

ಮೇಷ: ಯಾವುದೋ ವಿಚಾರಕ್ಕೆ ಅಂತ್ಯ ಹಾಡಲು ಪ್ರಯತ್ನಿಸುತ್ತೀರಿ. ಕೈ ಕಟ್ಟಿ ಕುಳಿತರೆ ಕೆಲಸವು ಮುಂದೆ ಸಾಗದು. ಅದೃಷ್ಟಸಂಖ್ಯೆ: 2
ವೃಷಭ: ದುಡ್ಡು ಕಳೆದುಕೊಳ್ಳಬಹುದು. ಇಬ್ಬರ ಜಗಳ ಬಿಡಿಸುವುದಕ್ಕೆ ಮಧ್ಯಸ್ಥಿಕೆ ವಹಿಸಲು ಕರೆ ಬರಬಹುದು. ಅದೃಷ್ಟಸಂಖ್ಯೆ: 9
ಮಿಥುನ: ಮನೋರಂಜನೆಗೆ ಪ್ರಾಮುಖ್ಯತೆ ಕೊಡುತ್ತೀರಿ. ಎಲ್ಲದರಲ್ಲಿಯೂ ಹೆಚ್ಚು ಸಮಯವನ್ನು ತೆಗೆದುಕೊಳ್ಳಲಿದ್ದೀರಿ. ಅದೃಷ್ಟಸಂಖ್ಯೆ: 3
ಕಟಕ: ಅನುಮಾನಗಳು ಕಾಡುತ್ತವೆ. ಹೆಚ್ಚಿನ ಕೆಲಸ ಕಾರ್ಯಗಳು ನಿಮ್ಮ ಮೇಲೆ ಬೀಳುತ್ತವೆ. ಒತ್ತಡ ಹೆಚ್ಚು. ಅದೃಷ್ಟಸಂಖ್ಯೆ: 4
ಸಿಂಹ: ಸುಳ್ಳು ನುಡಿಯುವವರ ಒಡನಾಟ ನಿಮಗಾಗುತ್ತದೆ. ಸುಸ್ತು ಮೈ ಕೈ ನೋವು ತುಸು ಹೆಚ್ಚಾಗಬಹುದು. ಅದೃಷ್ಟಸಂಖ್ಯೆ: 9
ಕನ್ಯಾ: ಆರೋಗ್ಯದಲ್ಲಿ ಚೇತರಿಕೆ, ಉದ್ಯೋಗ ಸ್ಥಳದಲ್ಲಿ ನೆಮ್ಮದಿ ಕಾಣುತ್ತಿದೆ. ಸಾಲ ನೀಡುವಾಗ ಎಚ್ಚರ ವಹಿಸಿ. ಅದೃಷ್ಟಸಂಖ್ಯೆ: 5
ತುಲಾ: ಸ್ನೇಹಿತರಿಗೆ ಸಹಾಯ ಮಾಡುತ್ತ ನಿಮ್ಮ ಜೇಬು ಖಾಲಿ ಆಗುವ ಸಾಧ್ಯತೆಗಳಿವೆ. ಕಾಲುನೋವು ಬಂದೀತು. ಅದೃಷ್ಟಸಂಖ್ಯೆ: 1
ವೃಶ್ಚಿಕ: ದ್ವಿಚಕ್ರ ವಾಹನ ಚಾಲನೆ ಬೇಡ. ಮನೆಯಲ್ಲಿ ಮನಸ್ತಾಪ ಆಗುವ ಸಾಧ್ಯತೆ. ಇನ್ನಷ್ಟು ಮೌನವಾಗಿದ್ದರೆ ಉತ್ತಮ. ಅದೃಷ್ಟಸಂಖ್ಯೆ: 3
ಧನಸ್ಸು: ಅಪರಿಚಿತರು ನಿಮ್ಮಲ್ಲಿ ವಿಶೇಷ ಆಸಕ್ತಿ ತೋರಿಸುತ್ತಾರೆ. ಅನಿರೀಕ್ಷಿತ ಧನಲಾಭ ಆಗುವ ಸಾಧ್ಯತೆ ಸಹ ಇದೆ. ಅದೃಷ್ಟಸಂಖ್ಯೆ: 6
ಮಕರ: ಸಿಕ್ಕ ಅವಕಾಶವನ್ನು ದುರುಪಯೋಗ ಮಾಡಿಕೊಳ್ಳದಿರಿ. ನಿಮ್ಮ ಗುಪ್ತ ನಡೆ ಅನುಮಾನ ಹುಟ್ಟಿಸುತ್ತದೆ. ಅದೃಷ್ಟಸಂಖ್ಯೆ: 1
ಕುಂಭ: ಮೊದಲು ಯೋಚಿಸಿ, ಉತ್ತಮವಾದ ಮಾರ್ಗ ಅನಿಸಿದರೆ ಮುನ್ನುಗ್ಗಿ. ಸ್ನೇಹಿತರ ನೆರವಿನ ನಿರೀಕ್ಷೆ ಬೇಡ. ಅದೃಷ್ಟಸಂಖ್ಯೆ: 9
ಮೀನ: ಹಠದ ಸ್ವಭಾವದಿಂದ ಅವಕಾಶವನ್ನು ಕಳೆದುಕೊಳ್ಳುತ್ತೀರಿ. ಹೊಸ ಪ್ರಯತ್ನದಲ್ಲಿ ಬದಲಾವಣೆ ಅನಿವಾರ್ಯ. ಅದೃಷ್ಟಸಂಖ್ಯೆ: 7