ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸಮಾಚಾರ ಕೇಳುತ್ತೀರಿ

Nitya-Bhavishya-vvani-1-2
Published on

ಮೇಷ: ಜಾಣ್ಮೆಯಿಂದ ಅನ್ಯರ ಹಸ್ತಕ್ಷೇಪ ನಿರಾಕರಿಸುವ ನಿಮಗೆ ಆತ್ಮವಿಶ್ವಾಸವೇ ರಕ್ಷೆ. ಪೂರ್ವಪುಣ್ಯದ ನೆರವಿದೆ. ಶುಭಸಂಖ್ಯೆ: 9

ವೃಷಭ: ಮಕ್ಕಳಿಂದ ಶುಭ ಸಮಾಚಾರ ಕೇಳುವಿರಿ. ದುರ್ಗಾದೇವಿಯ ಪ್ರಾರ್ಥನೆಯಿಂದ ದುರಿತಗಳೆಲ್ಲ ನಾಶವಾಗುತ್ತವೆ. ಶುಭಸಂಖ್ಯೆ: 5

ಮಿಥುನ: ಹಿರಿಯರೊಡನೆ ಮಾತುಕತೆ ನಡೆಸಿ ಮನದ ಹೊಯ್ದಾಟ ಪರಿಹರಿಸಿಕೊಳ್ಳಿ. ಆರ್ಥಿಕ ಸ್ಥಿತಿ ಉತ್ತಮವಾಗುವುದು. ಶುಭಸಂಖ್ಯೆ: 7

ಕಟಕ: ನಿಮ್ಮ ಪ್ರತಿಭೆಯನ್ನು ಸರಿಯಾಗಿ ಪ್ರದರ್ಶಿಸಿ. ಯಶಸ್ಸನ್ನು ಗಳಿಸಲು ತಕ್ಕ ಸಂದರ್ಭ. ಆಕಸ್ಮಿಕ ಧನಲಾಭವಿದೆ. ಶುಭಸಂಖ್ಯೆ: 3

ಸಿಂಹ: ಕಚೇರಿಯಲ್ಲಿ ಕಹಿ ಅನುಭವವಾಗಬಹುದು. ಯಾರನ್ನೂ ಅತಿಯಾಗಿ ಹಚ್ಚಿಕೊಳ್ಳದಿರಿ. ನಿಷ್ಠುರ ವರ್ತನೆ ಅಗತ್ಯ. ಶುಭಸಂಖ್ಯೆ: 8

ಕನ್ಯಾ: ವಿವಾದದಲ್ಲಿ ಸೋತು ಗೆಲ್ಲುವುದೇ ಒಳ್ಳೆಯದು. ಕೆಲವು ವಿಚಾರಗಳಲ್ಲಿ ಯಶ ಸಾಧಿಸಲು ಧನವ್ಯಯ ಅನಿವಾರ್ಯ. ಶುಭಸಂಖ್ಯೆ: 1

ತುಲಾ: ನಿಮ್ಮ ಉದ್ದೇಶಗಳನ್ನು ಸಿದ್ಧಿಸಿಕೊಳ್ಳಲು ದೇವಿ ಸ್ತೋತ್ರ ಪಠಿಸಿ. ಅನವಶ್ಯಕ ಖರ್ಚುಗಳಿಗೆ ತಕ್ಷಣ ಕಡಿವಾಣ ಹಾಕಿ. ಶುಭಸಂಖ್ಯೆ: 4

ವೃಶ್ಚಿಕ: ಮುಖ್ಯ ಕಾರ್ಯಗಳನ್ನು ಮುಂದೂಡುವುದೇ ಒಳಿತು. ಆಂಜನೇಯಸ್ವಾಮಿ ದರ್ಶನ ಮಾಡಿ. ಮನಕ್ಕೆ ಶಾಂತಿ ಲಭ್ಯ. ಶುಭಸಂಖ್ಯೆ: 2

ಧನಸ್ಸು: ವಾಯುಪ್ರಕೋಪದಿಂದ ತೊಂದರೆ. ಖರ್ಚುವೆಚ್ಚಗಳ ಬಗ್ಗೆ ಗಮನವಿರಲಿ. ಸುಮ್ಮನೆ ಪಟ್ಟಿ ಬೆಳೆಯುತ್ತದೆ. ಶುಭಸಂಖ್ಯೆ: 6

ಮಕರ: ನಿಂತಿದ್ದ ಕಾರ್ಯ ಮುಂದುವರಿಸಲು ತಕ್ಕ ಸಂದರ್ಭ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಕುಲದೇವರನ್ನು ಸ್ಮರಿಸಿ. ಶುಭಸಂಖ್ಯೆ: 5

ಕುಂಭ: ದೈವಬಲ ಕಡಿಮೆ ಇದ್ದರೂ ನಿಮ್ಮ ಪುಣ್ಯಕಾರ್ಯಗಳಿಂದ ಒಳಿತೇ ಆಗಲಿದೆ. ಆರ್ಥಿಕ ಸ್ಥಿತಿ ಏರುಪೇರಾದೀತು. ಶುಭಸಂಖ್ಯೆ: 9

ಮೀನ: ಇತರರು ನಿಮ್ಮನ್ನು ಉದ್ಧರಿಸುತ್ತಾರೆ ಎಂದು ಭಾವಿಸದಿರಿ. ನೀವಾಗಿ ಮುನ್ನುಗ್ಗಿ ಕಾರ್ಯ ಪ್ರವೃತ್ತರಾದರೆ ಗೆಲುವಿದೆ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net