

ಮೇಷ: ನಿಮ್ಮ ಮನೋಭಿಲಾಷೆಗಳನ್ನು ಸಾಕಾರ ಮಾಡಿಕೊಳ್ಳುವ ಯತ್ನದಲ್ಲಿ ಯಾವುದೇ ಥರದ ಸೋಲು ಎದುರಾಗದು. ಶುಭಸಂಖ್ಯೆ: 8
ವೃಷಭ: ಔಷಧ ವ್ಯಾಪಾರಿ, ವೈದ್ಯ, ಯಂತ್ರೋಪಕರಣ ವಸ್ತುಗಳ ಮಾರಾಟಗಾರರು ಜಾಗ್ರತೆ ವಹಿಸಬೇಕಾಗಿದೆ. ಶುಭಸಂಖ್ಯೆ: 6
ಮಿಥುನ: ಅನಿರೀಕ್ಷಿತ ಘಟನೆಗಳಿಂದ ಗಾಬರಿಯಾದರೂ ಅವು ಸುಖಾಂತ್ಯವನ್ನೇ ಕಾಣುವುದರಿಂದ ನೆಮ್ಮದಿ ಉಂಟಾಗಲಿದೆ. ಶುಭಸಂಖ್ಯೆ: 4
ಕಟಕ: ಆರೋಗ್ಯದ ವಿಚಾರವನ್ನು ಅಲಕ್ಷಿಸಬೇಡಿ. ವೈದ್ಯರ ಸಲಹೆ ಪಡೆದು ಮನೆಯಲ್ಲೇ ಇದ್ದರೆ ಒಳಿತುಂಟಾಗಲಿದೆ. ಶುಭಸಂಖ್ಯೆ: 2
ಸಿಂಹ: ಮೂರ್ಖರ ಸಲಹೆಗಳನ್ನೂ ನಿರಾಕರಿಸದಿರಿ. ಇಲ್ಲದಿದ್ದರೆ ಅವರು ನಿಮ್ಮನ್ನೇ ಹಿಂಬಾಲಿಸುವ ಕಿರಿಕಿರಿಗೆ ದಾರಿ ಇದೆ. ಶುಭಸಂಖ್ಯೆ: 9
ಕನ್ಯಾ: ದಿಢೀರ್ ಹಣವೆಂಬ ಮಾಯಾಜಿಂಕೆಯ ಹಿಂದೆ ಬಿದ್ದಿದ್ದೀರಿ. ಅದರಿಂದ ಇರುವ ಹಣವನ್ನೂ ಕಳೆದುಕೊಂಡೀರಿ. ಶುಭಸಂಖ್ಯೆ: 7
ತುಲಾ: ಹೃದಯದ ಪ್ರಶ್ನೆಗಳಿಗೆ ಉತ್ತರಿಸದೆಯೇ ಬಿಡಬೇಡಿ. ಅದರಿಂದಲೇ ಆತ್ಮವಿಶ್ವಾಸ, ಅಂತಃಶಕ್ತಿಗಳೆಲ್ಲ ವೃದ್ಧಿಸಲಿವೆ. ಶುಭಸಂಖ್ಯೆ: 5
ವೃಶ್ಚಿಕ: ಬರಹಗಾರರು, ರಾಜಕಾರಣಿಗಳಿಗೆ ಜನರಿಂದ ಕಟುಮಾತುಗಳನ್ನೇ ಕೇಳಬೇಕಾಗುವ ಸಾಧ್ಯತೆಯಿದೆ. ಜೋಪಾನ. ಶುಭಸಂಖ್ಯೆ: 3
ಧನಸ್ಸು: ದೂರದ ಬೆಟ್ಟದ ಒರಟನ್ನು ಮರೆತು ಮರುಗಬೇಡಿ. ಸಮಸ್ಯೆಗೆ ಹತ್ತಿರದಲ್ಲಿಯೇ ಸುಲಭದ ಪರಿಹಾರವಿದೆ. ಶುಭಸಂಖ್ಯೆ: 1
ಮಕರ: ಯಾವುದಕ್ಕೂ ಅತಿಯಾಗಿ ಚಿಂತೆ ಮಾಡಬೇಡಿ. ಕುಲದೈವವನ್ನು ಶ್ರದ್ಧಾಭಕ್ತಿಗಳಿಂದ ಪೂಜಿಸಿದರೆ ನೆಮ್ಮದಿಯಿದೆ. ಶುಭಸಂಖ್ಯೆ: 8
ಕುಂಭ: ಮನೆಯಲ್ಲಿನ ಜಗಳದಿಂದ ವೇದನೆ ಅನುಭವಿಸುವಿರಿ. ತಾಳ್ಮೆಯಿಂದ ಕಲಹವನ್ನು ತಿಳಿಗೊಳಿಸಲು ಪ್ರಯತ್ನಿಸಿ. ಶುಭಸಂಖ್ಯೆ: 6
ಮೀನ: ಆಹಾರದ ವಿಚಾರದಲ್ಲಿ ಕಾಳಜಿ ವಹಿಸುವುದು ಉತ್ತಮ. ಇಲ್ಲದಿದ್ದರೆ ಉದರಸಂಬಂಧಿ ತೊಂದರೆ ಬರಬಹುದು. ಶುಭಸಂಖ್ಯೆ: 4