ಈ ರಾಶಿಯವರಿಗೆ ಇಂದು ದುಪ್ಪಟ್ಟು ಹಣ ಸಿಗಲಿದೆ

Nitya-Bhavishya-vvani-1-2-1
Published on

ಮೇಷ: ಹಳೆಯ ಗೆಳೆಯರನ್ನು ಭೇಟಿಯಾಗಲಿದ್ದೀರಿ. ಅವರ ಪ್ರಭಾವದಿಂದಾಗಿ ಹಣಕಾಸಿನ ವಿಚಾರದಲ್ಲಿ ಅನುಕೂಲವಿದೆ. ಶುಭಸಂಖ್ಯೆ: 2

ವೃಷಭ: ವೃಥಾ ಖರ್ಚಿನ ದಾರಿ ಹುಡುಕದಿರಿ. ಒಳ್ಳೆಯ ಕಾರ್ಯಕ್ಕೆ ಹಣ ವ್ಯಯಿಸಿದರೆ ದುಪ್ಪಟ್ಟು ಹಣ ಭಗವಂತನಿಂದ ಬರಲಿದೆ. ಶುಭಸಂಖ್ಯೆ: 5

ಮಿಥುನ: ಸಮಯಾವಧಾನದಿಂದ ಕೆಲಸದ ಸ್ಥಳಗಳಲ್ಲಿ ವಿಶೇಷ ಜನಪ್ರಿಯತೆ ಗಳಿಸುವಿರಿ. ತಪ್ಪದೆ ಮಾರುತಿ ಸ್ತೋತ್ರ ಪಠಿಸಿ. ಶುಭಸಂಖ್ಯೆ: 8

ಕಟಕ: ಸದ್ಯಕ್ಕೆ ನಿಮ್ಮೆದುರಿರುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ. ಇದರಿಂದ ಸಮಾಜದಲ್ಲಿ ಮನ್ನಣೆ ದೊರೆಯುವುದು. ಶುಭಸಂಖ್ಯೆ: 7

ಸಿಂಹ: ಅನ್ಯಾಯ ಸಹಿಸದ ನೀವು ಎದುರಾಳಿಯ ಜತೆಗೆ ಆತ್ಮಸ್ಥೈರ್ಯದಿಂದ ಹೋರಾಡಿ ಜಯವನ್ನು ಸಂಪಾದಿಸುವಿರಿ. ಶುಭಸಂಖ್ಯೆ: 4

ಕನ್ಯಾ: ಬರಬೇಕಾಗಿದ್ದ ಹಣ ಬೇಗ ಸಿಗುವುದು. ತಾಪತ್ರಯಗಳ ಮಧ್ಯೆಯೂ ಇಚ್ಛಿಸಿದ್ದ ಶುಭಕಾರ್ಯ ಮಾಡಿಸುವಿರಿ. ಶುಭಸಂಖ್ಯೆ: 1

ತುಲಾ: ಅಪಾರ ಸಹನೆ ತೋರಿಸುವ ಮೂಲಕ ವಿರೋಧಿಗಳ ಮನದಲ್ಲೂ ಸಂಭ್ರಮವನ್ನು ಉಂಟುಮಾಡುವಿರಿ. ಶುಭಸಂಖ್ಯೆ: 3

ವೃಶ್ಚಿಕ: ನಿರಾಶೆಯ ಅಲೆಗಳು ನಿಮ್ಮ ಆತ್ಮವಿಶ್ವಾಸವನ್ನು ಕುಂದಿಸುವ ಸಾಧ್ಯತೆಯಿದೆ. ಹಾಗಾಗಿ ವಿಷ್ಣು ಸಹಸ್ರನಾಮವನ್ನು ಪಠಿಸಿ. ಶುಭಸಂಖ್ಯೆ: 6

ಧನಸ್ಸು: ಯಾವ ಕೆಲಸ ಎದುರಿಗಿಲ್ಲವೋ ಅದರ ಬಗ್ಗೆ ಚಿಂತಿಸಬೇಕಿಲ್ಲ. ಇದರಿಂದ ನಿಮಗೆ ತೊಂದರೆ ಎದುರಾಗುವುದು. ಶುಭಸಂಖ್ಯೆ: 9

ಮಕರ: ಮನೆ ಮಂದಿಗಿಂತ ಹೊರಗಿನ ಗೆಳೆಯರೇ ನಿಮ್ಮನ್ನು ಇಷ್ಟಪಡುವರು. ಅವರ ಮೂಲಕ ಹೊಸ ನೌಕರಿ ಸಿಗಲಿದೆ. ಶುಭಸಂಖ್ಯೆ: 5

ಕುಂಭ: ಬಹುದಿನಗಳ ಕನಸೊಂದು ಕೈಗೂಡುವುದು. ಇದರೊಂದಿಗೆ ಸಕಾರಾತ್ಮಕ ಚಿಂತನೆಯನ್ನು ರೂಢಿಸಿಕೊಂಡಲ್ಲಿ ಒಳಿತಿದೆ. ಶುಭಸಂಖ್ಯೆ: 2

ಮೀನ: ಮನೆಯ ಸಮಸ್ಯೆಗಳನ್ನು ಅಲ್ಲಿಯೇ ಬಗೆಹರಿಸಿಕೊಂಡರೆ ಉತ್ತಮ. ಎಲ್ಲರೂ ನಿಮ್ಮ ಪರಿಹಾರ ಸೂತ್ರ ಒಪ್ಪುವರು. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net