ. ಆಂಜನೇಯ ಸ್ತೋತ್ರ ಓದಿ. ಶುಭಸಂಖ್ಯೆ: 3