

ಮೇಷ: ನೀವು ಪಟ್ಟ ಅಪಾರವಾದ ಪರಿಶ್ರಮದ ಕಾರಣದಿಂದ ನಿಮಗೆ ವಿಶೇಷವಾದಂತಹ ಶುಭಫಲ ಲಭ್ಯವಾಗುವುದು. ಶುಭಸಂಖ್ಯೆ: 7
ವೃಷಭ: ಬಂಧುಬಾಂಧವರ ಬೆಂಬಲದಿಂದ ಒಳಿತಾಗುವುದು. ಭಗವಂತನ ಸ್ಮರಣೆ ಮಾಡಿ ಕಾರ್ಯೋನ್ಮುಖರಾಗಿ. ಶುಭಸಂಖ್ಯೆ: 4
ಮಿಥುನ: ಯಾವುದೇ ಥರದ ಹಸ್ತಕ್ಷೇಪಗಳನ್ನು ಸಹಿಸದಿರಿ. ಕಚೇರಿಗೆ ಸಂಬಂಧಿಸಿದ ದಾಖಲೆಗಳನ್ನು ಜೋಡಿಸಿಡಿ. ಶುಭಸಂಖ್ಯೆ: 1
ಕಟಕ: ಜೀವನದಲ್ಲಿ ಹತಾಶೆ ಮೂಡಿದರೂ ಆಪ್ತೇಷ್ಟರ ಮಾರ್ಗದರ್ಶನ ಪಡೆದಲ್ಲಿ ಮಾನಸಿಕ ದುಗುಡ ನೀಗಲಿದೆ. ಶುಭಸಂಖ್ಯೆ: 9
ಸಿಂಹ: ಬಾಕಿ ಇರುವ ಕೆಲಸಗಳನ್ನು ಬೇಗ ಮುಗಿಸಿದರೆ ಒಳ್ಳೆಯದು. ಇದರಿಂದಾಗಿ ಅನವಶ್ಯಕ ಟೀಕೆಯೂ ಎದುರಾಗದು. ಶುಭಸಂಖ್ಯೆ: 6
ಕನ್ಯಾ: ಕಷ್ಟಕಾಲದಲ್ಲಿ ನೆರವಾದವನೇ ನೈಜ ಹಿತೈಷಿ. ಕೆಲ ಗ್ರಹಗಳ ಶುಭಸಂಚಾರದಿಂದ ನಿಮಗೆ ಅಂಥವರು ಸಿಗಲಿದ್ದಾರೆ. ಶುಭಸಂಖ್ಯೆ: 3
ತುಲಾ: ವಿಶೇಷ ಖರ್ಚು ಮಾಡುವ ಸಂದರ್ಭ ಎದುರಾಗುವುದು. ಆದರೂ ಅದರಿಂದ ಒಳಿತಿನ ದಾರಿ ದೊರೆಯಲಿದೆ. ಶುಭಸಂಖ್ಯೆ: 8
ವೃಶ್ಚಿಕ: ಹಲವು ಹೊಸತನಗಳನ್ನು ರೂಢಿಸಿಕೊಳ್ಳಲು ಸಕಾಲ.ತಜ್ಞರ ಮಾರ್ಗದರ್ಶನವನ್ನೂ ಪಡೆದುಕೊಂಡರೆ ಉತ್ತಮ. ಶುಭಸಂಖ್ಯೆ: 5
ಧನಸ್ಸು: ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯಿದೆ. ಸಂಗಾತಿಯ ಬೇಕುಬೇಡಗಳಿಗೂ ಧನಾತ್ಮಕ ರೀತಿಯಲ್ಲಿ ಸ್ಪಂದಿಸಿ. ಶುಭಸಂಖ್ಯೆ: 2
ಮಕರ: ನಿರೀಕ್ಷೆಗೂ ಮೀರಿ ಮಿತ್ರರು ಸಹಾಯಹಸ್ತ ಚಾಚುವರು. ಪ್ರಾಮಾಣಿಕತೆಯಿಂದ ಯಶಸ್ಸು ನಿಮ್ಮದಾಗಲಿದೆ. ಶುಭಸಂಖ್ಯೆ: 9
ಕುಂಭ: ಹಮ್ಮಿಕೊಂಡ ಎಲ್ಲ ಕಾರ್ಯಗಳೂ ಸುಯೋಜಿತವಾಗಿ ಸಾಗಲಿವೆ. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳಲಿದೆ. ಶುಭಸಂಖ್ಯೆ: 6
ಮೀನ: ಅತಿಥಿಯೊಬ್ಬರ ಸಲಹೆಯಿಂದ ನಿಮ್ಮ ವಹಿವಾಟು ಏರಿಕೆಯಾಗಿ ಲಾಭವಾಗುವುದು. ಕುಲದೇವರನ್ನು ಪ್ರಾರ್ಥಿಸಿ. ಶುಭಸಂಖ್ಯೆ: 4