ಈ ರಾಶಿಯವರ ಬಳಿಗೆ ಬರುವ ಜನರು ಇಕ್ಕಟ್ಟಿಗೆ ಸಿಲುಕಿಸಬಹುದು. ಎಚ್ಚರವಾಗಿರಿ.

Nitya-Bhavishya-vvani-1-2-1
Published on

ಮೇಷ: ಕೆಲ ಕಾಲದಿಂದ ಸ್ಪಷ್ಟ ರೂಪ ಕೊಡಲಾಗದ ವಿಚಾರಕ್ಕೆ ನಿಶ್ಚಿತ ರೂಪ ಸಿಗಲಿದೆ. ಆರ್ಥಿಕ ಕಷ್ಟ ಕಡಿಮೆಯಾಗಲಿದೆ. ಶುಭಸಂಖ್ಯೆ: 6

ವೃಷಭ: ನಿಮ್ಮ ಬಳಿ ಬರುವ ಜನರು ಇಕ್ಕಟ್ಟಿಗೆ ಸಿಲುಕಿಸಬಹುದು. ದುರ್ಗಾಮಾತೆಯನ್ನು ಸ್ಮರಿಸಿ ತಕ್ಕ ಉತ್ತರ ಕೊಡಿ. ಶುಭಸಂಖ್ಯೆ: 5

ಮಿಥುನ: ದಿಢೀರಾಗಿ ವಿಶೇಷ ಪ್ರವಾಸದ ಅವಕಾಶ ಕೂಡಿಬರುತ್ತದೆ. ಬಳಸಿಕೊಂಡಲ್ಲಿ ಜ್ಞಾನಾರ್ಜನೆ ಹೆಚ್ಚಳಕ್ಕೆ ಅನುಕೂಲ. ಶುಭಸಂಖ್ಯೆ: 9

ಕಟಕ: ಮಾತು ಮನೆ ಕೆಡಿಸಿತು ಎಂಬಂತೆ ನಿಮ್ಮ ಮಾತು ಆಪ್ತರಿಗೆ ಘಾಸಿ ಮಾಡಬಹುದು. ಸಾಧ್ಯವಾದಷ್ಟು ತಾಳ್ಮೆ ಇರಲಿ. ಶುಭಸಂಖ್ಯೆ: 4

ಸಿಂಹ: ಸದ್ಯಕ್ಕೆ ಎಲ್ಲ ಕನ್ನಡಿಯ ಗಂಟಿನಂತೆ ತೋರುತ್ತಿದೆ. ಹಿರಿಯರ ಆಶೀರ್ವಾದ ಪಡೆದರೆ ಉತ್ತಮ ಫಲ ಸಿಗಲಿದೆ. ಶುಭಸಂಖ್ಯೆ: 7

ಕನ್ಯಾ: ಮಕ್ಕಳಿಗೆ ಮಹತ್ವದ ವಿಷಯ ತಿಳಿಸಲು ಉತ್ತಮ ಸಮಯವಿದು. ಅವರಿಗೂ ಸ್ವಲ್ಪ ಜವಾಬ್ದಾರಿಯನ್ನು ಕಲಿಸಿ. ಶುಭಸಂಖ್ಯೆ: 2

ತುಲಾ: ಕೆಲವು ವಿಚಾರಗಳನ್ನು ನೇರಾನೇರ ಹೇಳಿಬಿಡುವುದು ಉತ್ತಮ. ಇದರಿಂದ ನಿಮ್ಮ ಬಗೆಗಿನ ಗೌರವ ಹೆಚ್ಚುವುದು. ಶುಭಸಂಖ್ಯೆ: 3

ವೃಶ್ಚಿಕ: ಅಜೀರ್ಣದ ಸಮಸ್ಯೆ ಉಂಟಾಗಬಹುದು. ವೈದ್ಯರ ಸಲಹೆಯಂತೆ ಔಷಧ ಸೇವಿಸಿ ಆರೋಗ್ಯದತ್ತ ಗಮನ ಹರಿಸಿ. ಶುಭಸಂಖ್ಯೆ: 8

ಧನಸ್ಸು: ಕೆಲವೊಮ್ಮೆ ಸುಳ್ಳು ಹೇಳುವುದರಿಂದ ಸುತ್ತಲಿನ ಪರಿಸರದ ಮೇಲೆ ದುಷ್ಪರಿಣಾಮ ಆಗಬಹುದು. ಮೌನ ವಹಿಸಿ. ಶುಭಸಂಖ್ಯೆ: 1

ಮಕರ: ಸಂಬಂಧಪಡದವರು ನಿಮ್ಮ ವ್ಯವಹಾರದಲ್ಲಿ ಮೂಗು ತೂರಿಸಬಹುದು. ಅಂಥವರನ್ನು ದೂರವಿಟ್ಟರೆ ಉತ್ತಮ. ಶುಭಸಂಖ್ಯೆ: 5

ಕುಂಭ: ಅಲೆದಾಡುವ ಶ್ರಮವಿದ್ದರೂ ನಿರಾಶೆ ಬೇಡ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಆಸ್ತಿಯ ವಿಚಾರದಲ್ಲಿ ಲಾಭ. ಶುಭಸಂಖ್ಯೆ: 9

ಮೀನ: ನಿಮ್ಮವರೇ ನಿಮ್ಮ ವಿಚಾರದಲ್ಲಿ ತಿಳಿದ ತಪ್ಪು ಗ್ರಹಿಕೆ ದೂರವಾಗಲಿದೆ. ಹೊಸ ಕೆಲಸಕ್ಕೆ ಉತ್ಸಾಹ ಮೂಡುವುದು. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net