ನಿತ್ಯ ಭವಿಷ್ಯ: ನಿಮ್ಮದು ಧಾರಾಳತನ ತೋರುವ ಗುಣವಾದರೂ ಆರ್ಥಿಕ ತೊಂದರೆಗೆ ಗುರಿಯಾಗದಿರಿ

Nitya-Bhavishya-vvani-1-2
Published on

ಮೇಷ: ಹೆಚ್ಚಿನ ಯಶಸ್ಸಿಗಾಗಿ ಮತ್ತು ನಂತರದ ಸಮಾಧಾನಕ್ಕಾಗಿ ವಿಶ್ವಾಸದಿಂದಲೇ ಕೆಲಸಗಳನ್ನು ಮಾಡಿ. ಹರ್ಷವಿದೆ. ಶುಭಸಂಖ್ಯೆ: 4

ವೃಷಭ: ನಿಮ್ಮದು ಮೌನವಾದ ಕೆಲಸ, ಆದರೆ ಪರಿಣಾಮ ಜಾಸ್ತಿ ಎಂಬುದು ಸಾಬೀತಾಗಿ ಜನರ ಅಭಿನಂದನೆ ಲಭ್ಯ. ಶುಭಸಂಖ್ಯೆ: 1

ಮಿಥುನ: ತಾಪತ್ರಯಗಳು ಹಲವಾರು. ನಿರೀಕ್ಷೆಗಿಂತ ಜಾಸ್ತಿ ಅಡೆತಡೆಗಳು ಎದುರಾದರೂ ಗುರಿಯನ್ನು ತಲುಪುತ್ತೀರಿ. ಶುಭಸಂಖ್ಯೆ: 9

ಕಟಕ: ನಿಮ್ಮದು ಒಂದು ರೀತಿಯ ಧಾರಾಳತನ ತೋರುವ ಗುಣ. ಆದರೆ ಆರ್ಥಿಕ ತೊಂದರೆಗೆ ಗುರಿಯಾಗದಿರಿ. ಶುಭಸಂಖ್ಯೆ: 2

ಸಿಂಹ: ಸಂಗಾತಿಯ ಜತೆಗಿನ ಚಿಕ್ಕಪುಟ್ಟ ವಿಚಾರಗಳೇ ಚರ್ಚೆ ಮತ್ತು ಸರ್ರನೆ ಏರಿದ ಮಾತಿನ ಕಾವಿಗೆ ದಾರಿ ಆದಾವು. ಶುಭಸಂಖ್ಯೆ: 7

ಕನ್ಯಾ: ಅಧೈರ್ಯದಿಂದ ಕುಗ್ಗಿಹೋಗದಿರಿ. ನೀವು ನಂಬುವಂತಹ ಮನೆದೇವರ ಅನುಗ್ರಹದಿಂದ ಗೆಲುವಾಗಲಿದೆ. ಶುಭಸಂಖ್ಯೆ: 3

ತುಲಾ: ಸಾಹಸ, ಮಿಂಚಿನ ಓಟ, ಗುರಿಗಾಗಿನ ಪರಿಶ್ರಮ ಇತ್ಯಾದಿಗಳು ಎಲ್ಲವೂ ಒಂದು ಮಿತಿಯಲ್ಲಿಯೇ ಇರಲಿ. ಶುಭಸಂಖ್ಯೆ: 6

ವೃಶ್ಚಿಕ: ಯಾರೂ ಸೋಲಲು ಬಯಸುವುದಿಲ್ಲ. ಆದರೆ ಅತಿಯಾದ ಆತ್ಮವಿಶ್ವಾಸವು ತೊಂದರೆಯನ್ನೇ ತಂದೀ ತು. ಶುಭಸಂಖ್ಯೆ: 1

ಧನುಸ್ಸು: ದೀಪದ ಹಣತೆಯನ್ನು ಬೆಳಗಿ ವೆಂಕಟೇಶ್ವರನನ್ನು ಭಕ್ತಿಯಿಂದ ಧ್ಯಾನಿಸಿ. ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಶುಭಸಂಖ್ಯೆ: 5

ಮಕರ: ನಿರಂತರವಾದ ಕೆಲಸ, ಓಡಾಟಗಳ ದೆಸೆಯಿಂದಾಗಿ ದಣಿವು ಕಾಣಿಸಬಹುದು. ತುಸು ವಿಶ್ರಾಂತಿ ಪಡೆಯಿರಿ. ಶುಭಸಂಖ್ಯೆ: 8

ಕುಂಭ: ಎಲ್ಲವೂ ಲೆಕ್ಕಾಚಾರದ ವ್ಯಾಪ್ತಿಯಲ್ಲಿ ಶಿಸ್ತಿನಲ್ಲಿಯೇ ಸಾಗಿರಲಿ. ಅವ್ಯವಸ್ಥೆಯಿಂದ ಖರ್ಚುಗಳು ಕೂಡ ಜಾಸ್ತಿ. ಶುಭಸಂಖ್ಯೆ: 2

ಮೀನ: ಕೆಲಸದ ಸಂದರ್ಭದಲ್ಲಿ ಉಪಯೋಗ ಮಾಡುವಂತಹ ಸಲಕರಣೆಗಳ ಬಗೆಗೆ ಹೆಚ್ಚು ಜಾಗ್ರತರಾಗಿರಿ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net