

ಮೇಷ: ಕಾಯಕವೇ ಕೈಲಾಸ ಎಂಬಂತಹ ನಿಮ್ಮ ನಿಷ್ಠೆಯು ಬಹು ದೊಡ್ಡ ಮಟ್ಟದ ಯಶಸ್ಸನ್ನೇ ಒದಗಿಸಿಕೊಡಲಿದೆ. ಶುಭಸಂಖ್ಯೆ: 6
ವೃಷಭ: ಅತೀಂದ್ರಿಯ ಆಯಾಮಗಳುಳ್ಳಂತಹ ಅನುಭವಗಳಿಂದ, ಸಂಗೀತ, ನೃತ್ಯಾದಿ ಕಲೆಗಳಿಂದ ಲಾಭದ ದಾರಿ ಲಭ್ಯ. ಶುಭಸಂಖ್ಯೆ: 5
ಮಿಥುನ: ಇಲೆಕ್ಟ್ರಿಷಿಯನ್ಗಳು, ಇಂಜಿನಿಯರ್ಗಳು, ಡಾಕ್ಟರ್ಗಳು ಹಾಗೂ ಔಷಧ ವ್ಯಾಪಾರಿಗಳಿಗೆ ವಿಶೇಷವಾದ ಲಾಭವೇ ಇದೆ. ಶುಭಸಂಖ್ಯೆ: 4
ಕಟಕ: ಅನಾಮಧೇಯ ನಕಲಿ ಪತ್ರಗಳ ಕಾರಣದಿಂದ ಆರೋಪಕ್ಕೆ ಗುರಿಯಾಗಬಹುದು. ಆದರೆ ಧೈರ್ಯದಿಂದಲೇ ಎದುರಿಸಿ. ಶುಭಸಂಖ್ಯೆ: 1
ಸಿಂಹ: ವಂಚನೆ ಮಾಡುವ ಜನರೇ ನಿಮ್ಮ ಸುತ್ತ ತುಂಬಿಕೊಂಡಿದ್ದಾರೆ. ಜಾಗರೂಕತೆಯೇ ನಿಮಗೆ ಶ್ರೀರಕ್ಷೆಯಾಗಿದೆ. ಶುಭಸಂಖ್ಯೆ: 2
ಕನ್ಯಾ: ಆರೋಗ್ಯದ ಬಗೆಗೆ ಅಲಕ್ಷ್ಯ ಮಾಡುತ್ತಿದ್ದೀರಿ. ಕೂಡಲೇ ಕುಟುಂಬದ ವೈದ್ಯರ ಬಳಿಯಲ್ಲಿಸಲಹೆ ಪಡೆದರೆ ಕ್ಷೇಮವಿದೆ. ಶುಭಸಂಖ್ಯೆ: 3
ತುಲಾ: ವಿದ್ಯಾರ್ಥಿಗಳಿಗೆ ಸಂತೋಷದಾಯಕ ದಿನ. ವಿದ್ಯಾಭ್ಯಾಸದಲ್ಲಿ ವಿಶೇಷವಾದ ಪ್ರಗತಿಯನ್ನು ಕಾಣಲಿದ್ದೀರಿ. ಶುಭಸಂಖ್ಯೆ: 9
ವೃಶ್ಚಿಕ: ವೃಥಾ ಆರೋಪಗಳನ್ನು ಎದುರಿಸುವ ಸಂಭವವಿದೆ. ದುರ್ಗಾದೇವಿಯ ಸ್ತೋತ್ರವನ್ನುಶ್ರದ್ಧಾಭಕ್ತಿಯಿಂದ ಪಠಿಸಿ. ಶುಭಸಂಖ್ಯೆ: 8
ಧನುಸ್ಸು: ಬೇಡವೆಂದರೂ ಕೆಲವರು ನಿಮ್ಮ ಮೇಲೆ ಒತ್ತಡವನ್ನು ಹೇರಿ ಬೇಡದ್ದನ್ನು ಕೊಳ್ಳುವ ಹಾಗೆ ಮಾಡಿಯಾರು. ಎಚ್ಚರ. ಶುಭಸಂಖ್ಯೆ: 7
ಮಕರ: ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಕಡಿಮೆ ಎಂದರಿತೇ ಕಾರ್ಯದಲ್ಲಿ ಪ್ರವೃತ್ತರಾದರೆ ಮಾತ್ರ ಅಪಾಯ ಬರದು. ಶುಭಸಂಖ್ಯೆ: 1
ಕುಂಭ: ನಿಮ್ಮ ಆರ್ಥಿಕ ಸ್ಥಿತಿಗತಿಯ ವಿಚಾರವು ಯಾರಿಗೂ ತಿಳಿಯದಂತೆ ಗುಟ್ಟಾಗಿಡಿ. ಇಲ್ಲವಾದರೆ ಅಪಾಯವಾದೀತು. ಶುಭಸಂಖ್ಯೆ: 4
ಮೀನ: ದಿನವಿಡೀ ಒಂದೇ ವಿಷಯದ ಬಗ್ಗೆ ಚಿಂತೆ ಮಾಡಿ ಮನಸ್ಸನ್ನು ದಣಿಸಬೇಡಿ. ಸಕಾರಾತ್ಮಕ ಆಲೋಚನೆ ಇರಲಿ. ಶುಭಸಂಖ್ಯೆ: 7