

ಮೇಷ: ಸಾಧ್ಯವಾದಷ್ಟು ಒಳಿತನ್ನು ಚಿಂತಿಸಿದರೆ ಉತ್ತಮ. ನಕಾರಾತ್ಮಕ ಚಿಂತನೆಯಿಂದ ಇತರರಿಗೂ ಸಮಸ್ಯೆ. ಶುಭಸಂಖ್ಯೆ: 2
ವೃಷಭ: ಯಾರು ನಿಮ್ಮನ್ನು ಹೊಗಳಲಿ, ತೆಗಳಲಿ ಎಲ್ಲವನ್ನೂ ನಗುಮುಖದಿಂದಲೇ ಸ್ವೀಕರಿಸಿ. ನಿಮ್ಮ ಘನತೆ ಹೆಚ್ಚಲಿದೆ. ಶುಭಸಂಖ್ಯೆ: 7
ಮಿಥುನ: ಎರಡು ದೋಣಿಗಳಲ್ಲಿ ಪ್ರಯಾಣ ಬೆಳೆಸಿದರೆ ಗುರಿಯನ್ನು ತಲುಪಲಾಗದು. ಒಂದೇ ಒಂದು ಅವಕಾಶವನ್ನು ಆಯ್ದುಕೊಳ್ಳಿ. ಶುಭಸಂಖ್ಯೆ: 6
ಕಟಕ: ನಿಮ್ಮೆದುರಿನ ದಾರಿಗಳಲ್ಲಿ ಯಾವುದು ಉತ್ತಮ ಎಂಬ ಗೊಂದಲವಾದೀತು. ಆಂಜನೇಯನ ಸ್ತುತಿ ಮಾಡಿ. ಶುಭಸಂಖ್ಯೆ: 3
ಸಿಂಹ: ಬರಬೇಕಾದ ಹಣ ಸಕಾಲಕ್ಕೆ ಬರದು. ಅಲ್ಲದೆ ಕೆಲವು ಅನವಶ್ಯಕ ಖರ್ಚುಗಳಿಂದ ತೊಂದರೆಯಾಗಬಹುದು. ಶುಭಸಂಖ್ಯೆ: 9
ಕನ್ಯಾ: ನಿಮ್ಮಿಂದ ದೂರವಾದ ಜನರೇ ಪುನಃ ಸ್ನೇಹಹಸ್ತ ಚಾಚುವರು. ಅವರ ಭಾವನೆಗಳು ಶುದ್ಧವಿದ್ದಲ್ಲಿ ಸಖ್ಯ ಬೆಳೆಸಿ. ಶುಭಸಂಖ್ಯೆ: 4
ತುಲಾ :ಕೆಲವು ಕೌಟುಂಬಿಕ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ. ಯಾರ ಜಾಮೀನುಪತ್ರಕ್ಕೂ ಸಹಿ ಮಾಡಲು ಹೋಗದಿರಿ. ಶುಭಸಂಖ್ಯೆ: 5
ವೃಶ್ಚಿಕ: ನಿಮ್ಮ ಮೇಲೆ ಕೆಲವರು ಅಪನಂಬಿಕೆ ಹೊಂದಿದ್ದನ್ನು ಬಲ್ಲಿರಿ. ಆ ಅಪನಂಬಿಕೆ ಬಹು ಬೇಗ ದೂರವಾಗಲಿದೆ. ಶುಭಸಂಖ್ಯೆ: 7
ಧನಸ್ಸು: ಆತಂಕ ಎದುರಾಗುತ್ತದೆಂದು ವಿಚಲಿತರಾಗುವ ಸಾಧ್ಯತೆ ಇದೆ. ಆದರೆ ದೈವಕೃಪೆಯಿಂದ ಪರಿಹಾರ ಲಭಿಸಲಿದೆ. ಶುಭಸಂಖ್ಯೆ: 8
ಮಕರ: ಆರ್ಥಿಕ ವಿಚಾರದಲ್ಲಿ ಎಚ್ಚರ ಅಗತ್ಯ. ಅನಗತ್ಯ ಖರ್ಚಿನ ಸಂದರ್ಭ ಎದುರಾಗಬಹುದು. ಮಹಾವಿಷ್ಣುವನ್ನು ಸ್ಮರಿಸಿ. ಶುಭಸಂಖ್ಯೆ: 2
ಕುಂಭ: ನಿಮ್ಮ ನಿಲುವನ್ನು ಯಾರು ಟೀಕಿಸಿದರೂ ತರ್ಕಪೂರ್ಣವಾಗಿದ್ದಲ್ಲಿ ಹಿಂದೆ ಹೆಜ್ಜೆ ಇಡದಿರಿ. ಭಗವಂತನ ಕೃಪೆ ನಿಮಗಿದೆ. ಶುಭಸಂಖ್ಯೆ: 1
ಮೀನ: ಹಲವು ವಿಚಾರಗಳಲ್ಲಿ ಒತ್ತಡವನ್ನು ಎದುರಿಸಬೇಕಾದೀತು. ಆದರೂ ನಿಮ್ಮ ಕರ್ತವ್ಯನಿಷ್ಠೆಗೆ ಮೆಚ್ಚುಗೆ ಲಭ್ಯ. ಶುಭಸಂಖ್ಯೆ: 6