ನಿತ್ಯ ಭವಿಷ್ಯ: ಈ ರಾಶಿಯವರಿಗೆ ಹೊಟ್ಟೆನೋವು ದಿನವಿಡೀ ಕಾಡಬಹುದು. ಆಪ್ತರು ಜಗಳವಾಡಬಹುದು. ಆದಷ್ಟು ಮೌನವಾಗಿರಿ

Nitya-Bhavishya-vvani-1-2-1
Published on

ಮೇಷ: ಹೀಗಾದೀತು ಎಂದುಕೊಂಡಿದ್ದರಲ್ಲೂ ವಿಘ್ನ ಬರುತ್ತದೆ. ಸ್ನೇಹಿತನ ಜತೆ ಕೆಲಸಕ್ಕೆ ಸ್ವಾತಂತ್ರ್ಯ ಸಿಗದೆ ಪೇಚಾಟ. ಅದೃಷ್ಟಸಂಖ್ಯೆ: 2

ವೃಷಭ: ಒತ್ತಡದಿಂದ ದೈನಂದಿನ ಚಟುವಟಿಕೆಗಳಿಗೆ ಸಮಯಾಭಾವ. ಪ್ರಯತ್ನಿಸಿದರೂ ಆಗದ ವಿಚಾರಗಳ ಬಗ್ಗೆ ಚಿಂತೆ. ಅದೃಷ್ಟಸಂಖ್ಯೆ: 1

ಮಿಥುನ: ಆಹಾರಸೇವನೆ, ಕುಡಿಯುವ ನೀರು ಇತ್ಯಾದಿ ಪಾನೀಯದ ವಿಚಾರದಲ್ಲೂ ಎಚ್ಚರ ಬೇಕು. ಆತ್ಮವಿಶ್ವಾಸ ಇರಲಿ. ಅದೃಷ್ಟಸಂಖ್ಯೆ: 5

ಕಟಕ: ಕೂಗಾಟ, ಜಗಳ, ರಂಪಗಳು ನಿಷ್ಪ್ರೊಜಕ. ಸಮಾಧಾನ ಹಾಗೂ ಆತುರವಿರದ ಎಚ್ಚರಿಕೆಯ ನಡೆಯೇ ಸದ್ಯ ಅಗತ್ಯವಿದೆ. ಅದೃಷ್ಟಸಂಖ್ಯೆ: 9

ಸಿಂಹ: ದೃಢ ನಿರ್ಧಾರದಿಂದ ಮುನ್ನುಗ್ಗದಿದ್ದಲ್ಲಿ ಕೆಲಸ ಆರಂಭವೇ ಆಗಲಾರದು. ತೈಲ ಬಳಸುವಾಗ ಎಚ್ಚರ ಬೇಕು. ಅದೃಷ್ಟಸಂಖ್ಯೆ: 4

ಕನ್ಯಾ: ಅನಗತ್ಯ ಚರ್ಚೆಯಿಂದ ಅಮೂಲ್ಯ ಸಮಯವನ್ನು ವ್ಯರ್ಥಗೊಳಿಸುವಿರಿ. ಓಡಾಟ, ಸುತ್ತಾಟಗಳಿಗೆ ಕರೆ ಬಂದೀತು. ಅದೃಷ್ಟಸಂಖ್ಯೆ: 3

ತುಲಾ: ಬೇಡ ಎಂದಿದ್ದನ್ನೇ ಮಾಡಲು ಹೋದರೆ ಎಡವಟ್ಟಾಗಬಹುದು. ಅತಿ ಆದರೆ ಅಮೃತವೂ ವಿಷವಾದೀತೆಂದು ನೆನಪಿಡಿ. ಅದೃಷ್ಟಸಂಖ್ಯೆ: 7

ವೃಶ್ಚಿಕ: ಎಲ್ಲ ನಾನೇ ಮಾಡಿಬಿಡುತ್ತೇನೆ ಎಂದು ಹೊರಟರೆ ವೈಫಲ್ಯ ಎದುರಾಗಬಹುದು. ಕೊಂಚ ತಾಳ್ಮೆ ಬೆಳೆಸಿಕೊಳ್ಳಿ. ಅದೃಷ್ಟಸಂಖ್ಯೆ: 9

ಧನಸ್ಸು: ಲಾಭದ ಆಸೆಯಿಂದ ಸಾಲ ಕೊಟ್ಟರೆ ನಷ್ಟ. ಯಾರದೋ ತಪ್ಪು ಮುಚ್ಚಲು ಹೋಗಿ ತಲೆ ತಗ್ಗಿಸಬೇಕಾದೀತು. ಅದೃಷ್ಟಸಂಖ್ಯೆ: 2

ಮಕರ: ನೀವು ಪಟ್ಟ ಶ್ರಮಕ್ಕೆ ಊಹಿಸದಷ್ಟು ಆರ್ಥಿಕ ಲಾಭ. ಆದರೆ ಖರ್ಚಾಗಲು ಹೆಚ್ಚು ಸಮಯವೇನೂ ಬೇಡ. ಅದೃಷ್ಟಸಂಖ್ಯೆ: 7

ಕುಂಭ: ಅಕಾರಣ ಹೊಟ್ಟೆನೋವು ದಿನವಿಡೀ ಕಾಡೀತು. ಆಪ್ತರು ಜಗಳವಾಡಬಹುದು. ಆದಷ್ಟು ಮೌನವಾಗಿರಿ. ಅದೃಷ್ಟಸಂಖ್ಯೆ: 5

ಮೀನ: ಹೇಳುವುದು, ಅರ್ಥೈಸಿಕೊಳ್ಳುವುದು, ಸಾಕಾರಗೊಳಿಸುವುದು ಬೇರೆ ಬೇರೆ ಆದೀತು. ಕಾರ್ಯಶ್ರದ್ಧೆ ಇರಲಿ. ಅದೃಷ್ಟಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net