ನಿತ್ಯ ಭವಿಷ್ಯ: ಈ ರಾಶಿಯವರಿಗೆ ಪದೋನ್ನತಿ ಹೊಂದಲು ಹೆಚ್ಚಿನ ಅವಕಾಶ ಇದೆ

Nitya-Bhavishya-vvani-1-2
Published on

ಮೇಷ: ಬದಲಾವಣೆಗಾಗಿ ತುಡಿಯುತ್ತಿರುವ ನೀವು ನಿಮ್ಮ ನಿಲುವಿಗೆ ತಕ್ಕಂತಹ ಸ್ನೇಹಿತರ ನೆರವನ್ನು ಪಡೆಯಲಿದ್ದೀರಿ. ಶುಭಸಂಖ್ಯೆ: 7

ವೃಷಭ: ಗುಪ್ತ ಅಲೌಕಿಕ ವಿದ್ಯೆಗಳನ್ನು ವಶಪಡಿಕೊಳ್ಳಲು ಹೊರಟಿರುವಿರಿ. ಗ್ರಹದೋಷ ಎದುರಾಗಲಿದೆ. ಕೈಬಿಟ್ಟರೆ ಕ್ಷೇಮ. ಶುಭಸಂಖ್ಯೆ: 4

ಮಿಥುನ: ಮನೋವೈದ್ಯರು, ಇಂಜಿನಿಯರ್​ಗಳು, ಒಳಾಂಗಣ ವಿನ್ಯಾಸಕಾರರಿಗೆ ವಿಶೇಷವಾಗಿ ಉತ್ತಮ ದಿನವೆನಿಸಲಿದೆ. ಶುಭಸಂಖ್ಯೆ: 1

ಕಟಕ: ನಿಮ್ಮ ವಿಶೇಷ ಪರಿಣತಿಯ ಕೌಶಲವು ಮುಂದಿನ ದಿನಗಳ ಕುರಿತಾದ ಯೋಜನೆಗಳಿಗೆ ಸಹಾಯಕವಾಗಲಿದೆ. ಶುಭಸಂಖ್ಯೆ: 2

ಸಿಂಹ: ಸಿಟ್ಟಿನ ಭರದಲ್ಲಿ ಏನೇನೋ ಹೇಳಿ ಎಲ್ಲರ ವಿರೋಧವನ್ನು ಕಟ್ಟಿಕೊಳ್ಳಲು ಹೋಗದಿರಿ. ತಾಳ್ಮೆಯಿಂದ ಜಯವಿದೆ. ಶುಭಸಂಖ್ಯೆ: 5

ಕನ್ಯಾ: ಜಾಣರಾದರೂ ಕೆಲವೊಮ್ಮೆ ಎಡವಿ ಬೀಳುವ ಸಾಧ್ಯತೆ ಇದೆ. ಬಿಳಿಯದೆಲ್ಲ ಹಾಲೆಂಬ ಮನೋಭಾವವನ್ನು ಬಿಡಿ. ಶುಭಸಂಖ್ಯೆ: 8

ತುಲಾ: ತಿರುಮಲೇಶನನ್ನು ವಿಷ್ಣುಸಹಸ್ರನಾಮದಿಂದ ಅರ್ಚಿಸಿ. ಎದುರಾದ ಸಂಕಟಗಳಲೆಲ್ಲ ಬೇಗನೆ ದೂರವಾಗಲಿವೆ. ಶುಭಸಂಖ್ಯೆ: 9

ವೃಶ್ಚಿಕ: ಪದೋನ್ನತಿಗೆ ಸಂಬಂಧಪಟ್ಟಂತೆ ನಿಮಗೆ ಹೆಚ್ಚಿನ ಅವಕಾಶವಿದೆ. ಸರ್ಕಾರಿ ಅಧಿಕಾರಿಗಳಿಗೆ ಪ್ರಶಂಸೆ ಲಭಿಸಲಿದೆ. ಶುಭಸಂಖ್ಯೆ: 6

ಧನಸ್ಸು: ಕುಟುಂಬದ ಮುಖ್ಯ ವಿಚಾರದಲ್ಲಿ ಹಿರಿಯ ಸೋದರನ ಬೆಂಬಲ ದೊರೆಯುವುದರಿಂದ ತುಸು ನೆಮ್ಮದಿಯಿದೆ. ಶುಭಸಂಖ್ಯೆ: 3

ಮಕರ: ದೂರಪ್ರಯಾಣ ಮಾಡಲು ಹೋಗದಿರಿ. ಇಂದು ಮನರಂಜನೆಗಿಂತ ಮನೋವೇದನೆಯೇ ಎದುರಾದೀತು. ಶುಭಸಂಖ್ಯೆ: 7

ಕುಂಭ: ವೃತ್ತಿಯಲ್ಲಿ ಬದಲಾವಣೆ ಬಯಸುತ್ತಿದ್ದೀರಿ. ತಕ್ಷಣ ಬದಲಾಗದಿದ್ದರೂ ಮುಂದಿನ ದಿನಗಳಲ್ಲಿ ಒಳಿತೇ ಆಗಲಿದೆ. ಶುಭಸಂಖ್ಯೆ: 4

ಮೀನ: ಬೇರೆಯವರ ಮಾತಿಗಿಂತ ನಿಮ್ಮ ನಿರ್ಧಾರಕ್ಕೇ ಒತ್ತು ನೀಡಿದರೆ ಉತ್ತಮ. ನಿಮಗೂ ತಳಮಳ ಎದುರಾಗದು. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net